Back

ಬಳಕೆಯ ನಿಯಮಗಳು

ಬೈಬಲ್‌ಪ್ರಾಜೆಕ್ಟ್

ಪರಿಷ್ಕರಿಸಿರುವುದು ಸೆಪ್ಟೆಂಬರ್, 2019

ಬೈಬಲ್‌ಪ್ರಾಜೆಕ್ಟ್‌ಗೆ ಸ್ವಾಗತ -- ನೀವು ಭೇಟಿ ನೀಡುತ್ತಿರುವುದು ನಮಗೆ ಸಂತಸ ಉಂಟುಮಾಡಿದೆ!

ನಾವು ರಚಿಸುವುದನ್ನು ವಿಶ್ವಾದ್ಯಂತ ಸಾಧ್ಯವಾದಷ್ಟು ಜನರಿಗೆ ಮತ್ತು ಗುಂಪುಗಳಿಗೆ ಹಂಚಿಕೊಳ್ಳುವುದರಲ್ಲಿ ಬೈಬಲ್‌ಪ್ರಾಜೆಕ್ಟ್ ನಂಬಿಕೆ ಇರಿಸಿದೆ. ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಮತ್ತು ಬೈಬಲ್ ಕುರಿತು ಚರ್ಚಿಸುವುದಕ್ಕಾಗಿ ಧಾರ್ಮಿಕ ಮುಖಂಡರು ಮತ್ತು ಶಿಕ್ಷಕರು ನಮ್ಮ ವೀಡಿಯೊಗಳು, ಪೋಸ್ಟರ್‌ಗಳು, ಟಿಪ್ಪಣಿಗಳು ಮತ್ತು ಇತರ ಕಂಟೆಂಟ್ ಅನ್ನು ಉಚಿತವಾಗಿ ಬಳಸಬೇಕು ಎಂದು ನಾವು ಬಯಸುತ್ತೇವೆ. ಈ ಬಳಕೆಯ ನಿಯಮಗಳು (ಕೆಲವೊಮ್ಮೆ ಕೇವಲ "ನಿಯಮಗಳು" ಎಂದು ಉಲ್ಲೇಖಿಸಲಾಗುತ್ತದೆ) ಆ ಗುರಿ ಸಾಧಿಸುವ ಉದ್ದೇಶ ಹೊಂದಿವೆ, ಜೊತೆಗೆ ಅದೇ ವೇಳೆ ದುರ್ಬಳಕೆ ಅಥವಾ ದುರುಪಯೋಗದಿಂದ ನಮ್ಮ ಕಂಟೆಂಟ್ ಮತ್ತು ಖ್ಯಾತಿಯನ್ನು ರಕ್ಷಿಸಿಕೊಳ್ಳುವ ಉದ್ದೇಶವನ್ನೂ ಹೊಂದಿವೆ. ಒಂದು ವೇಳೆ ನೀವು ನಮ್ಮ ರಚನೆಗಳನ್ನು ಬಳಸಲು ಇಚ್ಛಿಸಿದರೆ, ನೀವು ಈ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ನಾವು ಯುನೈಟೆಡ್ ಸ್ಟೇಟ್ಸ್‌ನ ಒರೆಗಾನ್ ರಾಜ್ಯದ ಕಾನೂನುಗಳಡಿ ಸಂಘಟಿತವಾದ ಲಾಭರಹಿತ ನಿಗಮವಾಗಿದ್ದೇವೆ, ಆದರೆ ಜಾಗತಿಕ ದೃಷ್ಟಿಕೋನ ಹೊಂದಲು ನಾವು ಪರಿಶ್ರಮಪಡುತ್ತೇವೆ. ಈ ನಿಯಮಗಳಲ್ಲಿ, ನಾವು ನಮ್ಮನ್ನು "ನಾವು", "ನಮಗೆ". "ನಮ್ಮ", "ಟಿಬಿಪಿ", "ದಿ ಬೈಬಲ್ ಪ್ರಾಜೆಕ್ಟ್", ಅಥವಾ ಖಂಡಿತವಾಗಿ "ಬೈಬಲ್‌ಪ್ರಾಜೆಕ್ಟ್‌" ಎಂದು ಉಲ್ಲೇಖಿಸಬಹುದು.

ನಮ್ಮ ವೆಬ್‌ಸೈಟ್‌ಗಳು, ಸಾಮಾಜಿಕ ಮಾಧ್ಯಮ ಪುಟಗಳು, ಚಾನೆಲ್‌ಗಳು, ಮತ್ತು ಇತರ ಯಾವುದೇ ಟಿಬಿಪಿ ಆನ್‌ಲೈನ್ ಅಸ್ತಿತ್ವದ (ಸಮಗ್ರವಾಗಿ "ವೆಬ್‌ಸೈಟ್") ನಿಮ್ಮ ಬಳಕೆಯನ್ನು, ನಮ್ಮ ಗೌಪ್ಯತೆ ಸೂಚನೆ ಜೊತೆಗೆ ಈ ನಿಯಮಗಳು ನಿಯಂತ್ರಿಸುತ್ತವೆ. ನೀವು ವೆಬ್‌ಸೈಟ್ ಬಳಸುವುದನ್ನು ಆರಂಭಿಸುವುದಕ್ಕೆ ಮುನ್ನ ದಯವಿಟ್ಟು ಈ ನಿಯಮಗಳನ್ನು ಗಮನವಿಟ್ಟು ಓದಿ

 1. ಸ್ವೀಕಾರ

ಸ್ವೀಕಾರ

ನಮ್ಮ ಸೇವೆಗಳನ್ನು ಪ್ರವೇಶಿಸಲು, ಬ್ರೌಸ್ ಮಾಡಲು, ಅಥವಾ ಬಳಸಲು, ವೆಬ್‌ಸೈಟ್, ಕಂಟೆಂಟ್ (ಕೆಳಗೆ ವ್ಯಾಖ್ಯಾನಿಸಲಾಗಿದೆ), ಅಥವಾ ನಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ನೀವು ಬಳಸುತ್ತಿರುವ ತನಕ ಈ ನಿಯಮಗಳಿಗೆ ಷರತ್ತುರಹಿತವಾಗಿ ಬದ್ಧರಾಗಿರುವುದನ್ನು ನೀವು ಸ್ವೀಕರಿಸಬೇಕು ಮತ್ತು ಒಪ್ಪಬೇಕು. ಒಂದು ವೇಳೆ ನೀವು ನಿಯಮಗಳಿಗೆ ಒಪ್ಪದಿದ್ದರೆ ಮತ್ತು ಸ್ವೀಕರಿಸದಿದ್ದರೆ, ನೀವು ಸೇವೆಯನ್ನು ಬಳಸುವಂತಿಲ್ಲ. ನಿಮ್ಮ ಸ್ವೀಕಾರವು ಬಾಧ್ಯತೆಯ ಕಾನೂನು ಒಪ್ಪಂದವನ್ನು ರಚಿಸುತ್ತದೆ. ವೆಬ್‌ಸೈಟ್ ಮತ್ತು ಕಂಟೆಂಟ್‌ನ ನಿಮ್ಮ ಬಳಕೆಗೆ ಸಂಬಂಧಿಸಿ ನಿಮ್ಮ ಮತ್ತು ಬೈಬಲ್‌ಪ್ರಾಜೆಕ್ಟ್ ನಡುವೆ ನಮ್ಮ ನಿಯಮಗಳು ಸಂಪೂರ್ಣ ಒಪ್ಪಂದವನ್ನು ರಚಿಸುತ್ತವೆ ಹಾಗೂ ಕಾನೂನಿನಿಂದ ಅನುಮತಿಸಿರುವ ಪೂರ್ಣ ಪ್ರಮಾಣದವರಗೆ ಕಾರ್ಯಾಚರಿಸುತ್ತವೆ. ನಮ್ಮ ನಿಯಮಗಳಲ್ಲಿನ ಯಾವುದೇ ಹಕ್ಕು ಅಥವಾ ನಿಬಂಧನೆಯನ್ನು ಚಲಾವಣೆ ಮಾಡಲು ನಮಗೆ ಸಾಧ್ಯವಾಗದಿದ್ದರೆ ಅದು ಆ ಹಕ್ಕು ಅಥವಾ ನಿಬಂಧನೆಯ ವಿನಾಯಿತಿಯಂತೆ ಕಾರ್ಯನಿರ್ವಹಿಸುವುದಿಲ್ಲ.

ಈ ನಿಯಮಗಳು ಅಥವಾ ಸೇವೆಗಳಿಗೆ ಸಂಬಂಧಿಸಿ ನೀವು ಯಾವುದೇ ಪ್ರಶ್ನೆಗಳು, ಅಭಿಪ್ರಾಯಗಳು ಅಥವಾ ಆತಂಕಗಳನ್ನು ಹೊಂದಿದ್ದರೆ, ದಯವಿಟ್ಟು webmaster@jointhebibleproject.com ನಲ್ಲಿ ನಮ್ಮನ್ನು ಸಂಪರ್ಕಿಸಿ ಅಥವಾ ಶುಲ್ಕರಹಿತ ಸಂಖ್ಯೆ  (855) 700-9109 ಗೆ ಕರೆಮಾಡಿ.

ಅವಲೋಕನ

ಬೈಬಲ್‌ಪ್ರಾಜೆಕ್ಟ್ ಯಾವುದೇ ನಿರ್ದಿಷ್ಟ ಕ್ರೈಸ್ತ ಪಂಗಡ ಅಥವಾ ಸಂಪ್ರದಾಯದ ಭಾಗವಾಗಿಲ್ಲ. ಜನರ ಧಾರ್ಮಿಕ ಅಥವಾ ಧಾರ್ಮಿಕವಲ್ಲದ ನಂಬಿಕೆಗಳ ಪರಿಗಣನೆಯಿಲ್ಲದೆ, ಎಲ್ಲ ಹಿನ್ನೆಲೆಗಳ ಜನರು ನಮ್ಮ ಕೆಲಸದಲ್ಲಿ ಮೌಲ್ಯವನ್ನು ಕಾಣುತ್ತಾರೆ ಎಂದು ನಾವು ಆಶಿಸುತ್ತೇವೆ. ಯಾವುದೇ ನಿರ್ದಿಷ್ಟ ಕ್ರೈಸ್ತ ಸಂಪ್ರದಾಯದ ವಿಶಿಷ್ಟ ಬೋಧನೆಗಳನ್ನು ಪ್ರಚಾರ ಮಾಡುವುದು ನಮ್ಮ ಗುರಿಯಲ್ಲ, ಬದಲಾಗಿ ಬೈಬಲ್‌ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂದರ್ಭವನ್ನು ಗಂಭೀರವಾಗಿ ಪರಿಗಣಿಸುವ ಕಾವ್ಯಾತ್ಮಕ ಮತ್ತು ನಿರೂಪಣಾತ್ಮಕ ಓದುವಿಕೆಯಿಂದ ಉದ್ಭವಿಸುವ ಮತಧರ್ಮಶಾಸ್ತ್ರದ ಥೀಮ್‌ಗಳು ಮತ್ತು ವಿಚಾರಗಳನ್ನು ಅನ್ವೇಷಿಸುವುದು ನಮ್ಮ ಗುರಿಯಾಗಿದೆ. ಕೆಲವು ಸಂದರ್ಭಗಳಲ್ಲಿ ನಮ್ಮ ನಿರೂಪಣಾತ್ಮಕ ಮತ್ತು ಮತಧರ್ಮಶಾಸ್ತ್ರದ ಬದ್ಧತೆಗಳು ಸ್ಪಷ್ಟವಾಗಿ ಕಾಣಿಸುವ ರೀತಿ ಬೈಬಲ್‌ನ ಭಾಗಗಳ ಅನ್ವೇಷಣೆಯನ್ನು ನಾವು ಮಾಡಬಹುದು, ಆದರೆ ಕಥೆ ಮತ್ತು ಧರ್ಮಗ್ರಂಥಗಳ ಮತಧರ್ಮಶಾಸ್ತ್ರದ ದಾವೆಗಳು ಸ್ವತಃ ಸಂವಹನಗೊಳ್ಳಲು ಅವಕಾಶ ಕಲ್ಪಿಸುವುದು ನಮ್ಮ ಮುಖ್ಯ ಗುರಿಯಾಗಿದೆ.

ಬೈಬಲ್‌ನ ವ್ಯಾಖ್ಯಾನ, ಹಾಗೂ ಆ ವ್ಯಾಖ್ಯಾನದ ಕೆಲಸಕ್ಕಾಗಿ ಸಂಪನ್ಮೂಲಗಳು ಮತ್ತು ವಿಧಾನಗಳ ಆಯ್ಕೆಯಲ್ಲಿ ವಿಶ್ವದ ಕ್ರೈಸ್ತ ಚರ್ಚ್‌ಗಳ ಐಕ್ಯತೆಗಾಗಿ ಬದ್ಧರಾಗಿರುವುದರಿಂದ, ಒಂದು ಅಂಶವನ್ನು ಸಾಬೀತುಪಡಿಸುವುದಕ್ಕಾಗಿ ನಮ್ಮ ಕಂಟೆಂಟ್ ಅನ್ನು ಅದರ ಸಂದರ್ಭದಿಂದ ಪ್ರತ್ಯೇಕಿಸುವ ಜನರ ಬಗ್ಗೆ ನಾವು ವಿಶೇಷವಾಗಿ ಆತಂಕ ಹೊಂದಿದ್ದೇವೆ. ಇಷ್ಟೇ ಅಲ್ಲದೆ, ನಾವು ಲಾಭರಹಿತ ಸಂಸ್ಥೆಯಾಗಿರುವುದರಿಂದ, ನಮ್ಮ ಕಂಟೆಂಟ್ ಬಳಸಿಕೊಂಡು ಯಾವುದೇ ವ್ಯಕ್ತ ಅಥವಾ ಸಂಸ್ಥೆ ಲಾಭ ಪಡೆಯುವುದಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸುತ್ತೇವೆ. ಕಂಟೆಂಟ್‌ನಿಂದ ಲಾಭ ಪಡೆಯಲು ಯತ್ನಿಸುವುದು, ಅಥವಾ ಸಂದೇಶ, ತೀರ್ಮಾನಗಳು, ಹಸ್ತಕ್ಷೇಪಗಳು, ಅಥವಾ ಕಂಟೆಂಟ್‌ನ ಹೂರಣವನ್ನು ಮಾರ್ಪಾಡು ಮಾಡುವ ರೀತಿ ನಮ್ಮ ಕಂಟೆಂಟ್ ಬಳಸುವುದರಿಂದ, ಈ ನಿಯಮಗಳ ಉಲ್ಲಂಘನೆಯಾಗುತ್ತದೆ ಮತ್ತು ಕಂಟೆಂಟ್ ಬಳಸುವ ನಿಮ್ಮ ಹಕ್ಕನ್ನು ಸಮಾಪ್ತಿಗೊಳಿಸುತ್ತದೆ.

ನಮ್ಮ ವೀಡಿಯೊಗಳು, ಪೋಸ್ಟರ್‌ಗಳು, ಟಿಪ್ಪಣಿಗಳು, ಪಾಡ್‌ಕಾಸ್ಟ್‌ಗಳು ಮತ್ತ ಇತರ ಆಡಿಯೊ ರೆಕಾರ್ಡಿಂಗ್‌ಗಳು ಮತ್ತು bibleproject.com ನಂಥ ನಮ್ಮ ವೆಬ್‌ಸೈಟ್‌ಗಳಲ್ಲಿ ಕಂಡುಬರುವ ಯಾವುದೇ ಸಾಮಗ್ರಿಗಳು ಮತ್ತು ಕಾರ್ಯವಿಧಾನಗಳು , ಹಾಗೂ ಯೂಟ್ಯೂಬ್ ಮತ್ತು ವಿಮಿಯೊ ಚಾನೆಲ್‌ಗಳಂಥ ನಮ್ಮ ಸಾಮಾಜಿಕ ಮಾಧ್ಯಮ ಪುಟಗಳು ಅಥವಾ ಮಾಧ್ಯಮ ಸ್ಟ್ರೀಮಿಂಗ್ ಪುಟಗಳಲ್ಲಿನ ಅಂಥ ಕಂಟೆಂಟ್‌ಗಳ (ಸಮಗ್ರವಾಗಿ, "ಕಂಟೆಂಟ್") ನಿಮ್ಮ ಬಳಕೆಗೆ ಈ ನಿಯಮಗಳು ಅನ್ವಯಿಸುತ್ತವೆ. ಈ ನಿಯಮಗಳಲ್ಲಿ ಸ್ಪಷ್ಟವಾಗಿ ಹೇಳಿರುವುದನ್ನು ಹೊರತುಪಡಿಸಿ ಕಂಟೆಂಟ್ ಅನ್ನು ಬಳಸುವಂತಿಲ್ಲ. ಇತರ ಕಂಪನಿಗಳು ಟಿಬಿಪಿಗೆ ಹೋಸ್ಟಿಂಗ್ ಅಥವಾ ಇತರ ಸೇವೆಗಳನ್ನು (ಸಮಗ್ರವಾಗಿ, "ಸೇವಾ ಪೂರೈಕೆದಾರರು) ಒದಗಿಸುವ ಮಟ್ಟಿಗೆ, ಯಾವುದೇ ವೆಬ್‌ಸೈಟ್‌ಗಳು, ಸಾಮಾಜಿಕ ಮಾಧ್ಯಮ ಪುಟಗಳು, ಚಾನೆಲ್‌ಗಳು ಅಥವಾ ಕಂಟೆಂಟ್ ಕಾಣಿಸುವ ಇತರ ಆನ್‌ಲೈನ್ ತಾಣಗಳಿಗೆ ಆ ಸೇವಾ ಪೂರೈಕೆದಾರರ ಬಳಕೆಯ ನಿಯಮಗಳು ಅನ್ವಯಿಸುವ ಮಟ್ಟಿಗೆ, ಈ ನಿಯಮಗಳು ಆ ನಿಯಮಗಳಿಗೆ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿವೆ.

ವೆಬ್‌ಸೈಟ್ ಅಥವಾ ಕಂಟೆಂಟ್ ಅನ್ನು ಪ್ರವೇಶಿಸಲು, ಬ್ರೌಸ್ ಮಾಡಲು ಅಥವಾ ಬಳಸಲು, ಈ ನಿಯಮಗಳಿಂದ ಬಾಧ್ಯತೆಗೆ ಒಳಗಾಗಲು ನೀವು ಷರತ್ತುರಹಿತವಾಗಿ ಒಪ್ಪಬೇಕು. ಒಂದು ವೇಳೆ ನೀವು ಈ ನಿಯಮಗಳಿಗೆ ಒಪ್ಪದಿದ್ದರೆ, ನೀವು ಕಂಟೆಂಟ್ ಅಥವಾ ವೆಬ್‌ಸೈಟ್ ಅಥವಾ ಅವು ಒದಗಿಸುವ ಯಾವುದೇ ಸೇವೆಗಳು ಅಥವಾ ಕಾರ್ಯವಿಧಾನಗಳನ್ನು ಬಳಸುವಂತಿಲ್ಲ.

ನೋಂದಣಿ

ಟಿಬಿಪಿಯ ಕಾರ್ಯಕ್ರಮಗಳು ಮತ್ತು ಸೇವೆಗಳ ಬಗ್ಗೆ ನಮ್ಮ ವೆಬ್‌ಸೈಟ್ ನಿಮಗೆ ಸಾಮಾನ್ಯ ಮಾಹಿತಿಯನ್ನು ಒದಗಿಸುತ್ತದೆ. ಸುದ್ದಿಪತ್ರಗಳು ಮತ್ತು ಇತರ ಮಾಹಿತಿಯನ್ನು ಸ್ವೀಕರಿಸಲು, ಆನ್‌ಲೈನ್ ಖರೀದಿ ಮಾಡಲು ಅಥವಾ ದೇಣಿಗೆ ನೀಡಲು, ಕೆಲವು ಕಂಟೆಂಟ್‌ಗಳನ್ನು ಪ್ರವೇಶಿಸಲು ಅಥವಾ ಬಳಸಲು, ಅಥವಾ ವೆಬ್‌ಸೈಟ್‌ನಲ್ಲಿರುವ ಇತರ ವೈಶಿಷ್ಟ್ಯಗಳನ್ನು ಪ್ರವೇಶಿಸಲು ಮತ್ತು ಬಳಸಲು, ಇವೆಲ್ಲವನ್ನೂ ಈ ನಿಯಮಗಳಡಿ ಮಾಡಲು ನೀವು ನಮ್ಮೊಂದಿಗೆ ನೋಂದಣಿ ಮಾಡಿಕೊಳ್ಳಬಹುದು. ನಮ್ಮೊಂದಿಗೆ ನೋಂದಣಿ ಮಾಡಿಕೊಳ್ಳುವ ಮೂಲಕ, (ಎ) ಟಿಬಿಪಿಯೊಂದಿಗೆ ಬಾಧ್ಯತೆಯ ಒಪ್ಪಂದ ರಚಿಸಿಕೊಳ್ಳಲು ನೀವು ಸಮರ್ಥರಿದ್ದೀರಿ ಮತ್ತು ಸೂಕ್ತ ಅಧಿಕಾರ ಮತ್ತು ದೃಢೀಕರಣವನ್ನು ಹೊಂದಿದ್ದೀರಿ; (ಬಿ) ನಿಮ್ಮ ಬಗ್ಗೆ ನೀವು ಒದಗಿಸುವ ಮಾಹಿತಿ ಸತ್ಯ, ನಿಖರ, ಪ್ರಸ್ತುತ ಮತ್ತು ಸಂಪೂರ್ಣವಾಗಿದೆ; ಹಾಗೂ (ಸಿ) ನಿಮಗೆ ನಾವು ಜಾರಿ ಮಾಡುವ ರುಜುವಾತುಗಳನ್ನು ನೀವು ಕೇವಲ ವೆಬ್‌ಸೈಟ್‌ನ ಕೆಲವು ಭಾಗಗಳ ಸೀಮಿತ ಪ್ರವೇಶಕ್ಕಾಗಿ ಮಾತ್ರ ಬಳಸುತ್ತೀರಿ ಎನ್ನುವುದಕ್ಕೆ ಒಪ್ಪುತ್ತೀರಿ. ಯಾವುದೇ ಕಾರಣದಿಂದ ವೆಬ್‌ಸೈಟ್‌ಗೆ ನಿಮ್ಮ ಪ್ರವೇಶವನ್ನು ಟಿಬಿಪಿ ಈ ಹಿಂದೆ ಸಮಾಪ್ತಿಗೊಳಿಸಿದ್ದರೆ, ಯಾವುದೇ ಪರಿಸ್ಥಿತಿಯಲ್ಲಿ ನೀವು ವೆಬ್‌ಸೈಟ್‌ ಅನ್ನು ಪ್ರವೇಶಿಸುವಂತಿಲ್ಲ ಅಥವಾ ಬಳಸುವಂತಿಲ್ಲ.

ಒಂದು ವೇಳೆ ನೀವು ನಮ್ಮೊಂದಿಗೆ ನೋಂದಣಿ ಮಾಡಿಕೊಂಡರೆ, ನಿಮ್ಮ ಖಾತೆ ಮತ್ತು ಪಾಸ್‌ವರ್ಡ್‌ಗೆ ಸಂಬಂಧಿಸಿದ ಎಲ್ಲ ವಿಷಯಗಳು‌ (ಅವುಗಳ ಗೌಪ್ಯತೆ ನಿರ್ವಹಿಸುವಿಕೆ ಸೇರಿದಂತೆ) ಹಾಗೂ ನಿಮ್ಮ ಅನುಮತಿಯೊಂದಿಗೆ ಅಥವಾ ಇಲ್ಲದೆ, ಇತರರಿಂದ ನಿಮ್ಮ ಖಾತೆಯ ಬಳಕೆಗೆ ನೀವು ಜವಾಬ್ದಾರರಾಗಿರುತ್ತೀರಿ. ನಿಮ್ಮ ಖಾತೆಯನ್ನು ಬಳಸುತ್ತಿರುವ ಇತರರು ಈ ನಿಯಮಗಳ ಅನುಸರಣೆ ಮಾಡುತ್ತಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ  ವಹಿಸಿಕೊಳ್ಳುತ್ತೀರಿ ಎನ್ನುವುದಕ್ಕೆ ನೀವು ಒಪ್ಪುತ್ತೀರಿ. ನಿಮ್ಮ ಖಾತೆಯ ಯಾವುದೇ ಅನಧಿಕೃತ ಬಳಕೆಯಿಂದ ಉಂಟಾಗುವ ಯಾವುದೇ ನಷ್ಟಗಳಿಗೆ ಬೈಬಲ್‌ಪ್ರಾಜೆಕ್ಟ್ ಹೊಣೆಗಾರವಾಗಿರುವುದಿಲ್ಲ.

ಯಾವುದೇ ಸುರಕ್ಷತೆಯ ಉಲ್ಲಂಘನೆ ಅಥವಾ ನಿಮ್ಮ ಖಾತೆಯ ಅನಧಿಕೃತ ಬಳಕೆಯ ಬಗ್ಗೆ "ಅನಧಿಕೃತ ಬಳಕೆ" ಎನ್ನುವ ವಿಷಯ ಶೀರ್ಷಿಕೆಯೊಂದಿಗೆ webmaster@jointhebibleproject.com ಗೆ ಇಮೇಲ್ ಕಳುಹಿಸುವ ಮೂಲಕ ನೀವು ನಮಗೆ ಸೂಚನೆ ನೀಡಬೇಕು. ಒಂದು ವೇಳೆ ನೀವು ನಮಗೆ ಸೂಚನೆ ನೀಡಿದ್ದರೂ ಸಹ, ನಿಮ್ಮ ಖಾತೆಯ ಬಳಕೆಯಿಂದ ಉಂಟಾಗುವ ಯಾವುದೇ ಶುಲ್ಕಗಳು ಸೇರಿದಂತೆ, ನಿಮ್ಮ ಪ್ರವೇಶ ರುಜುವಾತುಗಳನ್ನು ಬಳಸಿಕೊಂಡು ನಡೆಯುವ ಯಾವುದೇ ಚಟುವಟಿಕೆಗಳಿಗೆ ನೀವು ಜವಾಬ್ದಾರರಾಗಿರುತ್ತೀರಿ. ನೊಟೀಸ್ ನೀಡದೆ, ಯಾವುದೇ ಸಮಯದಲ್ಲಿ ವೆಬ್‌ಸೈಟ್ ಅಥವಾ ಅದರ ಯಾವುದೇ ಭಾಗಕ್ಕೆ ನಿಮ್ಮ ಪ್ರವೇಶವನ್ನು ನಮ್ಮ ಸ್ವಂತ ವಿವೇಚನೆ ಮೇರೆಗೆ ಸಮಾಪ್ತಿಗೊಳಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.

ಬೌದ್ಧಿಕ ಸ್ವತ್ತಿನ ಮಾಲೀಕತ್ವ

ಕಂಟೆಂಟ್‌ನಲ್ಲಿರುವ ಕೃತಿಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು, ಮತ್ತು ಇತರ ಬೌದ್ಧಿಕ ಸ್ವತ್ತು ಹಕ್ಕುಗಳು ಅಥವಾ ಸಾಫ್ಟ್‌ವೇರ್, ಬರಹ, ಗ್ರಾಫಿಕ್ಸ್, ಲೋಗೋಗಳು, ಬಟನ್ ಐಕಾನ್‌ಗಳು, ಚಿತ್ರಗಳು, ಆಡಿಯೊ ಕ್ಲಿಪ್‌ಗಳು, ವೀಡಿಯೊ ಕ್ಲಿಪ್‌ಗಳು, ಡೇಟಾ ಸಂಕಲನಗಳು ಮತ್ತು ಸಂಗ್ರಹ, ಸಂಕಲನಗಳು ಮತ್ತು ಒಟ್ಟಾರೆ ವೆಬ್‌ಸೈಟ್‌ನ ವಿನ್ಯಾಸ ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ವೆಬ್‌ಸೈಟ್‌ನಲ್ಲಿರುವ ಇತರ ಯಾವುದೇ ಮಾಹಿತಿಯು (ಸಮಗ್ರವಾಗಿ "ಬೌದ್ಧಿಕ ಸ್ವತ್ತು"), ಟಿಬಿಪಿಯ ಮಾಲೀಕತ್ವದ್ದಾಗಿರುತ್ತದೆ ಮತ್ತು ಪರವಾನಗಿಯಡಿ ಇರುತ್ತದೆ ಮತ್ತು ಬೌದ್ಧಿಕ ಸ್ವತ್ತಿಗೆ ಸಂಬಂಧಿಸಿ ಎಲ್ಲ ಹಕ್ಕುಗಳನ್ನು ನಾವು ಕಾಯ್ದಿರಿಸಿದ್ದೇವೆ.

ಟಿಬಿಪಿ ಟ್ರೇಡ್‌ಮಾರ್ಕ್‌ಗಳು

ಕೆಲವು ಕಂಟೆಂಟ್‌ನಲ್ಲಿನ ಕೃತಿಸ್ವಾಮ್ಯಗಳನ್ನು ಈ ನಿಯಮಗಳಡಿ ಕೆಲವು ನಿರ್ದಿಷ್ಟ ಬಳಕೆಗಳಿಗಾಗಿ ಪರವಾನಗಿ ಹೊಂದಿವೆಯಾದರೂ, ಯಾವುದೇ ಟ್ರೇಡ್‌ಮಾರ್ಕ್‌ ಅಥವಾ ಸೇವಾ ಮುದ್ರೆ ಪರವಾನಗಿ ಇತ್ಯಾದಿಗಳನ್ನು ಈ ನಿಯಮಗಳು ನಿಮಗೆ ಒದಗಿಸುವುದಿಲ್ಲ. ಅಂದರೆ U.S. ಕಾಯ್ದೆಯಡಿ ಉಲ್ಲೇಖಕ್ಕಾಗಿನ ನ್ಯಾಯೋಚಿತ ಬಳಕೆಗೆ ಅರ್ಹವಾಗದ ಯಾವುದೇ ರೀತಿಯಲ್ಲಿ ನೀವು ನಮ್ಮ ಹೆಸರು, ಲೋಗೋ, ಅಥವಾ ಇತರ ಟಿಬಿಪಿ ಐಡೆಂಟಿಫೈಯರ್ ಅನ್ನು ಬಳಸುವಂತಿಲ್ಲ. ಟಿಬಿಪಿ ಮತ್ತು ನಮ್ಮ ಕಂಟೆಂಟ್ ಬಳಕೆದಾರರ ನಡುವಿನ ಸಂಬಂಧದ ಬಗ್ಗೆ ಯಾರೂ ಗೊಂದಲಗೊಳ್ಳಬಾರದು ಎನ್ನುವ ಕಾರಣಕ್ಕಾಗಿ ಈ ನಿಯಮ ರೂಪಿಸಲಾಗಿದೆ, ಉದಾಹರಣೆಗೆ ಕೇವಲ ಈ ನಿಯಮಗಳಡಿ, ಮತ್ತು ಪ್ರತ್ಯೇಕ ಒಪ್ಪಂದವಿಲ್ಲದೆ ಕಂಟೆಂಟ್ ಬಳಸುತ್ತಿರುವ ಒಬ್ಬರನ್ನು ಟಿಬಿಪಿ ಪ್ರೋತ್ಸಾಹಿಸುತ್ತದೆ  ಅಥವಾ ಪ್ರಾಯೋಜಿಸುತ್ತದೆ ಎಂದು ಭಾವಿಸಲು ಕಾರಣವಾಗುವಂಥದ್ದು. ಉಲ್ಲೇಖಕ್ಕಾಗಿನ ನ್ಯಾಯೋಚಿತ ಬಳಕೆ ಆಚೆಗೆ ನಮ್ಮ ಟ್ರೇಡ್‌ಮಾರ್ಕ್‌ಗಳ ಬಳಕೆಯನ್ನು ಮಾಡಲು ನೀವು ಬಯಸಿದರೆ, ವಿಶೇಷ ಬಳಕೆಯ ಪರವಾನಗಿ ನೀಡುವಂತೆ ವಿನಂತಿಸಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ಅಂಥ ಪರವಾನಗಿಗಳು ಸಾಮಾನ್ಯವಾಗಿ ಇರುವುದಿಲ್ಲ, ಆದರೆ ವಿಶೇಷ ಪರಿಸ್ಥಿತಿಗಳಡಿ ನೀಡಬಹುದು. ನಮ್ಮ ಯಾವುದೇ ಮುದ್ರೆಗಳ ಬಳಕೆಗೆ ಪರವಾನಗಿಯನ್ನು ವಿಧಿವತ್ತಾಗಿ ದೃಢೀಕೃತರಾಗಿರುವ ನಮ್ಮ ಒಬ್ಬ ಅಧಿಕಾರಿಯ ಸಹಿ ಹಾಕಿರುವ ಔಪಚಾರಿಕ ಲಿಖಿತ ಪರವಾನಗಿ ಒಪ್ಪಂದದ ಮೂಲಕ ಮಾತ್ರ ನೀಡಬಹುದು. ಯಾವುದೇ ಹಕ್ಕುಗಳನ್ನು ನೀಡಲು ಅಥವಾ ನಮ್ಮ ಯಾವುದೇ ಮುದ್ರೆಗಳ ಬಳಕೆಯನ್ನು ಅನುಮತಿಸಲು ಬೇರೆ ಯಾವುದೇ ವ್ಯಕ್ತಿ ಅಥವಾ ಏಜೆಂಟ್ ಅಧಿಕಾರ ಹೊಂದಿರುವುದಿಲ್ಲ, ಮತ್ತು ಅಂಥ ಯಾವುದೇ ಪ್ರಯತ್ನದ ಮಂಜೂರಾತಿ ಅಥವಾ ಸಂಬಂಧಿತ ಭರವಸೆ ಅಥವಾ ಮಾರ್ಗದರ್ಶನ ಅಮಾನ್ಯವಾಗಿರುತ್ತದೆ.

ವೆಬ್‌ಸೈಟ್ ಮತ್ತು ಕಂಟೆಂಟ್‌ನ ನಿಮ್ಮ ಬಳಕೆ

ವೆಬ್‌ಸೈಟ್‌ನ ಬಳಕೆದಾರರಾಗಿ, ಈ ನಿಯಮಗಳಲ್ಲಿ ವಿವರಿಸಿರುವಂತೆ ವೆಬ್‌ಸೈಟ್ ಪ್ರವೇಶಿಸಲು, ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ನೋಡಲು, ವೆಬ್‌ಸೈಟ್‌ನೊಂದಿಗೆ ಸಂವಹನ ನಡೆಸಲು ನೀವು ಹಿಂಪಡೆಯಬಹುದಾದ, ವರ್ಗಾಯಿಸಲು ಸಾಧ್ಯವಿಲ್ಲದ, ಅನನ್ಯವಲ್ಲದ ಪರವಾನಗಿಯನ್ನು ಹೊಂದಿರುತ್ತೀರಿ. ಇನ್‌ಪುಟ್‌ಗಳ ಅಗತ್ಯವಿರುವ ಯಾವುದೇ ಪ್ರತಿಕ್ರಿಯಾತ್ಮಕ ಕಾಂಪೊನೆಂಟ್‌ಗಳು ಸೇರಿದಂತೆ, ವೆಬ್‌ಸೈಟ್ ಬಳಸುವ ಮೂಲಕ, ನೀವು ಈ ಮುಂದಿನವುಗಳನ್ನು ಪ್ರತಿನಿಧಿಸುತ್ತೀರಿ ಮತ್ತು ವಾರಂಟಿ ನೀಡುತ್ತೀರಿ (ಎ) ನೀವು ವೆಬ್‌ಸೈಟ್‌ಗೆ ಸಲ್ಲಿಸುವ ಯಾವುದೇ ಮಾಹಿತಿ ವಾಸ್ತವಿಕ ಮತ್ತು ನಿಖರವಾಗಿರುತ್ತದೆ; (ಬಿ) ಮಾಹಿತಿಯ ನಿಖರತೆಯನ್ನು ನೀವು ಕಾಯ್ದುಕೊಳ್ಳುತ್ತೀರಿ; ಮತ್ತು (ಸಿ) ವೆಬ್‌ಸೈಟ್‌ನ ನಿಮ್ಮ ಬಳಕೆಯು ಯಾವುದೇ ಅನ್ವಯವಾಗುವ ಕಾನೂನುಗಳು, ನಿಯಮ ಅಥವಾ ನಿಬಂಧನೆಗಳನ್ನು ಉಲ್ಲಂಘಿಸುವುದಿಲ್ಲ. ನೀವು ನಮಗೆ ಒದಗಿಸುವ ಯಾವುದೇ ಮಾಹಿತಿಯು ನಮ್ಮ ಗೌಪ್ಯತೆ ನೊಟೀಸ್‌ಗೆ ಒಳಪಡುತ್ತದೆ.

ನೀವು ವೆಬ್‌ಸೈಟ್ ಅನ್ನು ಯಾವುದೇ ವಾಣಿಜ್ಯ ಉದ್ದೇಶಗಳಿಗಾಗಿ ಅಥವಾ ಯಾವುದೇ ಕಾನೂನುಬಾಹಿರ ಅಥವಾ ತಪ್ಪು ಉದ್ದೇಶಗಳಿಗಾಗಿ ಬಳಸುವಂತಿಲ್ಲ. ಈ ನಿಯಮಗಳಲ್ಲಿ ಸ್ಪಷ್ಟವಾಗಿ ಅನುಮತಿಸಿರುವುದನ್ನು ಹೊರತುಪಡಿಸಿ ವೆಬ್‌ಸೈಟ್, ಅಥವಾ ಅದರ ಯಾವುದೇ ಭಾಗ ಅಥವಾ ಅಲ್ಲಿರುವ ಕಾಂಪೊನೆಂಟ್ ಅನ್ನು (ಕಂಟೆಂಟ್ ಸೇರಿದಂತೆ) ಬಳಕೆ, ಬಾಡಿಗೆಗೆ ನೀಡುವಿಕೆ, ಮರುವರ್ಗಾವಣೆ, ನಕಲುಪ್ರತಿ, ಬಹಿರಂಗಗೊಳಿಸುವಿಕೆ, ಪ್ರಕಟಣೆ, ಮಾರಾಟ, ನಿಯೋಜನೆ, ಭೋಗ್ಯ, ಉಪಪರವಾನಗಿ ನೀಡುವಿಕೆ, ಮಾರಾಟ ಅಥವಾ ವರ್ಗಾವಣೆ ಮಾಡದಿರಲು ನೀವು ಒಪ್ಪುತ್ತೀರಿ. ಮುಂದುವರಿದು, ವೆಬ್‌ಸೈಟ್, ಅಥವಾ ವೆಬ್‌ಸೈಟ್‌ನ ಯಾವುದೇ ಭಾಗದ ನಕಲಿಸುವಿಕೆ, ರಿವರ್ಸ್ ಎಂಜಿನಿಯರ್ ಮಾಡುವಿಕೆ, ಅನುವಾದ, ಪೋರ್ಟ್, ಮಾರ್ಪಾಡು ಅಥವಾ ಮಾದರಿಯ ತಯಾರಿಸುವಿಕೆಯನ್ನು ಮಾಡುವುದಿಲ್ಲ ಎಂದು ನೀವು ಒಪ್ಪುತ್ತೀರಿ. ವೆಬ್‌ಸೈಟ್‌ ಟ್ಯಾಂಪರ್ ಮಾಡುವುದು, ವೆಬ್‌ಸೈಟ್‌ನಲ್ಲಿ ವಂಚನೆಯ ಚಟುವಟಿಕೆಗಳನ್ನು ನಡೆಸುವುದು ಮತ್ತು ಇತರ ಎಲ್ಲ ಕಾನೂನುಬಾಹಿರ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಮತ್ತು ದುರ್ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು.

