ಖಾಸಗಿ ನೊಟೀಸು |
|||||||||||||||||||||||||||
ಬೈಬಲ್ಪ್ರಾಜೆಕ್ಟ್ |
|||||||||||||||||||||||||||
ಪರಿಷ್ಕರಿಸಿರುವುದು ಆಗಸ್ಟ್ 2019 |
|||||||||||||||||||||||||||
ಪೀಠಿಕೆ |
|||||||||||||||||||||||||||
ಬೈಬಲ್ಪ್ರಾಜೆಕ್ಟ್ ನಿಮ್ಮ ಗೌಪ್ಯತೆಯನ್ನು ನಾವು ಗೌರವಿಸುತ್ತದೆ ಮತ್ತು ನಿಮ್ಮ ಸೂಕ್ಷ್ಮ ಮಾಹಿತಿಯನ್ನು ರಕ್ಷಿಸಲು ಬದ್ದವಾಗಿದೆ. ಈ ಗೌಪ್ಯತೆ ನೊಟೀಸ್ ("ಗೌಪ್ಯತೆ ನೊಟೀಸ್") thebibleproject.com, ಸಾಮಾಜಿಕ ಮಾಧ್ಯಮಗಳು, ಅಪ್ಲಿಕೇಶನ್ಗಳು ಮತ್ತು ಸೇವೆಗಳು (ಸಮಗ್ರವಾಗಿ, "ವೆಬ್ಸೈಟ್") ಸೇರಿದಂತೆ ನಮ್ಮ ವೆಬ್ಸೈಟ್ಗಳನ್ನು ಪ್ರವೇಶಿಸುವಾಗ ಮತ್ತು ಬಳಸುವಾಗ, ನಿಮ್ಮ ಮತ್ತು ಬೈಬಲ್ಪ್ರಾಜೆಕ್ಟ್ ಮತ್ತು ಅದರ ಅಂಗಸಂಸ್ಥೆಗಳು, ಕಾರ್ಪೊರೇಟ್ ಮೂಲಸಂಸ್ಥೆ(ಗಳು), ಮತ್ತು ಉಪಸಂಸ್ಥೆಗಳ (ಸಮಗ್ರವಾಗಿ "ಬೈಬಲ್ ಪ್ರಾಜೆಕ್ಟ್", "ನಮಗೆ", "ನಮ್ಮ" ಅಥವಾ "ನಾವು") ನಡುವಿನ ಒಪ್ಪಂದವಾಗಿದೆ ಹಾಗೂ ಬೈಬಲ್ಪ್ರಾಜೆಕ್ಟ್ನ ಬಳಕೆಯ ನಿಯಮಗಳಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಅದರ ಭಾಗವಾಗಿದೆ. |
|||||||||||||||||||||||||||
ವೈಯಕ್ತಿಕ ಮಾಹಿತಿ |
|||||||||||||||||||||||||||
ಈ ಗೌಪ್ಯತೆ ನೊಟೀಸಿನಲ್ಲಿ ಬಳಸಲಾದಂತೆ, "ವೈಯಕ್ತಿಕ ಮಾಹಿತಿ" ಎಂದರೆ ಒಬ್ಬ ವ್ಯಕ್ತಿಯನ್ನು ನಿರ್ದಿಷ್ಟವಾಗಿ ಗುರುತಿಸುವ ಮಾಹಿತಿ (ಉದಾಹರಣೆಗೆ, ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ಬಳಕೆದಾರ ಹೆಸರು ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆ), ಅಥವಾ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಗೆ ನೇರವಾಗಿ ಸಂಪರ್ಕಿಸಲ್ಪಟ್ಟಿರುವ ಆ ವ್ಯಕ್ತಿಯ ಬಗೆಗಿನ ಮಾಹಿತಿ. ವೈಯಕ್ತಿಕ ಮಾಹಿತಿಯು ಇವುಗಳನ್ನು