ಬೈಬಲ್ ಯೇಸುವಿನೆಡೆಗೆ ನಡೆಸುವ ಏಕೀಕೃತ ಕಥೆಯನ್ನಾಗಿ ತಿಳಿದುಕೊಳ್ಳುವಂತೆ ಜನರಿಗೆ ಸಹಾಯ ಮಾಡುವುದು
ವೀಡಿಯೊಗಳು
ಓದುವ ಯೋಜನೆಗಳು







ಬೈಬಲ್ ಪ್ರಾಜೆಕ್ಟ್ (BibleProject) ಕುರಿತು

ಬೈಬಲ್ ಪ್ರಾಜೆಕ್ಟ್ (BibleProject) ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ನೆಲೆಗೊಂಡಿರುವ, ಲಾಭರಹಿತ ಹಾಗೂ ಜನರ ದೇಣಿಗೆಯಿಂದ ಬೆಂಬಲಿತ ಸಂಸ್ಥೆಯಾಗಿದೆ. ಯೇಸು ಕ್ರಿಸ್ತನ ಕಡೆಗೆ ನಡೆಸುವ ಏಕೀಕೃತ ಕಥೆಯಾಗಿ ಬೈಬಲ್ ಅನ್ನು ಜನರು ಅನುಭವಿಸುವಂತೆ ಸಹಾಯ ಮಾಡುವ ಸಂಪನ್ಮೂಲಗಳನ್ನು ನಾವು ಸಿದ್ಧಪಡಿಸುತ್ತೇವೆ. ಬೈಬಲ್‌ನಲ್ಲಿರುವ ಆಳವಾದ ಸತ್ಯಗಳನ್ನು ಸ್ಪಷ್ಟವಾಗಿ ಮತ್ತು ಸುಲಭವಾಗಿ ಅರ್ಥವಾಗುವಂತೆ ಮಾಡುವುದು ನಮ್ಮ ಉದ್ದೇಶ. ವಿಶ್ವದ ಸಭೆಯನ್ನು ಗಮನದಲ್ಲಿಟ್ಟುಕೊಂಡು ನಾವು ಈ ಸಂಪನ್ಮೂಲಗಳನ್ನು ರೂಪಿಸುತ್ತೇವೆ. ನಮ್ಮ ಪಂಡಿತರು ವಿವಿಧ ಕ್ರೈಸ್ತ ಸಂಪ್ರದಾಯಗಳಿಂದ ಬಂದವರಾದರೂ, ಸಾಧ್ಯವಾದಷ್ಟು ಹೆಚ್ಚು ಜನರು ಬೈಬಲ್‌ನ ಏಕೀಕೃತ ಕಥೆಯನ್ನು ಅರಿತು ಅನುಭವಿಸಬೇಕು ಎಂಬ ಒಂದೇ ಉದ್ದೇಶದಲ್ಲಿ ಅವರು ಒಂದಾಗಿದ್ದಾರೆ.
2014ರಲ್ಲಿ ದೀರ್ಘಕಾಲದ ಸ್ನೇಹಿತರಾದ ಡಾ. ಟಿಮ್ ಮ್ಯಾಕಿ ಮತ್ತು ಜಾನ್ ಕಾಲಿನ್ಸ್ ಅವರು ಬೈಬಲ್ ಅಧ್ಯಯನದ ಆಳವಾದ ಜ್ಞಾನವನ್ನು ದೃಶ್ಯ ಕಥನದೊಂದಿಗೆ ಸಂಯೋಜಿಸಿ, ಜನರು ಬೈಬಲ್ ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಉಚಿತ ಇಂಗ್ಲಿಷ್ ವೀಡಿಯೊಗಳನ್ನು ರಚಿಸುವ ಮೂಲಕ ನಮ್ಮ ಪ್ರಯಾಣವನ್ನು ಆರಂಭಿಸಿದರು. ಆಗಿನಿಂದ ಬೈಬಲ್ ಪ್ರಾಜೆಕ್ಟ್ (BibleProject) 140ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಸಂಸ್ಥೆಯಾಗಿ ಬೆಳೆದಿದ್ದು, ವಿಶ್ವದಾದ್ಯಂತದ ಸ್ಥಳೀಯ ಭಾಷಿಕರು ಮತ್ತು ತಂಡಗಳ ಸಹಕಾರದಿಂದ 50ಕ್ಕೂ ಹೆಚ್ಚು ಭಾಷೆಗಳು ಹಾಗೂ ಉಪಭಾಷೆಗಳಲ್ಲಿ ಸಾವಿರಾರು ವೀಡಿಯೊಗಳನ್ನು ಬಿಡುಗಡೆ ಮಾಡಿದೆ. ಪವಿತ್ರ ಶಾಸ್ತ್ರದ ಬಗ್ಗೆ ನಮ್ಮ ದೃಷ್ಟಿಕೋನವನ್ನು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.
ನಿಮ್ಮಂಥ ಉದಾರ ಬೆಂಬಲಿಗರ ಸಹಕಾರದಿಂದ ನಾವು ಸಿದ್ಧಪಡಿಸುವ ಎಲ್ಲವೂ ಉಚಿತವಾಗಿ ಲಭ್ಯವಿದೆ.