ವೀಡಿಯೊ ಕಂಟೆಂಟ್. ನಮ್ಮ ಕೆಲವು ವೀಡಿಗೊಗಳು ನಮ್ಮ ಸೈಟ್ www.bibleproject.com ‌ನಲ್ಲಿ ಅಥವಾ ಯೂಟ್ಯೂಬ್‌ನ ನಮ್ಮ ಚಾನೆಲ್ (https://www.youtube.com/user/jointhebibleproject)  ಅಥವಾ ವಿಮಿಯೊ (https://vimeo.com/channels/1241213) ಅಥವಾ ನಾವು ಭವಿಷ್ಯದಲ್ಲಿ ರಚಿಸಬಹುದಾದ ಅಂಥ ಇತರ ಚಾನೆಲ್‌ಗಳಲ್ಲಿ (ಸಮಗ್ರವಾಗಿ, "ವೀಡಿಯೊ ಕಂಟೆಂಟ್") ಡೌನ್‌ಲೋಡ್‌ಗೆ ಲಭ್ಯ ಇವೆ. ನಾವು ಅದನ್ನು ತೆಗೆದುಹಾಕುವಂತೆ ಸೂಚಿಸದ ಹೊರತು ಮತ್ತು ಸೂಚಿಸುವವರೆಗೆ, ಹಾಗೂ ನೀವು ನಿಯಮಗಳ, ನಿರ್ದಿಷ್ಟವಾಗಿ, ಈ ಕೆಳಗಿನ ಅಗತ್ಯಗಳನ್ನು ಕಟ್ಟುನಿಟ್ಟಾಗಿ ಅನುಸರಣೆ ಮಾಡುವವರೆಗೆ, ನಮ್ಮ ಯಾವುದೇ ವೀಡಿಯೊ ಕಂಟೆಂಟ್‌ನ ಸ್ಟ್ರೀಮ್‌ಗಳನ್ನು, ಅಥವಾ ಲಿಂಕ್‌ಗಳನ್ನು ನಿಮ್ಮ ಸ್ವಂತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳಿಗೆ ಎಂಬೆಡ್ ಮಾಡಲು ಅನುಮತಿಯಿರುತ್ತದೆ:

 • ನಿಮ್ಮ ವೆಬ್‌ಸೈಟ್ ಅಥವಾ ಆ್ಯಪ್‌ನ ಬಳಕೆದಾರರು ವೀಡಿಯೊ ಕಂಟೆಂಟ್ ಪ್ರವೇಶಿಸುವುದಕ್ಕೆ ನಗದು ಶುಲ್ಕದ ಪಾವತಿಯನ್ನು ನೀವು ಕೋರುವಂತಿಲ್ಲ, ಅಥವಾ ನಿಮಗೆ ಪರೋಕ್ಷವಾಗಿ ಹಣ ಲಾಭ ತಂದುಕೊಡುವ ಯಾವುದೇ ಕಾರ್ಯ ಅಥವಾ ನಿಷ್ಕ್ರಿಯತೆಯನ್ನು ಅಗತ್ಯವಾಗಿಸುವಂತಿಲ್ಲ.

 • ನೀವು ವೀಡಿಯೊ ಕಂಟೆಂಟ್‌ನ ಪ್ರತಿಗಳನ್ನು ಮಾರಾಟ ಅಥವಾ ವಿತರಣೆ ಮಾಡುವಂತಿಲ್ಲ

 • ವೀಡಿಯೊ ಕಂಟೆಂಟ್‌ನ ಪಕ್ಕದಲ್ಲಿ, ಬೈಬಲ್‌ಪ್ರಾಜೆಕ್ಟ್ ವೀಡಿಯೊದ ರಚನೆಕಾರ ಮತ್ತು ಮಾಲೀಕನಾಗಿದೆ ಎನ್ನುವುದನ್ನು ತೋರಿಸುವ ಮತ್ತು www.bibleproject.com ಗೆ ಒಂದು ಲಿಂಕ್ ಹೊಂದಿರುವ ಸ್ಪಷ್ಟ ಮತ್ತು ಪ್ರಮುಖವಾದ ಸೂಚನೆ ಇರಿಸುವ ಮೂಲಕ ಸೈಟ್‌ಗೆ ಭೇಟಿ ನೀಡಲು ಮತ್ತು ಬೈಬಲ್‌ಪ್ರಾಜೆಕ್ಟ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನೀವು ವೀಕ್ಷಕರಿಗೆ ಅವಕಾಶ ಕಲ್ಪಿಸಬೇಕು.

 • ಯಾವುದೇ ವೀಡಿಯೊ ಕಂಟೆಂಟ್ ಅನ್ನು ನೀವು ಎಡಿಟ್, ಮಾರ್ಪಾಡು ಮಾಡುವಂತಿಲ್ಲ ಅಥವಾ ಅದರಲ್ಲಿ ಯಾವುದೇ ಬಗೆಯ ಬದಲಾವಣೆಗಳನ್ನು ಮಾಡುವಂತಿಲ್ಲ, ಅಥವಾ ವೀಡಿಯೊ ಕಂಟೆಂಟ್ ಆಧರಿಸಿ ಯಾವುದೇ ಅದೇ ಮಾದರಿಯ ಕಾರ್ಯಗಳನ್ನು ರಚಿಸುವಂತಿಲ್ಲ.

 • ಯಾವುದೇ ವೀಡಿಯೊ ಕಂಟೆಂಟ್ ಅನ್ನು ನಾವು ಒದಗಿಸುವುದನ್ನು ಹೊರತುಪಡಿಸಿ ಹೊಸ ಸರ್ವರ್ ಅಥವಾ ಸ್ಟ್ರೀಮಿಂಗ್ ಸೇವೆಗೆ ನೀವು ಅಪ್‌ಲೋಡ್ ಮಾಡುವಂತಿಲ್ಲ.

ಪೋಸ್ಟರ್‌ಗಳು. ನಮ್ಮ ಕೆಲವು ಪೋಸ್ಟರ್‌ಗಳು ಸೈಟ್‌ www.bibleproject.com ನಿಂದ ಡೌನ್‌ಲೋಡ್‌ಗೆ ಲಭ್ಯ ಇವೆ (ಸಮಗ್ರವಾಗಿ, "ಪೋಸ್ಟರ್‌ಗಳು"). ನಾವು ಅನುಮತಿಯನ್ನು ಹಿಂಪಡೆಯದ ಹೊರತು ಮತ್ತು ಹಿಂಪಡೆಯುವವರೆಗೆ, ಆದರೆ ಈ ನಿಯಮಗಳು, ನಿರ್ದಿಷ್ಟವಾಗಿ ಈ ಕೆಳಗಿನ ಅಗತ್ಯಗಳನ್ನು ನೀವು ಕಟ್ಟುನಿಟ್ಟಾಗಿ ಅನುಸರಣೆ ಮಾಡುವವರೆಗೆ, ನಮ್ಮ ಯಾವುದೇ ಪೋಸ್ಟರ್‌ಗಳನ್ನು ಒಂದೋ ಡಿಜಿಟಲ್ ರೂಪದಲ್ಲಿ ಅಥವಾ ಸ್ಪಷ್ಟ ಮಾಧ್ಯಮದಲ್ಲಿ ಡೌನ್‌ಲೋಡ್, ಮರುಸೃಷ್ಟಿ, ಅಥವಾ ಪ್ರದರ್ಶನ ಮಾಡಲು ನಿಮಗೆ ಅನುಮತಿಯಿದೆ: 

 • ಪೋಸ್ಟರ್‌ಗಳನ್ನು ನೋಡುವುದಕ್ಕೆ ತೃತೀಯ ಪಕ್ಷಗಳಿಗೆ ಪೂರ್ವ ಅಗತ್ಯವಾಗಿ, ನಗದು ಶುಲ್ಕದ ಪಾವತಿಯನ್ನು ನೀವು ಕೋರುವಂತಿಲ್ಲ, ಅಥವಾ ನಿಮಗೆ ಪರೋಕ್ಷವಾಗಿ ಹಣ ಲಾಭ ತಂದುಕೊಡುವ ಯಾವುದೇ ಕಾರ್ಯ ಅಥವಾ ನಿಷ್ಕ್ರಿಯತೆಯನ್ನು ಅಗತ್ಯವಾಗಿಸುವಂತಿಲ್ಲ, ಅಥವಾ ಪೋಸ್ಟರ್‌ಗಳ ಪ್ರತಿಗಳನ್ನು ಮಾರುವಂತಿಲ್ಲ.

 • ಎಲ್ಲಾ ಪೋಸ್ಟರ್‌ಗಳನ್ನು ಉಚಿತವಾಗಿ ವಿತರಿಸುವುದಕ್ಕಾಗಿ, ಮೇಲೆ ಹೇಳಿರುವ ಮಾರಾಟದ ನಿರ್ಬಂಧವನ್ನು ನೀವು ಪಾಲಿಸುವವರೆಗೆ, ಪ್ರತಿಯೊಂದು ವಿಭಿನ್ನ ಪೋಸ್ಟರ್‌ನ 500 ಕಾಗದದ ಪ್ರತಿಗಳನ್ನು ನೀವು ರಚಿಸಬಹುದು ಮತ್ತು ವಿತರಿಸಬಹುದು. (ಒಂದು ವೇಳೆ ನೀವು ಪೋಸ್ಟರ್‌ನ 500 ಅಥವಾ ಹೆಚ್ಚಿನ ಪ್ರತಿಗಳನ್ನುತಯಾರಿಸಲು ಬಯಸಿದರೆ, ದಯವಿಟ್ಟು ವಿಶೇಷ ಪರವಾನಗಿಯನ್ನು ಕೋರಲು ನಮ್ಮನ್ನು ಸಂಪರ್ಕಿಸಿ.)

 • ಯಾವುದೇ ಪೋಸ್ಟರ್ ಅನ್ನು ನೀವು ಎಡಿಟ್, ಮಾರ್ಪಾಡು ಮಾಡುವಂತಿಲ್ಲ, ಅಥವಾ ಯಾವುದೇ ಬಗೆಯ ಬದಲಾವಣೆಗಳನ್ನು ಮಾಡುವಂತಿಲ್ಲ, ಅಥವಾ ಪೋಸ್ಟರ್‌ಗಳನ್ನು ಆಧರಿಸಿದ ಯಾವುದೇ ಪ್ರತಿರೂಪ ಕೃತಿಗಳನ್ನು ರಚಿಸುವಂತಿಲ್ಲ.

 • ಬೈಬಲ್‌ಪ್ರಾಜೆಕ್ಟ್ ಪೋಸ್ಟರ್‌ಗಳ ರಚನೆಕಾರ ಮತ್ತು ಮಾಲೀಕನಾಗಿದೆ ಎನ್ನುವುದನ್ನು ಗುರುತಿಸುವ ಹಾಗೂ  ಪ್ರೇಕ್ಷಕರಿಗೆ ಸೈಟ್‌ಗೆ ಭೇಟಿ ನೀಡುವುದಕ್ಕೆ ಮತ್ತು ಬೈಬಲ್‌ಪ್ರಾಜೆಕ್ಟ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವುದಕ್ಕೆ ಅನುಕೂಲ ಕಲ್ಪಿಸುವ ರೀತಿ www.bibleproject.com ಗೆ ಲಿಂಕ್ ಒಳಗೊಂಡಿರುವ ಸ್ಪಷ್ಟ ಮತ್ತು ಪ್ರಮುಖವಾದ ಸೂಚನೆಯನ್ನು ನೀವು ಯಾವುದೇ ಪೋಸ್ಟರ್‌ಗಳ ಡಿಜಿಟಲ್ ಡಿಸ್‌ಪ್ಲೇ ಸಮೀಪದಲ್ಲಿ ಇರಿಸಬೇಕು.

ಈ ಅನುಮತಿಯನ್ನು ನಾವು ಹಿಂಪಡೆದ ಸಂದರ್ಭದಲ್ಲಿ, ನೀವು ಎಲ್ಲ ಪೋಸ್ಟರ್‌ಗಳ ಡಿಜಿಟಲ್ ಡಿಸ್‌ಪ್ಲೇ ಅನ್ನು ತೆಗೆದುಹಾಕಬೇಕು, ಮತ್ತು ಸುಸ್ಪಷ್ಟ ಮಾಧ್ಯಮದಲ್ಲಿ ಮರುಸೃಷ್ಟಿಸಿರುವ ಯಾವುದೇ ಪೋಸ್ಟರ್‌ಗಳ ವಿತರಣೆಯನ್ನು ನಿಲ್ಲಿಸಬೇಕು.

ಇತರ ವಿಷುವಲ್ ಕಂಟೆಂಟ್ ಪೋಸ್ಟರ್‌ಗಳಿಗೆ ಹೊರತಾದ ನಮ್ಮ ಕೆಲವು ಟಿಪ್ಪಣಿಗಳು, ಸ್ಕ್ರಿಪ್ಟ್‌ಗಳು ಮತ್ತು ಸ್ಥಿರ ವಿಷುವಲ್ ಕಂಟೆಂಟ್ ನಮ್ಮ www.bibleproject.com ಸೈಟ್‌ನಿಂದ ಡೌನ್‌ಲೋಡ್‌ಗೆ ಲಭ್ಯ ಇವೆ (ಸಮಗ್ರವಾಗಿ, "ಇತರ ವಿಷುವಲ್ ಕಂಟೆಂಟ್"). ನಮ್ಮ ಯಾವುದೇ ಇತರ ವಿಷುವಲ್ ಕಂಟೆಂಟ್ ಅನ್ನು ಡಿಜಿಟಲ್ ರೂಪದಲ್ಲಿ ಅಥವಾ ಸುಸ್ಪಷ್ಟ ಮಾಧ್ಯಮದಲ್ಲಿ ಒಂದು ಬಾರಿ, ಡೌನ್‌ಲೋಡ್, ಮರುಸೃಷ್ಟಿ ಮತ್ತು ಡಿಸ್‌ಪ್ಲೇ ಮಾಡಲು ನಿಮಗೆ ಅನುಮತಿಯಿರುತ್ತದೆ, ಆದರೆ ಈ ಅನುಮತಿಯನ್ನು ನಾವು ಹಿಂಪಡೆಯದ ಹೊರತು ಮತ್ತು ಹಿಂಪಡೆಯುವ ತನಕ ಹಾಗೂ ಈ ನಿಯಮಗಳನ್ನು ಮತ್ತು, ನಿರ್ದಿಷ್ಟವಾಗಿ, ಈ ಕೆಳಗಿನ ಅಗತ್ಯಗಳನ್ನು ಕಟ್ಟುನಿಟ್ಟಾಗಿ ನೀವು ಅನುಸರಿಸುವವರೆಗೆ ಮಾತ್ರ:

 • ಇತರ ವಿಷುವಲ್ ಕಂಟೆಂಟ್ ಅನ್ನು ನೋಡಲು ಮೂರನೇ ಪಕ್ಷಗಳಿಗೆ ಪೂರ್ವ ಅಗತ್ಯವಾಗಿ ನೀವು ಹಣದ ಶುಲ್ಕದ ಪಾವತಿಯನ್ನು ವಿಧಿಸುವಂತಿಲ್ಲ, ಅಥವಾ ನಿಮಗೆ ಪರೋಕ್ಷವಾಗಿ ಹಣದ ಲಾಭ ತಂದುಕೊಡುವ ಯಾವುದೇ ಕಾರ್ಯ ಅಥವಾ ನಿಷ್ಕ್ರಿಯವಾಗಿರುವಿಕೆಯನ್ನು ಅಗತ್ಯವಾಗಿಸುವಂತಿಲ್ಲ, ಅಥವಾ ಇತರ ವಿಷುವಲ್ ಕಂಟೆಂಟ್ ಅನ್ನು ನೀವು ಮಾರುವಂತಿಲ್ಲ.

 • ಸುಸ್ಪಷ್ಟ ಮಾಧ್ಯಮದಲ್ಲಿ ನೀವು ಇತರ ವಿಷುವಲ್ ಕಂಟೆಂಟ್‌ನ ಬಹು ಪ್ರತಿಗಳನ್ನು ಸೃಷ್ಟಿಸುವಂತಿಲ್ಲ.

 • ಯಾವುದೇ ಇತರ ವಿಷುವಲ್ ಕಂಟೆಂಟ್‌ ಅನ್ನು ನೀವು ಎಡಿಟ್, ಮಾರ್ಪಾಡು ಮಾಡುವಂತಿಲ್ಲ ಅಥವಾ ಯಾವುದೇ ಬಗೆಯ ಬದಲಾವಣೆಗಳನ್ನು ಮಾಡುವಂತಿಲ್ಲ, ಅಥವಾ ಇತರ ವಿಷುವಲ್ ಕಂಟೆಂಟ್ ಆಧರಿಸಿ ಯಾವುದೇ ಪ್ರತಿರೂಪ ಕೃತಿಗಳನ್ನು ನೀವು ಸೃಷ್ಟಿಸುವಂತಿಲ್ಲ.

 • ಬೈಬಲ್‌ಪ್ರಾಜೆಕ್ಟ್ ಇತರ ವಿಷುವಲ್ ಕಂಟೆಂಟ್‌ಗಳ ರಚನೆಕಾರ ಮತ್ತು ಮಾಲೀಕನಾಗಿದೆ ಎನ್ನುವುದನ್ನು ಗುರುತಿಸುವ ಹಾಗೂ ಪ್ರೇಕ್ಷಕರಿಗೆ ಸೈಟ್‌ಗೆ ಭೇಟಿ ನೀಡುವುದಕ್ಕೆ ಮತ್ತು ಬೈಬಲ್‌ಪ್ರಾಜೆಕ್ಟ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವುದಕ್ಕೆ ಅನುಕೂಲ ಕಲ್ಪಿಸುವ ರೀತಿ www.bibleproject.com ಗೆ ಲಿಂಕ್ ಒಳಗೊಂಡಿರುವ ಸ್ಪಷ್ಟ ಮತ್ತು ಪ್ರಮುಖವಾದ ಸೂಚನೆಯನ್ನು ನೀವು ಇತರ ವಿಷುವಲ್ ಕಂಟೆಂಟ್‌ನ ಡಿಜಿಟಲ್ ಡಿಸ್‌ಪ್ಲೇ ಸಮೀಪದಲ್ಲಿ ಇರಿಸಬೇಕು.

ಈ ಅನುಮತಿಯನ್ನು ನಾವು ಹಿಂಪಡೆದ ಸಂದರ್ಭದಲ್ಲಿ, ನೀವು ಇತರ ವಿಷುವಲ್ ಕಂಟೆಂಟ್‌ನ ಎಲ್ಲ ಡಿಜಿಟಲ್ ಡಿಸ್‌ಪ್ಲೇ ಅನ್ನು ತೆಗೆದುಹಾಕಬೇಕು, ಮತ್ತು ಸುಸ್ಪಷ್ಟ ಮಾಧ್ಯಮದಲ್ಲಿ ಮರುಸೃಷ್ಟಿಸಿರುವ ಯಾವುದೇ ಇತರ ವಿಷುವಲ್ ಕಂಟೆಂಟ್‌ನ ವಿತರಣೆಯನ್ನು ನಿಲ್ಲಿಸಬೇಕು.