ಒಳಗೊಂಡಿರುವುದಿಲ್ಲ (ಎ) ಒಟ್ಟುಗೂಡಿಸಿದ ಮಾಹಿತಿ, ಅಂದರೆ ವ್ಯಕ್ತಿಗತ ಗುರುತುಗಳು ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕಲಾಗಿರುವ, ವೆಬ್ಸೈಟ್ನ ನಿಮ್ಮ ಬಳಕೆಯ ಬಗ್ಗೆ ಅಥವಾ ಒಂದು ಗುಂಪು ಅಥವಾ ಸೇವೆಗಳ ಅಥವಾ ಬಳಕೆದಾರರ ವರ್ಗದ ಬಗ್ಗೆ ನಾವು ಸಂಗ್ರಹಿಸುವ ಡೇಟಾ, ಅಥವಾ (ಬಿ) ಒಬ್ಬ ವ್ಯಕ್ತಿಗೆ ಪುನಃ ಸುಲಭವಾಗಿ ಜೋಡಣೆ ಮಾಡಲು ಸಾಧ್ಯವಿಲ್ಲದ ಗುರುತು ಅಳಿಸಿರುವ ಮಾಹಿತಿ. |
|||||||||||||||||||||||||||
ಈ ಗೌಪ್ಯತೆ ನೊಟೀಸು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಕ್ಕಾಗಿ, ಬಳಸುವುದಕ್ಕಾಗಿ, ನಿರ್ವಹಿಸುವುದಕ್ಕಾಗಿ, ರಕ್ಷಿಸುವುದಕ್ಕಾಗಿ ಮತ್ತು ಬಹಿರಂಗಪಡಿಸುವುದಕ್ಕಾಗಿ ನಮ್ಮ ಕಾರ್ಯವಿಧಾನಗಳ ಬಗ್ಗೆ ಹಾಗೂ ದೂರವಾಣಿ ಮೂಲಕ, ಮೇಲ್ ಮೂಲಕ ಅಥವಾ ನಮ್ಮ ಭೌತಿಕ ಸ್ಥಳಗಳಲ್ಲಿ ಬೈಬಲ್ಪ್ರಾಜೆಕ್ಟ್ನೊಂದಿಗಿನ ನಿಮ್ಮ ಸಂವಹನಗಳನ್ನು ವಿವರಿಸುತ್ತದೆ. |
|||||||||||||||||||||||||||
ನಿಮ್ಮ ಮಾಹಿತಿಗೆ ಸಂಬಂಧಪಟ್ಟ ನಮ್ಮ ನೀತಿಗಳು ಮತ್ತು ಅಭ್ಯಾಸಗಳ ಬಗ್ಗೆ ಮತ್ತು ಅದನ್ನು ನಾವು ಹೇಗೆ ಪರಿಗಣಿಸುತ್ತೇವೆ ಎಂಬುದನ್ನು ತಿಳಿದುಕೊಳ್ಳಲು ದಯವಿಟ್ಟು ಈ ನೊಟೀಸ್ ಅನ್ನು ಎಚ್ಚರಿಕೆಯಿಂದ ಓದಿರಿ. |
|||||||||||||||||||||||||||
ಸಮ್ಮತಿ |
|||||||||||||||||||||||||||
ವೆಬ್ಸೈಟ್ಗೆ ಪ್ರವೇಶಿಸುವ, ವೆಬ್ಸೈಟ್ನಲ್ಲಿ ಬಳಕೆದಾರ ಪ್ರೊಫೈಲ್ ರಚಿಸುವ, ನಮ್ಮ ಸ್ಟುಡಿಯೋಗೆ ಭೇಟಿ ನೀಡುವ ಅಥವಾ ಬೈಬಲ್ಪ್ರಾಜೆಕ್ಟ್ಗೆ ವೈಯಕ್ತಿಕ ಮಾಹಿತಿಯನ್ನು ಸಲ್ಲಿಸುವ ಮೂಲಕ, ಈ ಗೌಪ್ಯತೆ ನೊಟೀಸಿಗೆ ಮತ್ತು ಈ ಕೆಳಗೆ ವಿವರಿಸಲಾದಂತೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಬಳಸಲು ನೀವು ಸಮ್ಮತಿಸುತ್ತೀರಿ. ನಿಮಗೆ ತಿಳಿಸುವುದಕ್ಕಾಗಿ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ನಿಮ್ಮಿಂದ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ವಿವಿಧ ಹಂತಗಳಲ್ಲಿ ನೀವು ಒಪ್ಪುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಒಂದು ವೇಳೆ ನೀವು ನಮ್ಮ ನೀತಿಗಳು ಮತ್ತು ಅಭ್ಯಾಸಗಳನ್ನು ಒಪ್ಪದಿದ್ದರೆ, ಈ ವೆಬ್ಸೈಟ್ನ ಕೆಲವು ಭಾಗಗಳನ್ನು ಪ್ರವೇಶಿಸಲು ಅಥವಾ ಅವುಗಳ ಲಾಭ ಪಡೆಯಲು ನಿಮಗೆ ಸಾಧ್ಯವಾಗದಿರಬಹುದು. |
|||||||||||||||||||||||||||
ವ್ಯಾಪ್ತಿ |
|||||||||||||||||||||||||||
ಈ ಗೌಪ್ಯತಾ ನೊಟೀಸು ಈ ಕೆಳಗಿನ ಸಂದರ್ಭಗಳಲ್ಲಿ ನಾವು ಸಂಗ್ರಹಿಸುವ ಮಾಹಿತಿಗೆ ಅನ್ವಯವಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ: |
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
ಈ ನೊಟೀಸು ಬೈಬಲ್ಪ್ರಾಜೆಕ್ಟ್ನಿಂದ ಕಾರ್ಯಾಚರಿಸದಿರುವ ಮೊಬೈಲ್ ಅಪ್ಲಿಕೇಶನ್ಗಳು, ಕಂಟೆಂಟ್ ಅಥವಾ ವೆಬ್ಸೈಟ್ಗಳ ಮೂಲಕ ಸೇರಿದಂತೆ ಇತರೆ ಯಾವುದೇ ವಿಧಾನದಲ್ಲಿ ನಿಮ್ಮ ಬಗ್ಗೆ ಸಂಗ್ರಹಿಸಿದ ಮಾಹಿತಿಗೆ ಅನ್ವಯಿಸುವುದಿಲ್ಲ. |
|||||||||||||||||||||||||||
ಕಾನೂನುಬದ್ಧ ಆಧಾರ |
|||||||||||||||||||||||||||
(ಎ) ಅನ್ವಯಿಸಿದಾಗ, ನಿಮ್ಮ ಒಪ್ಪಿಗೆಯೊಂದಿಗೆ ಅಥವಾ (ಬಿ) ಹಾಗೆ ಮಾಡಲು ನಮಗೆ ಕಾನೂನುಬದ್ಧ ಆಸಕ್ತಿ ಇದ್ದರೆ ಮಾತ್ರ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. ಒಂದು ವೇಳೆ ನಿಮ್ಮ ಸಮ್ಮತಿಯ ಮೇರೆಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸಿದರೆ ಅಥವಾ ಬಳಸಿದರೆ, ಯಾವುದೇ ಬದಲಾವಣೆಗಳ ಬಗ್ಗೆ ಕೂಡ ನಾವು ನಿಮಗೆ ತಿಳಿಸುತ್ತೇವೆ ಮತ್ತು ಅಗತ್ಯವಿರುವಂತೆ ಹೆಚ್ಚಿನ ಸಮ್ಮತಿಯನ್ನು ನಿಮ್ಮಿಂದ ಕೋರುತ್ತೇವೆ. |