ಪಾಡ್‌ಕಾಸ್ಟ್‌ಗಳು ನಮ್ಮ ಕೆಲವು ಪಾಡ್‌ಕಾಸ್ಟ್‌ಗಳು ಮತ್ತು ಇತರ ಆಡಿಯೊ ಕಂಟೆಂಟ್ ಸ್ಟ್ರೀಮ್‌ ಮಾಡುವುದಕ್ಕಾಗಿ ನಮ್ಮ www.bibleproject.com ಸೈಟ್‌ನಲ್ಲಿ ಮತ್ತು ವಿವಿಧ ಇತರ ಅಧಿಕೃತ ಆಡಿಯೊ ಸ್ಟ್ರೀಮಿಂಗ್ ಸೇವೆಗಳಲ್ಲಿ (ಸಮಗ್ರವಾಗಿ "ಆಡಿಯೊ ಕಂಟೆಂಟ್") ಲಭ್ಯ ಇವೆ. ಬೇಡಿಕೆ ಮೇರೆಗೆ ನಮ್ಮ ಸೈಟ್ ಅಥವಾ ಆ್ಯಪಲ್ ಪಾಡ್‌ಕಾಸ್ಟ್‌ಗಳು, ಗೂಗಲ್ ಪಾಡ್‌ಕಾಸ್ಟ್‌ಗಳು, ಮತ್ತು ಸ್ಪಾಟಿಫೈ ಮುಂತಾದ ಅಧಿಕೃತ ಸೇವೆಗಳಲ್ಲಿ (ಆ ಅಧಿಕೃತ ಸೇವೆಗಳ ಯಾವುದೇ ಅಗತ್ಯಗಳನ್ನು ನೀವು ಅನುಸರಣೆ ಮಾಡುವವರೆಗೆ) ನಮ್ಮ ಆಡಿಯೊ ಕಂಟೆಂಟ್ ಪ್ಲೇ ಮಾಡಲು ನಿಮಗೆ ಅನುಮತಿ ಇದೆಯಾದರೂ, ಈ ನಿಯಮಗಳಡಿ ನಮ್ಮ ಆಡಿಯೊ ಕಂಟೆಂಟ್ ಅನ್ನು ರೆಕಾರ್ಡ್, ಮರುಸೃಷ್ಟಿ, ಮರುಪ್ರಸಾರ ಅಥವಾ ಇತರ ಯಾವುದೇ ರೀತಿಯಲ್ಲಿ ಬಳಕೆ ಮಾಡಲು ನಿಮಗೆ ಅನುಮತಿಯಿಲ್ಲ. ಮೇಲೆ ಅನುಮತಿಸಿರುವುದನ್ನು ಹೊರತುಪಡಿಸಿ ನಮ್ಮ ಆಡಿಯೊ ಕಂಟೆಂಟ್‌ನ ಯಾವುದೇ ಬಳಕೆಯನ್ನು ಮಾಡಲು ನೀವು ಬಯಸಿದಲ್ಲಿ, ದಯವಿಟ್ಟು ವಿಶೇಷ ಬಳಕೆ ಪರವಾನಗಿಯ ವ್ಯವಸ್ಥೆಗಾಗಿ ನಮ್ಮನ್ನು ಸಂಪರ್ಕಿಸಿ.

ವೆಬ್‌ಸೈಟ್ ಮತ್ತು ಕಂಟೆಂಟ್‌ನ ನಿಮ್ಮ ಬಳಕೆಯ ಮೇಲೆ ನಿರ್ಬಂಧಗಳು

ವೆಬ್‌ಸೈಟ್‌ನ ಪ್ರವೇಶವು ಈ ನಿಯಮಗಳಲ್ಲಿ ನಿರ್ದಿಷ್ಟವಾಗಿ ಅನುಮತಿಸಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಯಾವುದೇ ಕಂಟೆಂಟ್ ಬಳಸಲು ನಿಮಗೆ ಅನುಮತಿ ನೀಡುವುದಿಲ್ಲ. ಮೇಲೆ ಹೇಳಿರುವುದಕ್ಕೆ ಸೀಮಿತವಲ್ಲದಂತೆ, ಈ ನಿಯಮಗಳಿಂದ ನಿರ್ದಿಷ್ಟವಾಗಿ ಅನುಮತಿಸದ ಹೊರತು, ಯಾವುದೇ ಪರಿಸ್ಥಿತಿಗಳಡಿ ನೀವು ಈ ಕೆಳಗಿನವುಗಳನ್ನು ಮಾಡುವಂತಿಲ್ಲ:

 • ಯಾವುದೇ ಕೃತಿಸ್ವಾಮ್ಯ, ಟ್ರೇಡ್‌ಮಾರ್ಕ್ ಅಥವಾ ಕಂಟೆಂಟ್ ಮೇಲೆ ಗುರುತು ಮಾಡಿರುವ ಇತರ ಸ್ವಾಮ್ಯದ ಸೂಚನೆಗಳು ಅಥವಾ ಯಾವುದೇ ಡಿಜಿಟಲ್ ಹಕ್ಕುಗಳ ನಿರ್ವಹಣೆ ಕಾರ್ಯವಿಧಾನ, ಸಾಧನ ಅಥವಾ ಇತರ ಕಂಟೆಂಟ್ ರಕ್ಷಣೆ ಕ್ರಮಗಳನ್ನು ನೇರವಾಗಿ ಅಥವಾ ಇತರ ಮಾರ್ಗಗಳ ಮೂಲಕ ತೆಗೆದುಹಾಗುವುದು, ಬದಲಾಯಿಸುವುದು, ಬೈಪಾಸ್ ಮಾಡುವುದು, ನಿರ್ಲಕ್ಷಿಸುವುದು, ಹಸ್ತಕ್ಷೇಪ ಮಾಡುವುದು ಅಥವಾ  ಸುತ್ತಿಬಳಸುವುದನ್ನು ಮಾಡುವಂತಿಲ್ಲ;

 • ವೆಬ್‌ಸೈಟ್‌ನ ಯಾವುದೇ ಆಯಾಮವನ್ನು ಮಿರರ್, ಫ್ರೇಮ್, ಸ್ಕ್ರೀನ್ ಸ್ಕ್ರೇಪ್ ಅಥವಾ ಡೀಪ್ ಲಿಂಕ್ ಮಾಡುವಂತಿಲ್ಲ ಅಥವಾ ನಮ್ಮಿಂದ ಒದಗಿಸಲ್ಪಟ್ಟಿರುವ ಅಥವಾ ಅನುಮತಿಸಲ್ಪಟ್ಟಿರುವುದನ್ನು ಹೊರತುಪಡಿಸಿದ ತಂತ್ರಜ್ಞಾನ ಅಥವಾ ಮಾರ್ಗಗಳ ಮೂಲಕ ಯಾವುದೇ ಕಂಟೆಂಟ್ ಅನ್ನು ಪ್ರವೇಶಿಸುವಂತಿಲ್ಲ;

 • "ರೊಬಾಟ್‌ಗಳು," ಸ್ಪೈಡರ್‌ಗಳು," "ಆಫ್‌ಲೈನ್‌ ರೀಡರ್‌ಗಳು" ಮುಂತಾದವು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಯಾವುದೇ ಸ್ವಯಂಚಾಲಿತ ಸಿಸ್ಟಮ್ ಮೂಲಕ ವೆಬ್‌ಸೈಟ್ ಪ್ರವೇಶ ಮಾಡುವಂತಿಲ್ಲ, ಅಥವಾ ನಮ್ಮ ಮೂಲಸೌಕರ್ಯದ ಮೇಲೆ  ಅಸಮಂಜಸ ಅಥವಾ ಅಸಮಾನವಾದ ಭಾರೀ ಲೋಡ್ ಹೇರುವ ಅಥವಾ ಹೇರಬಹುದಾದ (ನಮ್ಮ ಸ್ವಂತ ವಿವೇಚನೆ ಮೇರೆಗೆ ನಿರ್ಧರಿಸುವಂತೆ) ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದು;

 • ವೆಬ್‌ಸೈಟ್‌ಗೆ ತಿಳಿದಿದ್ದೂ ಅಥವಾ ಅಜಾಗರೂಕತೆಯಿಂದ ಅಮಾನ್ಯ ಡೇಟಾ ಅಪ್‌ಲೋಡ್ ಮಾಡಬಾರದು ಅಥವಾ  ಹಾನಿಕರವಾದ ಅಥವಾ ಅಲ್ಲದಿರುವ, ವೈರಸ್‌ಗಳು, ವರ್ಮ್‌ಗಳು, ಟ್ರೊಜನ್ ಹಾರ್ಸ್‌ಗಳು ಅಥವಾ ಇತರ ಮಾಲ್‌ವೇರ್ ಅಥವಾ ಸಾಫ್ಟ್‌ವೇರ್ ಏಜೆಂಟ್‌ಗಳನ್ನು ಹರಿಬಿಡಬಾರದು, ಅಥವಾ ನಮ್ಮ ಸಿಸ್ಟಮ್ ಅಥವಾ ನೆಟ್‌ವರ್ಕ್ ಅನ್ನು ಟ್ಯಾಂಪರ್, ದುರ್ಬಲಗೊಳಿಸುವಿಕೆ, ಹಾನಿ ಮಾಡುವಿಕೆ, ದಾಳಿ ಮಾಡುವಿಕೆ, ಶೋಷಣೆ ಅಥವಾ ಒಳನುಸುಳುವಿಕೆ ಮಾಡಬಾರದು, ಅಥವಾ ಇಲ್ಲದಿದ್ದಲ್ಲಿ ಬೈಬಲ್‌ಪ್ರಾಜೆಕ್ಟ್ ಅಥವಾ ಇತರ ಯಾವುದೇ ಸಂಬಂಧಿತ ನೆಟ್‌ವರ್ಕ್‌ಗಳ ಸಿಸ್ಟಮ್ ಸಮಗ್ರತೆ ಅಥವಾ ಸುರಕ್ಷತೆಯಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ಅಥವಾ ರಾಜಿ ಹೊಂದಾಣಿಕೆ ಮಾಡುವುದಕ್ಕೆ ಪ್ರಯತ್ನಿಸಬಾರದು, ಅಥವಾ ವೆಬ್‌ಸೈಟ್‌ನ ಸೂಕ್ತ ಕಾರ್ಯಾಚರಣೆ ಮೇಲೆ ಹಾಗೂ ಯಾವುದೇ ವ್ಯಕ್ತಿಯ ಅಥವಾ ಯಾವುದೇ ಸಂಸ್ಥೆಯ ವೆಬ್‌ಸೈಟ್‌ನ ಬಳಕೆ ಮತ್ತು ಸಂತೋಷಪಡುವಿಕೆಯ ಮೇಲೆ ಪರಿಣಾಮ ಬೀರುವ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದು;

 • ವೆಬ್‌ಸೈಟ್‌ನ ಸುರಕ್ಷಿತ ಮತ್ತು ಸಾರ್ವಜನಿಕವಲ್ಲದ ಪ್ರದೇಶಗಳಿಗೆ ಹ್ಯಾಕ್ ಮಾಡುವ ಮೂಲಕ ಅಥವಾ ಯಾವುದೇ ಜಿಯೊ-ಬ್ಲಾಕಿಂಗ್ ಕಾರ್ಯವಿಧಾನಗಳ ಮೂಲಕ ಸುತ್ತುಬಳಸಿ ಪ್ರವೇಶಿಸುವ ಮೂಲಕ, ನಮ್ಮ ವೆಬ್‌ಸೈಟ್‌ನ ಪ್ರವೇಶ ಅಥವಾ ಬಳಕೆಯನ್ನು ತಡೆಯಲು ಅಥವಾ ನಿರ್ಬಂಧಿಸಲು ಬಳಸಿರುವ ಕ್ರಮಗಳನ್ನು ಹಾದುಹೋಗಬಾರದು;

 • ಖಾತೆ ಹೆಸರುಗಳು ಮತ್ತು ಇ-ಮೇಲ್ ವಿಳಾಸಗಳು ಸೇರಿದಂತೆ, ಯಾವುದೇ ವೈಯಕ್ತಿಕ ಮಾಹಿತಿ ಸಂಗ್ರಹಿಸಲು ವೆಬ್‌ಸೈಟ್ ಬಳಕೆ ಮಾಡಬಾರದು ಅಥವಾ ನಮ್ಮ ಸ್ಪಷ್ಟ ಪೂರ್ವಾನುಮತಿ ಇಲ್ಲದೆ ಯಾವುದೇ ವಾಣಿಜ್ಯ ವಿಜ್ಞಾಪನೆಯ ಉದ್ದೇಶಗಳಿಗಾಗಿ ವೆಬ್‌ಸೈಟ್ ಅನ್ನು ಬಳಸುವಂತಿಲ್ಲ; ಅಥವಾ

 • ವೆಬ್‌ಸೈಟ್‌ನ ಯಾವುದೇ ಆಯಾಮವನ್ನು ರಿವರ್ಸ್ ಎಂಜಿನಿಯರ್ ಮಾಡಲು ಪ್ರಯತ್ನಿಸುವುದು ಅಥವಾ ವೆಬ್‌ಸೈಟ್ ಸಕ್ರಿಯಗೊಳಿಸುವ ಅಥವಾ ಆಧಾರವಾಗಿರುವ ಸೋರ್ಸ್ ಕೋಡ್ (ಟೂಲ್‌ಗಳು, ವಿಧಾನಗಳು, ಪ್ರಕ್ರಿಯೆಗಳು ಮತ್ತು ಮೂಲಸೌಕರ್ಯ ಸೇರಿದಂತೆ) ಪಡೆಯಲು ಯತ್ನಿಸುವುದು, ಪ್ರತಿರೂಪದ ಸಾಮಗ್ರಿಗಳನ್ನು ನೀವು ಉಚಿತವಾಗಿ ನೀಡುವ ಉದ್ದೇಶ ಹೊಂದಿದ್ದೀರೇ ಇಲ್ಲವೇ ಎನ್ನುವುದರ ಪರಿಗಣನೆಯಿಲ್ಲದೆ, ಕಂಟೆಂಟ್ ಬಳಸಿಕೊಂಡು ಯಾವುದೇ ರೀತಿಯ ಪ್ರತಿರೂಪ ಕೃತಿಗಳನ್ನು ಅಥವಾ ಸಾಮಗ್ರಿಗಳನ್ನು ಸೃಷ್ಟಿಸುವುದನ್ನು ಮಾಡಬಾರದು, ಅಥವಾ ಇಲ್ಲದಿದ್ದಲ್ಲಿ ವೆಬ್‌ಸೈಟ್‌ನ ಯಾವುದೇ ಆಯಾಮವನ್ನು ಬಳಸಿಕೊಂಡು ವ್ಯವಹಾರ ನಿರ್ಮಿಸಿಕೊಳ್ಳಬಾರದು. 

ಒಂದು ವೇಳೆ ಈ ನಿಯಮಗಳ ಯಾವುದೇ ನಿಬಂಧನೆಯನ್ನು ನೀವು ಉಲ್ಲಂಘಿಸಿದರೆ, ಈ ನಿಯಮಗಳಲ್ಲಿ ವಿವರಿಸಲಾಗಿರುವ ಅನುಮತಿಗಳು ಸ್ವಯಂಚಾಲಿತವಾಗಿ ಸಮಾಪ್ತಿಯಾಗುತ್ತವೆ. ಈ ನಿಯಮಗಳಿಂದ ಸ್ಪಷ್ಟವಾಗಿ ಅನುಮತಿಸದಿರುವ ಕಂಟೆಂಟ್‌ನ ಯಾವುದೇ ಬಳಕೆಯು ಕೃತಿಸ್ವಾಮ್ಯ ಅಥವಾ ಟ್ರೇಡ್‌ಮಾರ್ಕ್ ಕಾನೂನುಗಳನ್ನು ಉಲ್ಲಂಘಿಸಬಹುದು, ಮತ್ತು, ಬೈಬಲ್‌ಪ್ರಾಜೆಕ್ಟ್‌ನ ಪೂರ್ವ ಲಿಖಿತ ಅನುಮತಿಯಿಲ್ಲದೆ, ಕಟ್ಟುನಿಟ್ಟಾಗಿ ನಿಷೇಧಿತವಾಗಿರುತ್ತದೆ.

ಬಳಕೆದಾರ ಸೃಷ್ಟಿಸಿದ ಸಾಮಗ್ರಿ

ಬಳಕೆದಾರರು ಸೃಷ್ಟಿಸಿದ ಸಾಮಗ್ರಿಗಳನ್ನು ಒಂದು ವೇಳೆ ಟಿಬಿಪಿ ಸ್ವೀಕರಿಸಲು ನಿರ್ಧರಿಸಿದರೆ ಮತ್ತು ನಿರ್ಧರಿಸಿದ ಮಿತಿಯವರೆಗೆ, ಸಾರ್ವಜನಿಕರು ಪ್ರವೇಶಿಸಬಹುದಾದ ಮತ್ತು ನೋಡಬಹುದಾದ ರೀತಿ ವೆಬ್‌ಸೈಟ್‌ನಲ್ಲಿ ಫೋಟೋಗಳು, ಅಥವಾ ಇತರ ಸಾಮಗ್ರಿಗಳನ್ನು ("ಬಳಕೆದಾರ ಸೃಷ್ಟಿಸಿದ ಸಾಮಗ್ರಿಗಳು") ಪ್ರಕಟಿಸಲು, ಪ್ರಸರಣ ಮಾಡಲು, ಸಲ್ಲಿಸಲು ಅಥವಾ ಇಲ್ಲದಿದ್ದಲ್ಲಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲು ನೀವು ಅವಕಾಶ ಪಡೆಯಬಹುದು. ನೀವು ಪೋಸ್ಟ್ ಮಾಡಿದ ಯಾವುದೇ ಬಳಕೆದಾರ ಸೃಷ್ಟಿಸಿದ ಸಾಮಗ್ರಿಗಳಿಗೆ ಸಂಬಂಧಿಸಿ, (i) ಕಂಟೆಂಟ್ ಅನ್ನು ನೀವು ರಚಿಸಿದ್ದೀರಿ ಮತ್ತು ಅವುಗಳ ಹಕ್ಕುಗಳನ್ನು ಹೊಂದಿದ್ದೀರಿ ಅಥವಾ ಅಂಥ ಕಂಟೆಂಟ್ ಪೋಸ್ಟ್ ಮಾಡಲು ನೀವು ಮಾಲೀಕರ ಸ್ಪಷ್ಟ ಅನುಮತಿಯನ್ನು ಹೊಂದಿದ್ದೀರಿ, ಮತ್ತು (ii) ಇತರ ಯಾವುದೇ ವ್ಯಕ್ತಿಯ ಅಥವಾ ಸಂಸ್ಥೆಯ ಹಕ್ಕುಗಳನ್ನು (ಕೃತಿಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು ಅಥವಾ ಗೌಪ್ಯತೆ ಹಕ್ಕುಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ) ಕಂಟೆಂಟ್ ಅತಿಕ್ರಮಿಸುವುದಿಲ್ಲ ಅಥವಾ ಯಾವುದೇ ಅನ್ವಯವಾಗುವ ಕಾನೂನುಗಳು, ನಿಯಮಗಳು ಅಥವಾ ನಿಬಂಧನೆಗಳು, ಈ ಬಳಕೆಯ ನಿಯಮಗಳು ಅಥವಾ ಪ್ರಕಟಿಸಿರುವ ನಮ್ಮ ಯಾವುದೇ ನೀತಿಗಳನ್ನು ಉಲ್ಲಂಘಿಸುವುದಿಲ್ಲ ಎಂದು ನೀವು ಪ್ರತಿನಿಧಿಸುತ್ತೀರಿ. ಮುಂದುವರಿದು, ಬಳಕೆದಾರ ಸೃಷ್ಟಿಸಿದ ಸಾಮಗ್ರಿಗಳು ಇವುಗಳನ್ನು ಒಳಗೊಂಡಿರಬಾರದು:

 • ಸುಳ್ಳು, ಮಾನಹಾನಿಕರ, ಅಪಮಾನಜನಕ, ಅಶ್ಲೀಲ, ಕಿರುಕುಳದ, ಬೆದರಿಸುವ, ತಾರತಮ್ಯದ, ಪೂರ್ವಾಗ್ರಹಪೀಡಿತ, ದ್ವೇಷಮಯ, ಹಿಂಸಾತ್ಮಕ, ಅಸಭ್ಯ, ಅಪವಿತ್ರ, ಕಾಮಪ್ರಚೋದಕ ಅಥವಾ ಇಲ್ಲದಿದ್ದಲ್ಲಿ ಅಪಮಾನಕರ, ಅನುಚಿತ, ಧಕ್ಕೆಯುಂಟುಮಾಡುವ, ಕಾನೂನುಬಾಹಿರ, ಹಾನಿಕಾರಕ ಅಥವಾ ನಷ್ಟವುಂಟುಮಾಡುವ ಸಾಮಗ್ರಿಗಳನ್ನು ಒಳಗೊಂಡಿರಬಾರದು;

 • ಟಿಬಿಪಿಯ ಅಥವಾ ಇತರರ ಯಾವುದೇ ಕಾನೂನು ಹಕ್ಕುಗಳನ್ನು ಉಲ್ಲಂಘಿಸಬಾರದು, ಅನ್ವಯವಾಗುವ ಕಾನೂನುಗಳು ಅಥವಾ ನಿಬಂಧನೆಗಳಡಿ ಸಿವಿಲ್ ಅಥವಾ ಕ್ರಿಮಿನಲ್ ಬಾಧ್ಯತೆಗಳಿಗೆ ಎಡೆಮಾಡಿಕೊಡಬಾರದು, ಅಥವಾ ಇಲ್ಲದಿದ್ದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆ ಅಥವಾ ನ್ಯಾಯೋಚಿತವಲ್ಲದ ಕೃತ್ಯಕ್ಕೆ ಪ್ರೋತ್ಸಾಹ, ಸಲಹೆ ಅಥವಾ ಸಹಾಯ ಮಾಡಬಾರದು;

 • ಯಾವುದೇ ವ್ಯಕ್ತಿಗೆ ಹಾನಿ ಅಥವಾ ಸ್ವತ್ತಿಗೆ ನಷ್ಟ ಅಥವಾ ಧಕ್ಕೆ ಉಂಟುಮಾಡಬಾರದು;

 • ಬೇರೆಯವರ ವಿಳಾಸ, ಫೋನ್ ನಂಬರ್, ಇ-ಮೇಲ್ ವಿಳಾಸ, ಸಾಮಾಜಿಕ ಭದ್ರತಾ ಸಂಖ್ಯೆ, ಹಣಕಾಸಿನ ಮಾಹಿತಿಯಂಥ ವೈಯಕ್ತಿಕ ಮಾಹಿತಿಯನ್ನು, ಅಥವಾ ಆ ವ್ಯಕ್ತಿಯನ್ನು ಟ್ರ್ಯಾಕ್ ಮಾಡಲು, ಸಂಪರ್ಕಿಸಲು ಅಥವಾ ವ್ಯಕ್ತಿಯ ಸೋಗುಹಾಕಲು ಬಳಸಬಹುದಾದ ಇತರ ಯಾವುದೇ ಮಾಹಿತಿಯನ್ನು ಒಳಗೊಂಡಿರಬಾರದು;

 • ಬೈಬಲ್‌ಪ್ರಾಜೆಕ್ಟ್ ಅಥವಾ ಇತರ ಯಾವುದೇ ವ್ಯಕ್ತಿಯ ಯಾವುದೇ ಪೇಟೆಂಟ್, ಟ್ರೇಡ್‌ಮಾರ್ಕ್, ವ್ಯಾಪಾರ ರಹಸ್ಯಗಳು, ಕೃತಿಸ್ವಾಮ್ಯ, ಕರಾರು ಅಥವಾ ಇತರ ಬೌದ್ಧಿಕ ಸ್ವತ್ತು ಅಥವಾ ಇತರ ಸ್ವಾಮ್ಯದ ಹಕ್ಕುಗಳನ್ನು ಅತಿಕ್ರಮಿಸಬಾರದು;

 • ಅನುಚಿತ ಕಂಟೆಂಟ್‌ಗೆ ಮಕ್ಕಳನ್ನು ಒಡ್ಡುವುದು, ವೈಯಕ್ತಿಕ ಮಾಹಿತಿ ಕೇಳುವುದು ಅಥವಾ ಬೇರೆ ರೀತಿಯಲ್ಲಿ  ಮಕ್ಕಳಿಗೆ ಹಾನಿ ಮಾಡಲು ಅಥವಾ ಶೋಷಣೆ ಮಾಡಲು ಯತ್ನಿಸಬಾರದು;

 • ನಿಮ್ಮ ಗುರುತು ಅಥವಾ ಬೈಬಲ್‌ಪ್ರಾಜೆಕ್ಟ್ ಸೇರಿದಂತೆ, ಯಾವುದೇ ವ್ಯಕ್ತಿ ಅಥವಾ ಸಂಘಟನೆ ಜೊತೆಗಿನ ನಿಮ್ಮ ಸಂಬಂಧವನ್ನು ತಪ್ಪಾಗಿ ಪ್ರತಿನಿಧಿಸಬಾರದು;

 • ಬೇರೆಯವರ ಇ-ಮೇಲ್ ವಿಳಾಸಗಳು, ಬಳಕೆದಾರ ಹೆಸರುಗಳು, ಅಥವಾ ಪಾಸ್‌ವರ್ಡ್‌ಗಳನ್ನು ಯಾವುದೇ ಉದ್ದೇಶಕ್ಕಾಗಿ ಯಾವುದೇ ರೀತಿಯಲ್ಲಿ ಸಂಗ್ರಹಿಸಲು ಪ್ರಯತ್ನಿಸಬಾರದು;

 • ಸ್ವಯಂಚಾಲಿತವಾದ ಅಥವಾ ಅಲ್ಲದ ಚೈನ್ ಲೆಟರ್ಸ್, ಬೃಹತ್ ಅಥವಾ ಜಂಕ್ ಇ-ಮೇಲ್‌ಗಳನ್ನು ಪ್ರಸರಣ ಮಾಡಲು, ಟಿಬಿಪಿ, ಅಥವಾ ನೆಟ್‌ವರ್ಕ್‌ಗಳು ಅಥವಾ ವೆಬ್‌ಸೈಟ್‌ಗೆ ಸಂಪರ್ಕಿತವಾಗಿರುವ ಸೇವೆಗಳಲ್ಲಿ ಹಸ್ತಕ್ಷೇಪ, ಅಡಚಣೆ ಉಂಟುಮಾಡಲು ಅಥವಾ ಅವುಗಳ ಮೇಲೆ ಅನುಚಿತ ಹೊರೆಯನ್ನು ಹೇರಲು, ನಮ್ಮ ಕಂಪ್ಯೂಟರ್‌ಗಳು ಅಥವಾ ಉಪಕರಣಗಳಲ್ಲಿ ಅಥವಾ ಮೂರನೇ ಪಕ್ಷಗಳ ಕಂಪ್ಯೂಟರ್‌ಗಳು ಅಥವಾ ಉಪಕರಣಗಳಲ್ಲಿ ಸ್ಪೈವೇರ್, ಮಾಲ್‌ವೇರ್ ಅಥವಾ ಇತರ ಕಂಪ್ಯೂಟರ್ ಕೋಡ್ ಅನ್ನು ಇನ್‌ಸ್ಟಾಲ್ ಮಾಡಲು ಅಥವಾ ಮಾಡುವುದಕ್ಕೆ ಪ್ರಯತ್ನಿಸಲು ಅಥವಾ ಉತ್ತೇಜಿಸಲು ಯತ್ನಿಸಬಾರದು;

 • ಸ್ಪರ್ಧೆಗಳು, ಸ್ವೀಪ್‌ಸ್ಟೇಕ್‌ಗಳು, ಅಥವಾ ಇತರ ಮಾರಾಟ ಪ್ರಚಾರಗಳು, ವಸ್ತು ವಿನಿಮಯ, ಜಾಹೀರಾತು ಅಥವಾ ಸರಕುಗಳು ಮತ್ತು ಸೇವೆಗಳ ಮಾರಾಟ ಅಥವಾ ಖರೀದಿಯ ಆಫರ್‌ಗಳಂಥ ವಾಣಿಜ್ಯ ಚಟುವಟಿಕೆಗಳ ಜೊತೆ ಸಂಬಂಧ ಹೊಂದಬಾರದು; ಅಥವಾ

 • ಇಲ್ಲದಿದ್ದಲ್ಲಿ ಟಿಬಿಪಿ ತನ್ನ ಸ್ವಂತ ವಿವೇಚನೆ ಮೇರೆಗೆ ನಿರ್ಧರಿಸುವಂತೆ , ಆಕ್ಷೇಪಾರ್ಹ ಅಥವಾ ಕುಟುಂಬಕ್ಕೆ ಆತ್ಮೀಯವಲ್ಲದ ರೀತಿ ಇರಬಾರದು.

ವೆಬ್‌ಸೈಟ್‌ನಲ್ಲಿ ನೀವು ಪೋಸ್ಟ್ ಮಾಡುವ ಮತ್ತು ಇತರ ಬಳಕೆದಾರರಿಗೆ ನೀಡುವ ಮಾಹಿತಿಯನ್ನು ದಯವಿಟ್ಟು ಜಾಗರೂಕತೆಯಿಂದ ಆಯ್ಕೆ ಮಾಡಿ ನಿಮ್ಮ ಪೂರ್ಣ ಹೆಸರು, ದೂರವಾಣಿ ಸಂಖ್ಯೆ, ರಸ್ತೆ ವಿಳಾಸ, ಇ-ಮೇಲ್ ವಿಳಾಸ ಮತ್ತು ನಿಮ್ಮನ್ನು ಗುರುತಿಸುವ ಅಥವಾ ನಿಮ್ಮನ್ನು ಹುಡುಕಲು ಅಥವಾ ನಿಮ್ಮ ಗುರುತು ಕಳ್ಳತನ ಮಾಡಲು ಅಪರಿಚಿತರಿಗೆ ಅವಕಾಶ ಕಲ್ಪಿಸುವ ಇತರ ಮಾಹಿತಿಯನ್ನು ಸಾರ್ವಜನಿಕವಾಗಿ ಪೋಸ್ಟ್ ಮಾಡದಂತೆ ಟಿಬಿಪಿ ನಿಮಗೆ ಸೂಚಿಸುತ್ತದೆ. ನಿಮ್ಮ ಬಳಕೆದಾರ ಸೃಷ್ಟಿಸಿದ ಸಾಮಗ್ರಿ ಮತ್ತು ಅದನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದರಿಂದ ಉಂಟಾಗುವ ಪರಿಣಾಮಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ. ವೆಬ್‌ಸೈಟ್‌ನ ಮೂಲಕ ನಿಮ್ಮ ಸಂಪರ್ಕಕ್ಕೆ ಬಂದಿರುವ ಇತರ ಬಳಕೆದಾರರೊಂದಿಗೆ ವ್ಯವಹರಿಸುವುದಕ್ಕೆ ಸಂಬಂಧಿಸಿದ ಎಲ್ಲ ಅಪಾಯಗಳನ್ನು ನೀವು ಗ್ರಹಿಸುತ್ತೀರಿ, ಮತ್ತು ಕಾನೂನು ಅನುಮತಿಸಿರುವ ಮಟ್ಟಿಗೆ, ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಬಳಕೆದಾರ ಸೃಷ್ಟಿಸಿದ ಯಾವುದೇ ಸಾಮಗ್ರಿಗಳಿಗೆ ಸಂಬಂಧಿಸಿದ ಯಾವುದೇ ದಾವೆಗಳು ಮತ್ತು ಹೊಣೆಗಾರಿಕೆಗಳಿಂದ ಮತ್ತು ಇತರ ಯಾವುದೇ ಬಳಕೆದಾರರ ವರ್ತನೆಗೆ ಸಂಬಂಧಿಸಿದ ಯಾವುದೇ ದಾವೆಗಳಿಂದ ನೀವು ನಮ್ಮನ್ನು ಬಿಡುಗಡೆಗೊಳಿಸುತ್ತೀರಿ.

ಯಾವುದೇ ಸಮಯದಲ್ಲಿ ಮತ್ತು ಸೂಚನೆ ನೀಡದೆ ಯಾವುದೇ ಕಾರಣಕ್ಕಾಗಿ ಬಳಕೆದಾರ ಸೃಷ್ಟಿಸಿದ ಸಾಮಗ್ರಿಯ ಮೇಲ್ವಿಚಾರಣೆ, ವಿಮರ್ಶೆ, ತಪಾಸಣೆ, ಪೋಸ್ಟ್ , ತೆಗೆದುಹಾಕುವಿಕೆ, ತಿರಸ್ಕರಿಸುವಿಕೆ, ಮಾರ್ಪಾಡು ಅಥವಾ ದಾಸ್ತಾನು ಮಾಡುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ ಆದರೆ ಬಾಧ್ಯತೆಗಳನ್ನು ಹೊಂದಿಲ್ಲ. ನೀವು ಮತ್ತು ಇತರ ಯಾವುದೇ ಬಳಕೆದಾರರ ನಡುವಿನ ವಿವಾದಗಳಿಗೆ ಸಂಬಂಧಿಸಿ ಕ್ರಮ ತೆಗೆದುಕೊಳ್ಳುವ ಹಕ್ಕನ್ನೂ ನಾವು ಕಾಯ್ದಿರಿಸಿದ್ದೇವೆ ಮತ್ತು ಇತರ ಬಳಕೆದಾರರೊಂದಿಗಿನ ನಿಮ್ಮ ಸಂವಹನಗಳು ಅಥವಾ ಯಾವುದೇ ವಿವಾದಗಳಿಗೆ ಅಥವಾ ಯಾವುದೇ ಬಳಕೆದಾರರ ಕ್ರಮ ಅಥವಾ ನಿಷ್ಕ್ರಿಯತೆಗೆ ಯಾವುದೇ ಬಾಧ್ಯತೆಗಳನ್ನು ಹೊಂದಿರುವುದಿಲ್ಲ. ವೆಬ್‌ಸೈಟ್‌ನಲ್ಲಿ ನಿಮ್ಮ ವರ್ತನೆ ಮತ್ತು ಇತರ ಬಳಕೆದಾರರೊಂದಿಗಿನ ಸಂವಹನಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ.

ಈ ನಿಯಮಗಳನ್ನು ಬಳಕೆದಾರ ಸೃಷ್ಟಿಸಿದ ಸಾಮಗ್ರಿ ಉಲ್ಲಂಘಿಸಬಹುದು ಅಥವಾ ಇಲ್ಲದಿದ್ದಲ್ಲಿ ಆಕ್ಷೇಪಾರ್ಹವಾಗಿದೆ ಎನ್ನುವ ನಮ್ಮ ನಂಬಿಕೆ ಸೇರಿದಂತೆ, ನಮ್ಮ ಸ್ವಂತ ವಿವೇಚನೆ ಮೇರೆಗೆ  ಸೂಚನೆ ನೀಡದೆ ಯಾವುದೇ ಕಾರಣಕ್ಕಾಗಿ ಬಳಕೆದಾರ ಸೃಷ್ಟಿಸಿದ ಸಾಮಗ್ರಿಯನ್ನು ನಾವು ನಿರಾಕರಣೆ, ಮಾರ್ಪಾಡು ಮಾಡಬಹುದು ಅಥವಾ ತೆಗೆದುಹಾಕಬಹುದು. ಯಾವುದೇ ಬಳಕೆದಾರ ಸೃಷ್ಟಿಸಿದ ಸಾಮಗ್ರಿಯನ್ನು ನಾವು ಸಮರ್ಥಿಸುವುದಿಲ್ಲ ಮತ್ತು ಪೋಸ್ಟ್ ಮಾಡಿದ ಬಳಕೆದಾರ ಸೃಷ್ಟಿಸಿದ ಸಾಮಗ್ರಿ ನಮ್ಮ ಅಭಿಪ್ರಾಯಗಳು, ದೃಷ್ಟಿಕೋನಗಳು ಅಥವಾ ಸಲಹೆಯನ್ನು ಬಿಂಬಿಸುವುದಿಲ್ಲ. ನೀವು ಅಥವಾ ಇತರ ಯಾವುದೇ ಬಳಕೆದಾರ ಅಥವಾ ಮೂರನೇ ಪಕ್ಷದವರು ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡುವ ಅಥವಾ ವೆಬ್‌ಸೈಟ್ ಮೂಲಕ ಕಳುಹಿಸುವ ಯಾವುದೇ ಬಳಕೆದಾರ ಸೃಷ್ಟಿಸಿದ ಸಾಮಗ್ರಿಗಾಗಿ ನಾವು ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಹೊಣೆಗಾರಿಕೆಯನ್ನು ವಹಿಸಿಕೊಳ್ಳುವುದಿಲ್ಲ, ಜೊತೆಗೆ ಯಾವುದೇ ಬಳಕೆದಾರ ಅಥವಾ ಮೂರನೇ ಪಕ್ಷದವರು ಒದಗಿಸಿದ ಪ್ರಸರಣಗಳು, ಸಂವಹನಗಳು ಅಥವಾ ಕಂಟೆಂಟ್‌ಗೆ ಸಂಬಂಧಿಸಿ ಯಾವುದೇ ಕ್ರಮ ಅಥವಾ ನಿಷ್ಕ್ರಿಯತೆಗಳಿಗಾಗಿ ಯಾವುದೇ ಹೊಣೆಗಾರಿಕೆಯನ್ನು ನಾವು ವಹಿಸಿಕೊಳ್ಳುವುದಿಲ್ಲ. 

ವೆಬ್‌ಸೈಟ್ ಸುರಕ್ಷತೆ

ವೆಬ್‌ಸೈಟ್‌ನ ಸುರಕ್ಷತಾ ವೈಶಿಷ್ಟ್ಯಗಳನ್ನು ನೀವು ಉಲ್ಲಂಘಿಸುವುದನ್ನು ಅಥವಾ ಉಲ್ಲಂಘಿಸಲು ಪ್ರಯತ್ನಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ, ಉದಾಹರಣೆಗೆ ಈ ಕೆಳಗಿನವುಗಳ ಮೂಲಕ :

 • ನಿಮ್ಮನ್ನು ಉದ್ದೇಶಿಸಿಲ್ಲದ ಡೇಟಾ ಪ್ರವೇಶಿಸುವುದು ಅಥವಾ ನೀವು ಪ್ರವೇಶಿಸಲು ಅಧಿಕಾರ ಹೊಂದಿಲ್ಲದ ಸರ್ವರ್ ಅಥವಾ ಖಾತೆಗೆ ಲಾಗ್ ಇನ್ ಮಾಡುವುದು;

 • ನಾವು ಹಾಗೆ ಮಾಡುವಂತೆ ನಿಮಗೆ ಲಿಖಿತ ರೂಪದಲ್ಲಿ ಸ್ಪಷ್ಟವಾಗಿ ಅಧಿಕಾರ ನೀಡದ ಹೊರತು, ಸಿಸ್ಟಮ್ ಅಥವಾ ನೆಟ್‌ವರ್ಕ್‌ನ ದೌರ್ಬಲ್ಯವನ್ನು ತನಿಖೆ, ತಪಾಸಣೆ ಅಥವಾ ಪರೀಕ್ಷೆ ಮಾಡಲು ಪ್ರಯತ್ನಿಸುವುದು ಅಥವಾ ಸುರಕ್ಷತೆ ಅಥವಾ ದೃಢೀಕರಣ ಕ್ರಮಗಳನ್ನು ಉಲ್ಲಂಘಿಸುವುದು;

 • ಯಾವುದೇ ಬಳಕೆದಾರನಿಗೆ, ಹೋಸ್ಟ್  ಅಥವಾ ನೆಟ್‌ವರ್ಕ್‌ಗೆ ಒದಗಿಸುವ ಸೇವೆಯಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುವುದು, ಉದಾಹರಣೆಗೆ ಒಂದು ವೈರಸ್ ಹರಿಬಿಡುವುದು, ಓವರ್‌ಲೋಡಿಂಗ್, ಫ್ಲಡಿಂಗ್, ಸ್ಪ್ಯಾಮಿಂಗ್, ಮೇಲ್ ಬಾಂಬಿಂಗ್ ಅಥವಾ ಕ್ರ್ಯಾಶಿಂಗ್ ಮುಂತಾದವು; ಅಥವಾ

 • ಪ್ರಮೋಷನ್‌ಗಳು ಮತ್ತು ಅಥವಾ ಉತ್ಪನ್ನಗಳು ಅಥವಾ ಸೇವೆಗಳ ಜಾಹೀರಾತು ಸೇರಿದಂತೆ, ಅನಪೇಕ್ಷಿತ ಇಮೇಲ್‌ಗಳನ್ನು ಕಳುಹಿಸುವುದು, ಯಾವುದೇ ಇಮೇಲ್ ಅಥವಾ ನ್ಯೂಸ್‌ಗ್ರೂಪ್ ಪೋಸ್ಟಿಂಗ್‌ನಲ್ಲಿ ಯಾವುದೇ ಟಿಸಿಪಿ/ಐಪಿ ಪ್ಯಾಕೆಟ್ ಹೆಡರ್ ಅಥವಾ ಹೆಡರ್ ಮಾಹಿತಿಯ ಯಾವುದೇ ಭಾಗವನ್ನು ತಿರುಚುವುದು.

ವೆಬ್‌ಸೈಟ್‌ನ ಸಮರ್ಪಕ ಕಾರ್ಯನಿರ್ವಹಿಸುವಿಕೆ ಅಥವಾ ವೆಬ್‌ಸೈಟ್‌ನಲ್ಲಿ ನಡೆಸಲಾಗುವ ಯಾವುದೇ ಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡಲು ಅಥವಾ ಹಸ್ತಕ್ಷೇಪ ಮಾಡುವುದಕ್ಕೆ ಪ್ರಯತ್ನಿಸಲು ಯಾವುದೇ ಸಾಧನ, ಸಾಫ್ಟ್‌ವೇರ್ ಅಥವಾ ನಿಯಮಿತ ವಿಧಾನ ಬಳಸುವುದಿಲ್ಲ ಎಂದು ನೀವು ಈ ಮೂಲಕ ಒಪ್ಪುತ್ತೀರಿ. ಮುಂದುವರಿದು, ನಾವು ಈ ವೆಬ್‌ಸೈಟ್‌ನಲ್ಲಿ ಲಭ್ಯವಾಗಿಸುವ ಸರ್ಚ್ ಎಂಜಿನ್ ಮತ್ತು ಸರ್ಚ್ ಏಜೆಂಟ್‌ಗಳನ್ನು ಹೊರತುಪಡಿಸಿ ಹಾಗೂ ಕ್ರೋಮ್, ಫೈರ್‌ಫಾಕ್ಸ್, ಸಫಾರಿ ಅಥವಾ ಎಡ್ಜ್‌ನಂಥ ಮೂರನೇ ಪಕ್ಷದ ವೆಬ್‌ಸೈಟ್‌ಗಳಲ್ಲಿ ಸಾಮಾನ್ಯವಾಗಿ ಲಭ್ಯವಿರುವುದನ್ನು ಹೊರತುಪಡಿಸಿ, ವೆಬ್‌ಸೈಟ್‌ನಲ್ಲಿ ನ್ಯಾವಿಗೇಟ್ ಮಾಡಲು ಅಥವಾ ಹುಡುಕಾಟ ನಡೆಸಲು ಯಾವುದೇ ಎಂಜಿನ್, ಸಾಫ್ಟ್‌ವೇರ್, ಟೂಲ್, ಏಜೆಂಟ್ ಅಥವಾ ಇತರ ಸಾಧನ ಅಥವಾ ಇತರ ಕಾರ್ಯವಿಧಾನವನ್ನು (ಬ್ರೌಸರ್‌ಗಳು, ಸ್ಪೈಡರ್‌ಗಳು, ರೊಬಾಟ್‌ಗಳು, ಅವತಾರ್‌ಗಳು ಅಥವಾ ಇಂಟೆಲಿಜೆಂಟ್ ಏಜೆಂಟ್‌ಗಳು ಸೇರಿದಂತೆ) ಬಳಸುವುದಿಲ್ಲ ಅಥವಾ ಬಳಸಲು ಪ್ರಯತ್ನಿಸುವುದಿಲ್ಲ ಎಂದು ನೀವು ಒಪ್ಪುತ್ತೀರಿ.

ಒಂದು ವೇಳೆ ನೀವು ನಮ್ಮ ಸಿಸ್ಟಮ್ ಅಥವಾ ನೆಟ್‌ವರ್ಕ್ ಸುರಕ್ಷತೆಯನ್ನು ಉಲ್ಲಂಘಿಸಿದರೆ, ನೀವು ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗಬಹುದು. ಅಂಥ ಉಲ್ಲಂಘನೆಗಳನ್ನು ಒಳಗೊಂಡಿರಬಹುದಾದ ಘಟನೆಗಳನ್ನು ನಾವು ತನಿಖೆ ಮಾಡುತ್ತೇವೆ. ಅಂಥ ಉಲ್ಲಂಘನೆಗಳಲ್ಲಿ ತೊಡಗಿರುವ ಬಳಕೆದಾರರ ವಿಚಾರಣೆ ನಡೆಸುವುದಕ್ಕಾಗಿ ನಾವು ಕಾನೂನು ಜಾರಿ ಅಧಿಕಾರಿಗಳೊಂದಿಗೆ ತೊಡಗಿಕೊಳ್ಳಬಹುದು ಅಥವಾ ಅವರಿಗೆ ಸಹಕಾರ ನೀಡಬಹುದು.

ವೆಬ್‌ಸೈಟ್ ಬಳಕೆಯ ಮಾರ್ಪಾಡು, ಅಮಾನತು ಅಥವಾ ಸಮಾಪ್ತಿ

ನಮ್ಮ ಸ್ವಂತ ವಿವೇಚನೆ ಮೇರೆಗೆ ಮತ್ತು ಯಾವುದೇ ಸೂಚನೆ ನೀಡದೆ ಅಥವಾ ಬಾಧ್ಯತೆಯಿಲ್ಲದೆ, ಕೆಲವು ವೈಶಿಷ್ಟ್ಯಗಳನ್ನು ಸೇರಿಸುವುದು ಅಥವಾ ತೆಗೆದುಹಾಕುವುದು ಅಥವಾ ವೆಬ್‌ಸೈಟ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಸೇರಿದಂತೆ, ಯಾವುದೇ ಸಮಯದಲ್ಲಿ ಮತ್ತು ಕಾಲಕಾಲಕ್ಕೆ ವೆಬ್‌ಸೈಟ್‌ನ ಯಾವುದೇ ಆಯಾಮವನ್ನು ಬದಲಾವಣೆ, ಅಮಾನತು ಅಥವಾ ಸ್ಥಗಿತಗೊಳಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಕಾಲಕಾಲಕ್ಕೆ, ವೆಬ್‌ಸೈಟ್‌ನ ಕೆಲವು ಭಾಗ ಅಥವಾ ಇಡೀ ವೆಬ್‌ಸೈಟ್‌ನ ಪ್ರವೇಶವನ್ನು ನಾವು ನಿರ್ಬಂಧಿಸಬಹುದು. ನಮ್ಮ ಸ್ವಂತ ವಿವೇಚನೆ ಮೇರೆಗೆ, ಯಾವುದೇ ಕಾರಣಕ್ಕಾಗಿ ಅಥವಾ ಕಾರಣವಿಲ್ಲದೆ, ಸೂಚನೆ ನೀಡದೆ ಅಥವಾ ಬಾಧ್ಯತೆಯಿಲ್ಲದೆ, ನಿಮ್ಮ ಖಾತೆಯನ್ನು ಸಮಾಪ್ತಿಗೊಳಿಸುವ ಅಥವಾ ಅಮಾನತು ಮಾಡುವ ಅಥವಾ ವೆಬ್‌ಸೈಟ್‌ನ ನಿಮ್ಮ ಬಳಕೆಯನ್ನು ಅಥವಾ ಅದಕ್ಕೆ ಪ್ರವೇಶವನ್ನು ನಿರ್ಬಂಧಿಸುವ ಹಕ್ಕನ್ನೂ ನಾವು ಕಾಯ್ದಿರಿಸಿದ್ದೇವೆ. ಅದಕ್ಕನುಸಾರವಾಗಿ, ಯಾವುದೇ ಕಾರಣಕ್ಕಾಗಿ, ಮತ್ತು ಸೂಚನೆಯಿಲ್ಲದೆ, ಯಾವುದೇ ಸಮಯದಲ್ಲಿ ಮತ್ತು ಯಾವುದೇ ಅವಧಿಗೆ ಸಂಪೂರ್ಣ ವೆಬ್‌ಸೈಟ್ ಅಥವಾ ಯಾವುದೇ ಭಾಗ ನಿಮಗೆ ಲಭ್ಯವಾಗದಿರಬಹುದು.

ಒಂದು ವೇಳೆ ನಾವು ವೆಬ್‌ಸೈಟ್‌ನ ಯಾವುದೇ ಆಯಾಮವನ್ನು ಅಮಾನತು ಮಾಡಿದರೆ ಅಥವಾ ಸ್ಥಗಿತಗೊಳಿಸಿದರೆ ಅಥವಾ ನಿಮ್ಮ ಖಾತೆಯನ್ನು ಸಮಾಪ್ತಿಗೊಳಿಸಿದರೆ, ಯಾವುದೇ ಮಾಹಿತಿ ಅಥವಾ ಕಂಟೆಂಟ್ ಒದಗಿಸುವುದಕ್ಕೆ ನಾವು ಜವಾಬ್ದಾರರಲ್ಲ. ನಿಮ್ಮ ಖಾತೆಯೊಳಗೆ ದಾಸ್ತಾನು ಮಾಡಿರುವ ಅಥವಾ ಅದಕ್ಕೆ ಸಂಬಂಧಿಸಿದ ಮಟ್ಟಿಗೆ ನಿಮ್ಮ ಆದ್ಯತೆಗಳು ಮತ್ತು ಆಸಕ್ತಿಗಳನ್ನೂ ನಾವು ಅಳಿಸಬಹುದು. ಮಾಹಿತಿಗೆ ನೀವು ನಿಗದಿಪಡಿಸಬಹುದಾದ ಯಾವುದೇ ಮೌಲ್ಯವನ್ನು ಗಣನೆಗೆ ತೆಗೆದುಕೊಳ್ಳದೆ ನಾವು ಅಳಿಸಬಹುದಾದ ಯಾವುದೇ ಮಾಹಿತಿಗೆ ಸಂಬಂಧಿಸಿ ನೀವು ಯಾವುದೇ ಪರಿಹಾರಕ್ರಮ ಹೊಂದಿರುವುದಿಲ್ಲ, ಮತ್ತು ನಮ್ಮ ಸರ್ವರ್‌ಗಳಲ್ಲಿ ದಾಸ್ತಾನು ಮಾಡಿರುವ ನಿಮ್ಮ ಯಾವುದೇ ಮಾಹಿತಿಗೆ ನೀವು ನಿಗದಿಪಡಿಸುವ ಯಾವುದೇ ಮೌಲ್ಯವನ್ನು ನಾವು ಸ್ಪಷ್ಟವಾಗಿ ನಿರಾಕರಿಸುತ್ತೇವೆ. 

ಗೌಪ್ಯತೆ ಮತ್ತು ಸಂವಹನ

ಗೌಪ್ಯತೆ ಸೂಚನೆ. ನೀವು ಗೌಪ್ಯತೆ ಸೂಚನೆಯನ್ನು ಓದಿದ್ದೀರಿ ಮತ್ತು ಅರ್ಥಮಾಡಿಕೊಂಡಿದ್ದೀರಿ ಎಂದು ಒಪ್ಪಿಕೊಳ್ಳುತ್ತೀರಿ. ನೀವು ಯಾವುದೇ ಸಮಯದಲ್ಲಿ ನಮ್ಮ ಗೌಪ್ಯತಾ ಸೂಚನೆಯನ್ನು ಪರಿಶೀಲಿಸಬಹುದು.

ಎಲೆಕ್ಟ್ರಾನಿಕ್ ಸಂವಹನಕ್ಕೆ ಸಮ್ಮತಿ ಇ-ಮೇಲ್, ನಮ್ಮ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಸೂಚನೆ, ಅಥವಾ ನಾವು ನಮ್ಮ ಸ್ವಂತ ವಿವೇಚನೆ ಮೇರೆಗೆ ನಿರ್ಧರಿಸುವ ಇತರ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ನಮ್ಮಿಂದ ಎಲೆಕ್ಟ್ರಾನಿಕ್ ರೂಪದಲ್ಲಿ ಸಂವಹನಗಳನ್ನು ಸ್ವೀಕರಿಸಲು ನೀವು ಸಮ್ಮತಿಸುತ್ತೀರಿ. ಲಿಖಿತ ರೂಪದಲ್ಲಿ ನಿಮಗೆ ಸೂಚನೆ, ಬಹಿರಂಗಪಡಿಸುವಿಕೆ, ಒಪ್ಪಂದ ಅಥವಾ ಇತರ ಸಂವಹನವನ್ನು ಕಳುಹಿಸಬೇಕಾದ ಅಗತ್ಯವು ಅಂಥ ಎಲೆಕ್ಟ್ರಾನಿಕ್ ಸಂವಹನಗಳಿಂದ ಪೂರೈಸಲ್ಪಡುತ್ತದೆ ಎನ್ನುವುದಕ್ಕೆ ನೀವು ಒಪ್ಪುತ್ತೀರಿ. ಅಂಥ ಎಲೆಕ್ಟ್ರಾನಿಕ್ ಸಂವಹನಗಳಿಗೆ ನೀವು ಅಥವಾ ನಿಮ್ಮ ನೆಟ್‌ವರ್ಕ್ ಪೂರೈಕೆದಾರರು ಅನ್ವಯಿಸಬಹುದಾದ ಯಾವುದೇ ಸ್ವಯಂಚಾಲಿತ ಫಿಲ್ಟರಿಂಗ್‌ಗೆ ನಾವು ಜವಾಬ್ದಾರರಲ್ಲ.

ಮೂರನೇ ಪಕ್ಷಗಳ ಮೂಲಕ ನಿಮ್ಮ ಮಾಹಿತಿಗೆ ಪ್ರವೇಶ ನೀವು ಸೈನ್ ಅಪ್ ಮಾಡಿದಾಗ ಅಥವಾ ನಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ಬಳಸಿದಾಗ, ಮೂರನೇ ಪಕ್ಷಗಳು ನಿಮ್ಮ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ಪ್ರವೇಶಿಸಲು ನೀವು ನಮಗೆ ಅನುಮತಿ ನೀಡಬಹುದು. ಉದಾಹರಣೆಗೆ, ನೀವು ನಿಮ್ಮ ಫೇಸ್‌ಬುಕ್ ಖಾತೆಯನ್ನು ಲಿಂಕ್ ಮಾಡಬಹುದು, ಇದು ನಮಗೆ ಆ ಖಾತೆಗಳಿಂದ ಮಾಹಿತಿ ಪಡೆಯಲು ಅವಕಾಶ ಕಲ್ಪಿಸುತ್ತದೆ(ಉದಾಹರಣೆಗೆ ನಿಮ್ಮ ಪೂರ್ಣ ಹೆಸರು ಮತ್ತು ಇಮೇಲ್) ಆ ಸೇವೆಗಳಿಂದ ನಾವು ಪಡೆಯುವ ಮಾಹಿತಿಯು ಸಾಮಾನ್ಯವಾಗಿ ನಿಮ್ಮ ಸೆಟ್ಟಿಂಗ್‌ಗಳು ಅಥವಾ ಅವರ ಗೌಪ್ಯತೆ ಸೂಚನೆ ಮೇಲೆ ಅವಲಂಬಿತವಾಗಿರುತ್ತದೆ, ಆದ್ದರಿಂದ ನಿಮ್ಮ ಸೆಟ್ಟಿಂಗ್‌ಗಳನ್ನು ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ. 

ಮೇಲ್ವಿಚಾರಣಾ ಕಾನೂನು

ಯುನೈಟೆಸ್ಟ್ ಸ್ಟೇಟ್ಸ್‌ನಲ್ಲಿರುವ ತನ್ನ ಕಚೇರಿಗಳಿಂದ ಬೈಬಲ್‌ಪ್ರಾಜೆಕ್ಟ್ ವೆಬ್‌ಸೈಟ್ ಅನ್ನು ನಿಯಂತ್ರಿಸುತ್ತದೆ ಮತ್ತು ಕಾರ್ಯಾಚರಣೆ ಮಾಡುತ್ತದೆ. ವೆಬ್‌ಸೈಟ್‌ ಮತ್ತು ಅದರಲ್ಲಿರುವ ಸಾಮಗ್ರಿಗಳಿಗೆ ಸಂಬಂಧಿಸಿದ ಮತ್ತು ಅವುಗಳ ಬಳಕೆಯನ್ನು ಒಳಗೊಂಡ ದಾವೆಗಳು ಯುನೈಟೆಡ್ ಸ್ಟೇಟ್ಸ್ ಮತ್ತು ಒರೆಗಾನ್ ರಾಜ್ಯದ ಕಾನೂನಿನ ನಿಯಂತ್ರಣಕ್ಕೆ ಒಳಪಡುತ್ತವೆ. ಒಂದು ವೇಳೆ ನೀವು ಇನ್ನೊಂದು ಸ್ಥಳದಿಂದ ವೆಬ್‌ಸೈಟ್ ಪ್ರವೇಶಿಸಲು ಆಯ್ಕೆ ಮಾಡಿದರೆ, ನೀವು ಅದನ್ನು ನಿಮ್ಮ ಸ್ವಂತ ನಿರ್ಧಾರದ ಮೇರೆಗೆ ಮಾಡುತ್ತೀರಿ ಮತ್ತು ಅನ್ವಯವಾಗುವ ಸ್ಥಳೀಯ ಕಾನೂನುಗಳ ಅನುಸರಣೆಗೆ ಹೊಣೆಗಾರರಾಗಿರುತ್ತೀರಿ.

ವಾರಂಟಿಯ ಹಕ್ಕುತ್ಯಾಗ

ವೆಬ್‌ಸೈಟ್ ಮತ್ತು ಅದರ ಕಂಟೆಂಟ್‌ ಅನ್ನು ಬೈಬಲ್‌ಪ್ರಾಜೆಕ್ಟ್ "ಇರುವಂತೆ" ಆಧಾರದಲ್ಲಿ ಒದಗಿಸುತ್ತಿದೆ ಮತ್ತು ಶೀರ್ಷಿಕೆಯ ವಾರಂಟಿಗಳು ಅಥವಾ ಷರತ್ತುಗಳು ಅಥವಾ ವ್ಯಾಪಾರಾರ್ಹತೆಯ ಸೂಚಿತ ವಾರಂಟಿಗಳು ಅಥವಾ ನಿರ್ದಿಷ್ಟ ಉದ್ದೇಶಕ್ಕೆ ಸೂಕ್ತತೆ, ಅಥವಾ ಸೈಟ್‌ಗಳು ಅಥವಾ ಅವುಗಳ ಕಾರ್ಯಾಚರಣೆ ಅಥವಾ ಕಂಟೆಂಟ್‌ಗೆ ಉಲ್ಲಂಘನೆಯಾಗದಿರುವಿಕೆ ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಸ್ಪಷ್ಟ ಅಥವಾ ಸೂಚ್ಯವಾದ, ಯಾವುದೇ ಬಗೆಯ ಪ್ರತಿನಿಧಿತ್ವಗಳು ಅಥವಾ ವಾರಂಟಿಗಳನ್ನು ಮಾಡುವುದಿಲ್ಲ. ಕಂಟೆಂಟ್ ನಿಖರ, ಸಂಪೂರ್ಣ ಮತ್ತು ಪ್ರಸ್ತುತವಾಗಿರಬೇಕು ಎಂದು ಟಿಬಿಪಿ ಭಾವಿಸುತ್ತದೆಯಾದರೂ, ಸೈಟ್‌ನಲ್ಲಿ ಪ್ರವೇಶಿಸಬಹುದಾದ ಮಾಹಿತಿ ನಿಖರ, ಸಂಪೂರ್ಣ ಅಥವಾ ಪ್ರಸ್ತುತವಾಗಿದೆ ಎಂದು ಟಿಬಿಪಿ ಪ್ರತಿನಿಧಿಸುವುದಿಲ್ಲ ಅಥವಾ ವಾರಂಟಿ ನೀಡುವುದಿಲ್ಲ. ನಮ್ಮ ಸೈಟ್‌ನ ಲಭ್ಯತೆಯ ಬಗ್ಗೆ ಟಿಬಿಪಿ ಖಾತರಿ ನೀಡುವುದಿಲ್ಲ ಮತ್ತು ನಮ್ಮ ಸೈಟ್‌ನ ನಿಮ್ಮ ಬಳಕೆಯಿಂದ ಯಾವುದೇ ನಿರ್ದಷ್ಟ ಫಲಿತಾಂಶದ ಬಗ್ಗೆ ನಾವು ಭರವಸೆ ನೀಡುವುದಿಲ್ಲ. ನೀವು ನಮ್ಮ ಸೈಟ್ ಅನ್ನು ನಿಮ್ಮ ಸ್ವಂತ ಹೊಣೆಯ ಮೇರೆಗೆ ಬಳಸುತ್ತೀರಿ.

ನಮ್ಮಿಂದ, ನಮ್ಮ ಏಜೆಂಟರು ಅಥವಾ ಪ್ರತಿನಿಧಿಗಳಿಂದ, ಬಳಕೆದಾರರಿಂದ, ಸಂಬಂಧಿಸಿರುವ ಯಾವುದೇ ಸಲಕರಣೆ ಅಥವಾ ಪ್ರೊಗ್ರಾಮಿಂಗ್‌ನಿಂದ ಅಥವಾ ನಮ್ಮ ಸೈಟ್ ಅಥವಾ ಬೇರೆ ರೀತಿಯ ಬಳಕೆಯಿಂದ ಸಂಭವಿಸಿದ, ನಮ್ಮ ಸೈಟ್‌ನಲ್ಲಿ ಅಥವಾ ಸೈಟ್ ಮೂಲಕ ಪೋಸ್ಟ್ ಮಾಡಲಾದ ಯಾವುದೇ ಕಂಟೆಂಟ್‌ನ ನಿಖರತೆ ಮತ್ತು ವಿಶ್ವಾಸಾರ್ಹತೆಗೆ ಸಂಬಂಧಿಸಿರುವುದು ಸೇರಿದಂತೆ, ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ನಮ್ಮ ಸೈಟ್‌ನಲ್ಲಿರುವ ಯಾವುದೇ ಕಂಟೆಂಟ್‌ಗೆ, ನಾವು ಜವಾಬ್ದಾರರಲ್ಲ, ಮತ್ತು ಸ್ಪಷ್ಟ ಅಥವಾ ಸೂಚ್ಯವಾದ, ಯಾವುದೇ ವಾರಂಟಿಗಳನ್ನು ಮಾಡುವುದಿಲ್ಲ. ನಮ್ಮ ಸೈಟ್ ಇತರ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳನ್ನು ಹೊಂದಿರಬಹುದು, ಮತ್ತು ಆ ಇತರ ವೆಬ್‌ಸೈಟ್‌ಗಳಲ್ಲಿ ಹೇಳಲಾಗಿರುವ ಕಂಟೆಂಟ್, ನಿಖರತೆ ಅಥವಾ ಅಭಿಪ್ರಾಯಗಳಿಗೆ ನಾವು ಜವಾಬ್ದಾರರಲ್ಲ, ಮತ್ತು ನಿಖರತೆ ಅಥವಾ ಸಂಪೂರ್ಣತೆಗಾಗಿ ನಾವು ಆ ವೆಬ್‌ಸೈಟ್‌ಗಳನ್ನು ತನಿಖೆ, ಮೇಲ್ವಿಚಾರಣೆ ಅಥವಾ ಪರಿಶೀಲನೆ ಮಾಡುವುದಿಲ್ಲ. ನಮ್ಮ ಸೈಟ್‌ನಲ್ಲಿ ಯಾವುದೇ ಲಿಂಕ್ ಮಾಡಿರುವ ವೆಬ್‌ಸೈಟ್‌ನ ಸೇರ್ಪಡೆಯು ಲಿಂಕ್ ಮಾಡಿರುವ ವೆಬ್‌ಸೈಟ್‌ಗೆ ನಮ್ಮ ಅನುಮೋದನೆ ಅಥವಾ ಸಮರ್ಥನೆಯನ್ನು ಸೂಚಿಸುವುದಿಲ್ಲ. ಈ ಮೂರನೇ ಪಕ್ಷದ ವೆಬ್‌ಸೈಟ್‌ಗಳನ್ನು ನೀವು ಪ್ರವೇಶಿಸಿದಾಗ, ನಿಮ್ಮ ಸ್ವಂತ ಹೊಣೆಯ ಮೇಲೆ ಹಾಗೆ ಮಾಡುತ್ತೀರಿ. ನಮ್ಮ ವೆಬ್‌ಸೈಟ್‌ನಲ್ಲಿ ಅಥವಾ ವೆಬ್‌ಸೈಟ್ ಮೂಲಕ ಪೋಸ್ಟ್ ಮಾಡಬಹುದಾದ ಮೂರನೇ ಪಕ್ಷದ ಜಾಹೀರಾತುಗಳು ಅಥವಾ ಮೂರನೇ ಪಕ್ಷದ ಅಪ್ಲಿಕೇಶನ್‌ಗಳಿಗೆ ನಾವು ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ, ಅಥವಾ ಅಂಥ ಜಾಹೀರಾತುದಾರರು ಒದಗಿಸುವ ಸರಕುಗಳು ಮತ್ತು ಸೇವೆಗಳಿಗೆ ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ. ನಮ್ಮ ಸೈಟ್‌ನಲ್ಲಿ ಯಾವುದೇ ಬಳಕೆದಾರರು ಕಂಟೆಂಟ್ ಪೋಸ್ಟ್ ಮಾಡುವುದು ಸೇರಿದಂತೆ, ನಮ್ಮ ಸೈಟ್‌ಗಳ ಯಾವುದೇ ಬಳಕೆದಾರರ ಯಾವುದೇ ಕಾರ್ಯ ಅಥವಾ ಲೋಪಗಳಿಗೆ (ಆನ್‌ಲೈನ್ ಅಥವಾ ಆಫ್‌ಲೈನ್ ಆಗಿರುವ) ನಾವು ಜವಾಬ್ದಾರರಲ್ಲ. ಕಾರ್ಯಾಚರಣೆ ಅಥವಾ ಪ್ರಸರಣದಲ್ಲಿನ ಯಾವುದೇ ತಪ್ಪು, ಲೋಪ, ಅಡಚಣೆ, ಅಳಿಸುವಿಕೆ, ದೋಷ, ವಿಳಂಬ,ಸಂವಹನ ಸಾಧನಗಳ ವೈಫಲ್ಯ, ಯಾವುದೇ ಬಳಕೆದಾರರ ಸಂವಹನದ ಕಳವು ಅಥವಾ ನಾಶಪಡಿಸುವಿಕೆ ಅಥವಾ ಅನಧಿಕೃತ ಪ್ರವೇಶ, ಅಥವಾ ಮಾರ್ಪಾಡಿಗೆ ನಾವು ಯಾವುದೇ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ. ನಮ್ಮ ಸೈಟ್ ಅಥವಾ ನಿಮ್ಮಿಂದ ಅದರ ಬಳಕೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು, ಹಾನಿ, ಕೇಡು ಅಥವಾ ಅಸಮರ್ಪಕತೆಗೆ ನಾವು ಜವಾಬ್ದಾರರಲ್ಲ (ಸಂವಹನ ನೆಟ್‌ವರ್ಕ್ ಅಥವಾ ಲೈನ್‌ಗಳು, ಕಂಪ್ಯೂಟರ್ ಆನ್‌ಲೈನ್ ಸಿಸ್ಟಮ್‌ಗಳು, ವೈರಸ್‌ಗಳು ಅಥವಾ ಇತರ ಮಾಲ್‌ವೇರ್‌ಗಳು, ಸರ್ವರ್‌ಗಳು ಅಥವಾ ಪೂರೈಕೆದಾರರು, ಕಂಪ್ಯೂಟರ್ ಸಲಕರಣೆಗಳು, ಸಾಫ್ಟ್‌ವೇರ್, ಇಂಟರ್‌ನೆಟ್‌ ಮತ್ತು/ಅಥವಾ ನಮ್ಮ ಸೈಟ್‌ಗಳಲ್ಲಿ ತಾಂತ್ರಿಕ ಸಮಸ್ಯೆಗಳು ಅಥವಾ ಟ್ರಾಫಿಕ್ ದಟ್ಟಣೆಯಿಂದ ಯಾವುದೇ ಇಮೇಲ್‌ನ ವೈಫಲ್ಯದಿಂದ ಅಥವಾ ಅವುಗಳ ಮೂಲಕ ಉದ್ಭವಿಸುವಂಥವು ಸೇರಿದಂತೆ). ನಮ್ಮ ಸೈಟ್‌ಗಳ ಬಳಕೆ, ಯಾವುದೇ ಬಳಕೆದಾರರ ವರ್ತನೆಯಿಂದ ಉದ್ಭವಿಸುವ (ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ), ಅಥವಾ ಬೇರೆ ರೀತಿ ಉಂಟಾಗುವ ವೈಯಕ್ತಿಕ ಬಾಧೆ ಅಥವಾ ಸಾವು ಸೇರಿದಂತೆ, ಯಾವುದೇ ನಷ್ಟ ಅಥವಾ ಹಾನಿಗಳಿಗೆ ನಾವು ಯಾವುದೇ ಸನ್ನಿವೇಶಗಳಲ್ಲೂ ಜವಾಬ್ದಾರರಾಗಿರುವುದಿಲ್ಲ. ನಮ್ಮ ವೆಬ್‌ಸೈಟ್‌ ಬಳಕೆಯಿಂದ (ಅಥವಾ ಬಳಸಲು ಉಂಟಾಗುವ ಅಸಾಮರ್ಥ್ಯದಿಂದ) ನಿಮ್ಮ ಕಂಪ್ಯೂಟರ್, ಸಾಫ್ಟ್‌ವೇರ್, ಮಾಡೆಮ್, ದೂರವಾಣಿ ಅಥವಾ ಸ್ವತ್ತಿಗೆ ಉಂಟಾಗುವ ಯಾವುದೇ ಹಾನಿಗೆ ನಾವು ಜವಾಬ್ದಾರರಲ್ಲ. ನಮ್ಮ ಸೈಟ್‌ಗಳ ಮೂಲಕ ಒಂದು ವೇಳೆ ನಿಮಗೆ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗದಿದ್ದರೆ ಅದಕ್ಕೆ ನಾವು ಹೊಣೆಗಾರರಲ್ಲ. ಕೆಲವು ರಾಜ್ಯಗಳು ಕೆಲವು ವಾರಂಟಿಗಳು ಮತ್ತು/ಅಥವಾ ಬಾಧ್ಯತೆಗಳ ವಿನಾಯಿತಿ ಅಥವಾ ಮಿತಿಗೊಳಿಸುವಿಕೆಗೆ ಅವಕಾಶ ನೀಡುವುದಿಲ್ಲ, ಆದ್ದರಿಂದ ಮೇಲಿನ ಕೆಲವು ಮಿತಿಗೊಳಿಸುವಿಕೆಗಳು ಅಥವಾ ವಿನಾಯಿತಿಗಳು ನಿಮಗೆ ಅನ್ವಯಿಸದಿರಬಹುದು.

ಬಾಧ್ಯತೆಯ ಮಿತಿ

ಕಂಟೆಂಟ್‌ಗಳ ಬಳಕೆ, ನಕಲು ಮಾಡುವಿಕೆ, ಅಥವಾ ಕಂಟೆಂಟ್‌ಗಳ ಪ್ರದರ್ಶನ ಮಾಡಲು ಸಾಧ್ಯವಾಗದಿರುವಿಕೆಗೆ ಸಂಬಂಧಿಸಿದಂತೆ ಅಥವಾ ಅದರಿಂದ ಉದ್ಭವಿಸುವ, ಗುತ್ತಿಗೆ, ಕಟ್ಟುನಿಟ್ಟಿನ ಬಾಧ್ಯತೆ, ನಿರ್ಲಕ್ಷ್ಯ, ಅಥವಾ ಇತರ ವೈಯಕ್ತಿಕ ಅಪರಾಧಕ್ಕೆ ಸಂಬಂಧಿಸಿದ ಕ್ರಮಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಯಾವುದೇ ಕ್ರಮದ ನಮೂನೆಗೆ ಸಂಬಂಧವಿಲ್ಲದಂತೆ, ಬಳಕೆ, ಡೇಟಾ, ಲಾಭಗಳು ಅಥವಾ ಸದಭಿಪ್ರಾಯದ ನಷ್ಟ, ವ್ಯವಹಾರದ ಅಡಚಣೆ, ಅಥವಾ ಕಂಪ್ಯೂಟರ್ ವೈಫಲ್ಯ ಅಥವಾ ಅಸಮರ್ಪಕತೆ ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ವಿಶೇಷ, ಪರೋಕ್ಷ, ಅಸಾಧಾರಣ ಅಥವಾ ಪರಿಣಾಮದ ಹಾನಿಗಳು ಅಥವಾ ಯಾವುದೇ ಇತರ ಹಾನಿಗಳಿಗಾಗಿ ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ನಮ್ಮ ಸೈಟ್‌ಗಳು ಅಥವಾ ಕಂಟೆಂಟ್ ಬಳಕೆಗೆ ಸಂಬಂಧಿಸಿದ ಅಥವಾ ಅದರಿಂದ ಉದ್ಭವಿಸುವ ಯಾವುದಕ್ಕೂ ನಿಮಗೆ ಅಥವಾ ಇತರ ವ್ಯಕ್ತಿಗಳಿಗೆ ಯಾವುದೇ ಸಂದರ್ಭದಲ್ಲೂ ಬೈಬಲ್‌ಪ್ರಾಜೆಕ್ಟ್ ಅಥವಾ ಅದರ ಯಾವುದೇ ಉದ್ಯೋಗಿಗಳು, ನಿರ್ದೇಶಕರು, ಅಧಿಕಾರಿಗಳು, ಏಜೆಂಟರು, ಪೂರೈಕೆದಾರರು ಅಥವಾ ಮೂರನೇ ಪಕ್ಷದ ಸೇವಾ ಪೂರೈಕೆದಾರರು ಹೊಣೆಗಾರರಾಗಿರುವುದಿಲ್ಲ. ಕರಾರಿನ ಉಲ್ಲಂಘನೆ, ವಾರಂಟಿಯ ಉಲ್ಲಂಘನೆ, ಮಾನಹಾನಿ ದಾವೆಗಳು, ಕಟ್ಟುನಿಟ್ಟಿನ ಬಾಧ್ಯತೆ, ತಪ್ಪು ಪ್ರತಿನಿಧಿಸುವಿಕೆಗಳು, ಉತ್ಪನ್ನದ ಬಾಧ್ಯತೆ, ಕಾನೂನಿನ ಉಲ್ಲಂಘನೆಗಳು (ನಿಬಂಧನೆಗಳು ಸೇರಿದಂತೆ), ನಿರ್ಲಕ್ಷ್ಯ, ಮತ್ತು ಇತರ ವೈಯಕ್ತಿಕ ಅಪರಾಧಗಳು ಹಾಗೂ ಮೂರನೇ ಪಕ್ಷದ ದಾವೆಗಳು ಸೇರಿದಂತೆ  ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ ಈ ಮಿತಿಯು ಎಲ್ಲ ದಾವೆಗಳಿಗೆ ಅನ್ವಯಿಸುತ್ತದೆ.

ಮೇಲೆ ಹೇಳಿದ ನಿಬಂಧನೆಗಳಿಗೆ ಸೀಮಿತಗೊಳಿಸದೆ, ಯಾವುದೇ ದಾವೆಗಳಿಗಾಗಿ ನಿಮಗೆ ಅಥವಾ ಇತರ ವ್ಯಕ್ತಿಗೆ ಬೈಬಲ್ ಪ್ರಾಜೆಕ್ಟ್ ಹೊಂದಿರುವ ಒಟ್ಟು ಸಮಗ್ರ ಬಾಧ್ಯತೆಯನ್ನು ಗರಿಷ್ಠವೆಂದರೆ ಕಳೆದ 12 ತಿಂಗಳುಗಳಲ್ಲಿ ನೀವು ಬೈಬಲ್‌ಪ್ರಾಜೆಕ್ಟ್‌ಗೆ ಪಾವತಿಸಿದ ಹಣದ ಮೊತ್ತಕ್ಕೆ ಮಿತಿಗೊಳಿಸಲಾಗುತ್ತದೆ.

ನಷ್ಟಭರ್ತಿ

(I) ನಮ್ಮ ನಿಯಮಗಳ ಉಲ್ಲಂಘನೆಯಾಗುವ ರೀತಿ ನಿಮ್ಮಿಂದ ನಮ್ಮ ಸೈಟ್‌ಗಳ ಬಳಕೆ (II) ನಿಮ್ಮಿಂದ ನಮ್ಮ ನಿಯಮಗಳ ಉಲ್ಲಂಘನೆ, ಅಥವಾ (III) ಈ ನಿಯಮಗಳಲ್ಲಿ ನಿರೂಪಿಸಿರುವ ನಿಮ್ಮ ಪ್ರತಿನಿಧಿತ್ವಗಳು ಮತ್ತು ವಾರಂಟಿಗಳ ಯಾವುದೇ ಉಲ್ಲಂಘನೆಗೆ ಸಂಬಂಧಿಸಿದ ಅಥವಾ ಅವುಗಳಿಂದ ಉದ್ಭವಿಸುವ, ಸಮಂಜಸ ವಕೀಲರ ಶುಲ್ಕ ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಯಾವುದೇ ನಷ್ಟ, ಬಾಧ್ಯತೆ, ವೆಚ್ಚ, ಖರ್ಚು, ದಾವೆ, ಹಾನಿಗಳು, ಅಥವಾ ಬೇಡಿಕೆಗಳಿಂದ ನಮ್ಮನ್ನು, ನಮ್ಮ ಅಂಗಸಂಸ್ಥೆಗಳನ್ನು ಮತ್ತು ನಮ್ಮ ಸಹಸಂಸ್ಥೆಗಳನ್ನು, ಮತ್ತು ಅವರ ಸಂಬಂಧಿತ ಸದಸ್ಯರನ್ನು, ನಿರ್ದೇಶಕರನ್ನು, ಅಧಿಕಾರಿಗಳನ್ನು, ಏಜೆಂಟರನ್ನು, ಪಾಲುದಾರರನ್ನು ಮತ್ತು ಉದ್ಯೋಗಿಗಳನ್ನು ಹಾನಿಯಾಗದಂತೆ ಇರಿಸುವುದಾಗಿ ನೀವು ಒಪ್ಪುತ್ತೀರಿ ಮತ್ತು ನಷ್ಟಭರ್ತಿ ಒದಗಿಸುತ್ತೀರಿ.

ಈ ಬಳಕೆಯ ನಿಯಮಗಳ ಪರಿಷ್ಕರಣೆಗಳು

ಪೂರ್ವ ಸೂಚನೆ ಇಲ್ಲದೆ ಈ ಪೋಸ್ಟ್ ಅನ್ನು ಅಪ್‌ಡೇಟ್ ಮಾಡುವ ಮೂಲಕ ಈ ನಿಯಮಗಳನ್ನು ಪರಿಷ್ಕರಿಸುವ ಹಕ್ಕನ್ನು ಬೈಬಲ್‌ಪ್ರಾಜೆಕ್ಟ್ ಕಾಯ್ದಿರಿಸಿದೆ. ನಿಮಗೆ ಪೂರ್ವ ಸೂಚನೆ ನೀಡಿ ಅಥವಾ ನೀಡದೆ, ಯಾವುದೇ ಕಾರಣಕ್ಕಾಗಿ ಯಾವುದೇ ಸಮಯದಲ್ಲಿ ಈ ಬಳಕೆಯ ನಿಯಮಗಳನ್ನು ನಾವು ಮಾರ್ಪಾಡು ಮಾಡಬಹುದು ಅಥವಾ ಅಪ್‌ಡೇಟ್ ಮಾಡಬಹುದು ಮತ್ತು ಈ ಬಳಕೆಯ ನಿಯಮಗಳಿಗೆ ಮಾಡುವ ಅಂಥ ಯಾವುದೇ ಬದಲಾವಣೆಗಳನ್ನು ಈ ಪುಟದಲ್ಲಿ ಪ್ರಕಟಿಸಿದ ತಕ್ಷಣವೇ ಜಾರಿಗೆ ಬರುತ್ತದೆ ಮತ್ತು ಹಿಂದಿನ ಯಾವುದೇ ಬಳಕೆಯ ನಿಯಮಗಳನ್ನು ಸೂಪರ್‌ಸೀಡ್ ಮಾಡುತ್ತದೆ ಮತ್ತು ಬದಲಿಸುತ್ತದೆ. ಈ ನಿಯಮಗಳ ಯಾವುದೇ ಭಾಗ ಜಾರಿಮಾಡಲಾಗದಂಥದ್ದು ಎಂದು ಕಂಡುಬಂದ ಸಂದರ್ಭದಲ್ಲಿ, ಈ ನಿಯಮಗಳಲ್ಲಿ ಉಳಿದವು ಪೂರ್ಣ ಪ್ರಮಾಣ ಮತ್ತು ಪ್ರಭಾವದಲ್ಲಿ ಜಾರಿಯಲ್ಲಿರುತ್ತದೆ ಮತ್ತು ಇಲ್ಲವಾದಲ್ಲಿ ಜಾರಿಮಾಡಲಾಗದ ಭಾಗವನ್ನು ಕಾನೂನಿನಿಂದ ಅನುಮತಿಸಿದ ಗರಿಷ್ಠ ಮಟ್ಟಿಗೆ ಜಾರಿ ಮಾಡಬಹುದಾದಂತೆ ತಿದ್ದುಪಡಿ ಮಾಡಲಾಗುತ್ತದೆ ಎನ್ನುವುದನ್ನು ನೀವು ಒಪ್ಪುತ್ತೀರಿ. ಅಂಥ ಯಾವುದೇ ಪರಿಷ್ಕರಣೆಯಿಂದ ಬಾಧ್ಯತೆಗೆ ಒಳಪಡಲು ನೀವು ಒಪ್ಪುತ್ತೀರಿ. ಪ್ರಸ್ತುತ ಬಳಕೆಯ ನಿಯಮಗಳನ್ನು ನಿರ್ಧರಿಸಲು ಈ ಪುಟಕ್ಕೆ ನಿಯಮಿತವಾಗಿ ಭೇಟಿ ನೀಡುವಂತೆ ನಿಮಗೆ ಸಲಹೆ ನೀಡಲಾಗುತ್ತದೆ.

ಸಮೂಹಿಕ ದಾವೆ ಕ್ರಮದ ತ್ಯಾಗ

ಯಾವುದೇ ದಾವೆ, ವ್ಯಾಜ್ಯ ಅಥವಾ ವಿವಾದಕ್ಕೆ ಸಂಬಂಧಿಸಿ ಬೈಬಲ್‌ಪ್ರಾಜೆಕ್ಟ್ ವಿರುದ್ಧ ಯಾವುದೇ ಸಾಮೂಹಿಕ ದಾವೆ ಕಾರ್ಯ ಆರಂಭಿಸುವ ಅಥವಾ ಪಾಲ್ಗೊಳ್ಳುವ ಹಕ್ಕನ್ನು ನೀವು ಈ ಮೂಲಕ ಬಿಟ್ಟುಕೊಡುತ್ತೀರಿ, ಮತ್ತು ಅನ್ವಯವಾಗುವಲ್ಲಿ, ಬೈಬಲ್‌ಪ್ರಾಜೆಕ್ಟ್ ವಿರುದ್ಧ ಆರಂಭಿಸಲಾಗಿರುವ ಯಾವುದೇ ಸಾಮೂಹಿಕ ದಾವೆ ಪ್ರಕ್ರಿಯೆಯಿಂದ ಹೊರಗುಳಿಯುವುದಾಗಿ ಒಪ್ಪುತ್ತೀರಿ. 

ಮಧ್ಯಸ್ಥಿಕೆ ಒಪ್ಪಂದ

ಗಮನಿಸಿ: ಈ ಮಧ್ಯಸ್ಥಿಕೆ ಒಪ್ಪಂದ ಕೇವಲ ಯುನೈಟೆಡ್ ಸ್ಟೇಟ್ಸ್‌ನ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ.

ನ್ಯಾಯಾಲಯದಲ್ಲಿ ಅಥವಾ ನ್ಯಾಯಾಧೀಶದ ಮುಂದೆ ದಾವೆಗಳ ವ್ಯಾಜ್ಯ ಮಾಡುವಿಕೆ ಅಥವಾ ಒಂದು ದಾವೆಗೆ ಸಂಬಂಧಿಸಿ ಸಾಮೂಹಿಕ ದಾವೆ ಕ್ರಮ ಅಥವಾ ಪ್ರತಿನಿಧಿಸುವಿಕೆ ಕ್ರಮದಲ್ಲಿ ಪಾಲ್ಗೊಳ್ಳುವಿಕೆಯ ಯಾವುದೇ ಹಕ್ಕುಗಳನ್ನು ತ್ಯಾಗ ಮಾಡುವುದಾಗಿ ನೀವು ಮತ್ತು ಟಿಬಿಪಿ ಒಪ್ಪುತ್ತೀರಿ. ಒಂದು ವೇಳೆ ನೀವು ಕೋರ್ಟ್‌ಗೆ ಹೋದರೆ ಹೊಂದಿರಬಹುದಾದ ಇತರ ಹಕ್ಕುಗಳು ಕೂಡ, ಉದಾಹರಣೆಗೆ ಅನ್ವೇಷಣೆಗಾಗಿ ಪ್ರವೇಶದಂಥವು, ಲಭ್ಯವಿಲ್ಲದಿರಬಹುದು ಅಥವಾ ಮಧ್ಯಸ್ಥಿಕೆಯಲ್ಲಿ ಮಿತಿಗೊಳಪಟ್ಟಿರಬಹುದು.

ಈ ಬಳಕೆಯ ನಿಯಮಗಳು, ಮತ್ತು ಅವುಗಳ ವ್ಯಾಖ್ಯಾನ ಅಥವಾ ಉಲ್ಲಂಘನೆ, ಸಮಾಪ್ತಿ ಅಥವಾ ಅದರಲ್ಲಿನ ಮಾನ್ಯತೆ, ಮಾನ್ಯತೆಯ ಕುರಿತ ವಿವಾದಗಳು, ಈ ಮಧ್ಯಸ್ಥಿಕೆ ನಿಬಂಧನೆಯ ವ್ಯಾಪ್ತಿ ಅಥವಾ ಜಾರಿ ಮಾಡುವಿಕೆಯ ಸಾಧ್ಯತೆ ಸೇರಿದಂತೆ ಈ ಬಳಕೆಯ ನಿಮಯಗಳಿಂದ ಉಂಟಾಗುವ ಸಂಬಂಧಗಳಿಂದ ಉದ್ಭವಿಸುವ ಅಥವಾ ಅವುಗಳಿಗೆ ಸಂಬಂಧಿಸಿದ, ಯಾವುದೇ ಕ್ಲೇಮ್ ಅಥವಾ ವಿವಾದವನ್ನು (ಸಮಗ್ರವಾಗಿ "ವ್ಯಾಪ್ತಿಯಲ್ಲಿರುವ ವಿವಾದಗಳು) ನ್ಯಾಯಾಲಯದ ಬದಲು, ಬಾಧ್ಯತೆಯ, ವೈಯಕ್ತಿಕ ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಗೊಳಿಸಲಾಗುತ್ತದೆ ಮತ್ತು ಪೋರ್ಟ್‌ಲ್ಯಾಂಡ್, ಒರೆಗಾನ್‌ನಲ್ಲಿ ಅಥವಾ ಪಕ್ಷಗಳಿಗೆ ಪರಸ್ಪರ ಒಪ್ಪಿಗೆಯಾಗುವ ಇತರ ಯಾವುದೇ ಸ್ಥಳದಲ್ಲಿ ನಡೆಸಲಾಗುತ್ತದೆ. ಮಧ್ಯಸ್ಥಿಕೆಯನ್ನು ಅಮೆರಿಕನ್ ಆರ್ಬಿಟ್ರೇಷನ್ ಅಸೋಸಿಯೇಷನ್ ("ಎಎಎ") ಇವರು ಅದರ ನಿಯಮಗಳು ಮತ್ತು ಕಾರ್ಯವಿಧಾನಗಳಡಿ ನಡೆಸುತ್ತಾರೆ. ಫೆಡರಲ್ ಆರ್ಬಿಟ್ರೇಷನ್ ಕಾಯ್ದೆಯು ಈ ಮಧ್ಯಸ್ಥಿಕೆ ಒಪ್ಪಂದ ವ್ಯಾಖ್ಯಾನ ಮತ್ತು ಜಾರಿಮಾಡುವಿಕೆಯನ್ನು ನಿಯಂತ್ರಿಸುತ್ತದೆ. ಪರ್ಯಾಯವಾಗಿ, ಒಂದು ವೇಳೆ ನಿಮ್ಮ ದಾವೆಗಳು ಅರ್ಹತೆ ಹೊಂದಿದ್ದರೆ ಮತ್ತು ವಿಷಯವು ಅಂಥ ಕೋರ್ಟ್‌ನಲ್ಲಿ ಉಳಿಯುವವರೆಗೆ ಹಾಗೂ ಮತ್ತು ಕೇವಲ ವೈಯಕ್ತಿಕ ಆಧಾರದಲ್ಲಿ (ಸಾಮೂಹಿಕವಲ್ಲದ, ಪ್ರತಿನಿಧಿತ್ವ ಇಲ್ಲದ) ಮುಂದುವರಿಯುವ ತನಕ ನೀವು ನಿಮ್ಮ ದಾವೆಗಳನ್ನು ಸಣ್ಣ ದಾವೆಯ ನ್ಯಾಯಾಲಯದಲ್ಲಿ ಹೂಡಬಹುದು.

ಯಾವುದೇ ಮಧ್ಯಸ್ಥಿಕೆಯನ್ನು ಆರಂಭಿಸುವ ಮೊದಲು, ಆರಂಭಿಸುವ ಪಕ್ಷವು ಮಧ್ಯಸ್ಥಿಕೆಗೆ ದಾವೆ ಸಲ್ಲಿಸುವ ತಮ್ಮ ಉದ್ದೇಶವನ್ನು ಲಿಖಿತ ಸೂಚನೆಯ ಮೂಲಕ ಇನ್ನೊಂದು ಪಕ್ಷಕ್ಕೆ ಕನಿಷ್ಟ 60 ದಿನಗಳಿಗೆ ಮುಂಚಿತವಾಗಿ ತಿಳಿಸಬೇಕು. ನಮ್ಮೊಂದಿಗೆ ಇರುವ ಫೈಲ್‌ನಲ್ಲಿನ ನಿಮ್ಮ ಇಮೇಲ್ ವಿಳಾಸಕ್ಕೆ ಟಿಬಿಪಿ ಅಂಥ ಸೂಚನೆಗಳನ್ನು ಕಳುಹಿಸುತ್ತದೆ ಮತ್ತು ನೀವು ಅಂಥ ಸೂಚನೆಯನ್ನು ಇಮೇಲ್ ಮೂಲಕ   webmaster@jointhebibleproject.com ಗೆ ಕಳುಹಿಸಬೇಕು. ಅಂಥ 60 ದಿನಗಳ ನೊಟೀಸ್ ಅವಧಿಯಲ್ಲಿ, ಯಾವುದೇ ವ್ಯಾಪ್ತಿಯಲ್ಲಿರುವ ವಿವಾದಗಳನ್ನು ಪರಸ್ಪರ ಚರ್ಚೆ ನಡೆಸಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಪಕ್ಷಗಳು ಯತ್ನಿಸುತ್ತವೆ. ಅಂಥ ಸಂಧಾನದ ಇತ್ಯರ್ಥಕ್ಕೆ ವಿಫಲವಾದಲ್ಲಿ ಮತ್ತು ನೊಟೀಸ್ ಅವಧಿ ವಾಯಿದೆಯಾದಲ್ಲಿ, ಉಭಯ ಪಕ್ಷಗಳಲ್ಲಿ ಯಾರಾದರೂ ಮಧ್ಯಸ್ಥಿಕೆ ದಾವೆಯನ್ನು ಆರಂಭಿಸಬಹುದು.

ಕಾನೂನಿನಡಿ ಅಥವಾ ನ್ಯಾಯವ್ಯಾಪ್ತಿಯಡಿ ನ್ಯಾಯಾಲಯದಲ್ಲಿ ಲಭ್ಯವಿರುವ ಯಾವುದೇ ಪರಿಹಾರವನ್ನು ಮಂಜೂರು ಮಾಡಲು ಮಧ್ಯಸ್ಥಿಕೆದಾರರು ಅಧಿಕಾರ ಹೊಂದಿರುತ್ತಾರೆ ಮತ್ತು ಮಧ್ಯಸ್ಥಿಕೆದಾರನ(ರ) ಯಾವುದೇ ತೀರ್ಪು ಅಂತಿಮ ಹಾಗೂ ಉಭಯಪಕ್ಷಗಳಿಗೆ ಅನ್ವಯಿಸುವಂಥದ್ದಾಗಿರುತ್ತದೆ. ಮಧ್ಯಸ್ಥಿಕೆದಾರರು ನೀಡಿದ ತೀರ್ಪಿಗೆ ಸಂಬಂಧಿಸಿ ಯಾವುದೇ ಸಮರ್ಥ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು. ವಿವಾದಗಳನ್ನು ಮಧ್ಯಸ್ಥಿಕೆಗೆ ಒಪ್ಪಿಸುವ ಮೇಲೆ ಹೇಳಿರುವ ಬಾಧ್ಯತೆಗಳನ್ನು ಪರಿಗಣಿಸದೆ, ಯಾವುದೇ ಸಮರ್ಥ ನ್ಯಾಯವ್ಯಾಪ್ತಿಯ ನ್ಯಾಯಾಲಯದಿಂದ, ಯಾವುದೇ ಸಮಯದಲ್ಲಿ ತಡೆಯಾಜ್ಞೆ ಅಥವಾ ಇತರ ಸಮಾನ ಪರಿಹಾರವನ್ನು ಅಪೇಕ್ಷಿಸುವ ಹಕ್ಕನ್ನು ಪ್ರತಿ ಪಕ್ಷವೂ ಹೊಂದಿರುತ್ತದೆ. ಮಧ್ಯಸ್ಥಿಕೆದಾರರು ಅನ್ವಯವಾಗುವ ಕಾನೂನು ಮತ್ತು ಈ ಬಳಕೆಯ ನಿಯಮಗಳಲ್ಲಿರುವ ನಿಬಂಧನೆಗಳನ್ನು ಅನ್ವಯಿಸುತ್ತಾರೆ ಮತ್ತು ಹಾಗೆ ಮಾಡಲು ವಿಫಲರಾದಲ್ಲಿ ಅದನ್ನು ಮಧ್ಯಸ್ಥಿಕೆದಾರರ ವ್ಯಾಪ್ತಿ ಮೀರಿದೆ ಎಂದು ಮತ್ತು ನ್ಯಾಯಾಂಗ ಪರಿಶೀಲನೆಗೆ ಆಧಾರವಾಗಿ ಪರಿಗಣಿಸಲಾಗುತ್ತದೆ. ವ್ಯಾಪ್ತಿಯಲ್ಲಿರುವ ಯಾವುದೇ ವಿವಾದವನ್ನು ಸಾಮೂಹಿಕ, ಪ್ರತಿನಿಧಿಸುವಿಕೆಯ ಅಥವಾ ಖಾಸಗಿ ವಕೀಲರ ಕ್ರಮದ ವಿವಾದವಾಗಿ ಮಧ್ಯಸ್ಥಿಕೆ ನಡೆಸಲು ಟಿಬಿಪಿಯಾಗಲಿ ಅಥವಾ ನೀವಾಗಲೀ ಹಕ್ಕು ಹೊಂದಿರುವುದಿಲ್ಲ ಮತ್ತು ಸಾಮೂಹಿಕ, ಪ್ರತಿನಿಧಿಸುವಿಕೆ ಅಥವಾ ಖಾಸಗಿ ಅಟಾರ್ನಿ ಜನರಲ್ ಆಧಾರದ ದಾವೆಗಳ ಮಧ್ಯಸ್ಥಿಕೆ ನಡೆಸಲು ಮಧ್ಯಸ್ಥಿಕೆದಾರ(ರು) ಅಧಿಕಾರ ಹೊಂದಿರುವುದಿಲ್ಲ. ಒಂದು ವೇಳೆ ಈ ವಿಭಾಗದಲ್ಲಿನ ಮಧ್ಯಸ್ಥಿಕೆ ಮಾಡುವ ಯಾವುದೇ ನಿಬಂಧನೆ ಅಥವಾ ಒಪ್ಪಂದ ಕಾನೂನುಬಾಹಿರ ಅಥವಾ ಜಾರಿ ಮಾಡಲಾಗದ್ದು ಎಂದು ಕಂಡುಬಂದರೆ, ಉಳಿದ ಮಧ್ಯಸ್ಥಿಕೆ ನಿಯಮಗಳು  ಪೂರ್ಣರೂಪದಲ್ಲಿ ಮಾನ್ಯ, ಬಾಧ್ಯತೆಯ ಮತ್ತು ಜಾರಿ ಮಾಡಬಹುದಾದಂಥವಾಗಿ ಮುಂದುವರಿಯುತ್ತವೆ (ಆದರೆ ಯಾವುದೇ  ಸಂದರ್ಭದಲ್ಲೂ ಸಾಮೂಹಿಕ, ಪ್ರತಿನಿಧಿಸುವಿಕೆ ಅಥವಾ ಖಾಸಗಿ ಅಟಾರ್ನಿ ಜನರಲ್ ಮಧ್ಯಸ್ಥಿಕೆ ಆಗಿರುವುದಿಲ್ಲ). ಈ ನಿಯಮಗಳು ಮತ್ತು ಸಂಬಂಧಿತ ವಹಿವಾಟುಗಳು ಫೆಡರಲ್ ಆರ್ಬಿಟ್ರೇಷನ್ ಕಾಯ್ದೆ,9. ಯು.ಎಸ್‌.ಸಿ. ವಿಭಾಗ 1-16 (ಎಫ್‌ಎಎ) ಇದಕ್ಕೆ ಮತ್ತು, ಇಲ್ಲದಿದ್ದಲ್ಲಿ ಅನ್ವಯವಾಗುವಲ್ಲಿ ಒರೆಗಾನ್ ರಾಜ್ಯದ ಕಾನೂನುಗಳಿಗೆ ಒಳಪಟ್ಟಿರುತ್ತವೆ ಮತ್ತು ಅದರಿಂದ ನಿಯಂತ್ರಿಸಲ್ಪಡುತ್ತವೆ 

 

By using this website, I acknowledge that I am 16 years of age or older, and I agree to the Terms and Conditions and Privacy Policy.
Under 16?
Accept
For advanced bible reading tools:
Login  or  Join
Which language would you like?