|||||||||||||||||||||||||||
ಮಕ್ಕಳ ಗೌಪ್ಯತೆ |
|||||||||||||||||||||||||||
ಬೈಬಲ್ಪ್ರಾಜೆಕ್ಟ್ ಮಕ್ಕಳ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದಂತೆ ಇನ್ನಷ್ಟು ಗೌಪ್ಯತೆಯ ರಕ್ಷಣೆಯನ್ನು ನೀಡುವ ಅಗತ್ಯತೆಯನ್ನು ಗುರುತಿಸುತ್ತದೆ. ಮಗುವಿನ ಹೆತ್ತವರು ಅಥವಾ ಪೋಷಕರಿಂದ ಒಪ್ಪಿಗೆ ಪಡೆಯದೆ 16 ವರ್ಷದೊಳಗಿನ ಮಕ್ಕಳಿಂದ ನಾವು ಯಾವುದೇ ವೈಯಕ್ತಿಕ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಸಂಗ್ರಹಿಸುವುದಿಲ್ಲ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ವೆಬ್ಸೈಟ್ನಲ್ಲಿ ನೋಂದಾಯಿಸಲು ಬಯಸಿದರೆ, ನಾವು ಮಗುವಿನ ನೋಂದಣಿಯನ್ನು ಸಕ್ರಿಯಗೊಳಿಸುವುದಕ್ಕೆ ಮುಂಚೆ ಮಗುವಿನ ಹೆತ್ತವರು ಅಥವಾ ಪೋಷಕರು ನಮ್ಮ ಇಮೇಲ್ ದೃಢೀಕರಣ ಪ್ರಕ್ರಿಯೆಯ ಮೂಲಕ ನೋಂದಣಿಗೆ ಒಪ್ಪಿಗೆ ನೀಡುವುದನ್ನು ಬೈಬಲ್ಪ್ರಾಜೆಕ್ಟ್ ಅಗತ್ಯಪಡಿಸುತ್ತದೆ. ಒಂದು ವೇಳೆ ಮಗುವಿನ ನೋಂದಣಿ ಮನವಿಯ 24 ಗಂಟೆಗಳ ಒಳಗಾಗಿ ಬೈಬಲ್ಪ್ರಾಜೆಕ್ಟ್ ಹೆತ್ತವರು ಅಥವಾ ಪೋಷಕರ ಒಪ್ಪಿಗೆಯನ್ನು ಸ್ವೀಕರಿಸದಿದ್ದರೆ, ಅವರ ನೋಂದಣಿ ಮನವಿಯ ಭಾಗವಾಗಿ ಮಗುವು ನಮಗೆ ಒದಗಿಸಿರಬಹುದಾದ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಅಳಿಸಿಹಾಕುತ್ತೇವೆ. ನೀವು 16 ವರ್ಷದೊಳಗಿನವರಾಗಿದ್ದರೆ ಮತ್ತು ನಿಮ್ಮ ಹೆತ್ತವರು ಅಥವಾ ಪೋಷಕರು ನಮ್ಮ ವೆಬ್ಸೈಟ್ ನೋಂದಣಿ ಮತ್ತು ಒಪ್ಪಿಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರದಿದ್ದರೆ, ಈ ವೆಬ್ಸೈಟ್ ಅನ್ನು ಬಳಸಬಾರದು, ವೆಬ್ಸೈಟ್ ಮೂಲಕ ಖರೀದಿ ಮಾಡಬಾರದು ಅಥವಾ ದೇಣಿಗೆ ನೀಡಬಾರದು, ವೆಬ್ಸೈಟ್ನ ಸಂವಾದಾತ್ಮಕ ಅಥವಾ ಸಾರ್ವಜನಿಕ ಕಾಮೆಂಟ್ ವೈಶಿಷ್ಟ್ಯಗಳನ್ನು ಬಳಸಬಾರದು ಅಥವಾ ಯಾವುದೇ ವೈಯಕ್ತಿಕ ಮಾಹಿತಿಯೊಂದಿಗೆ ಬೈಬಲ್ಪ್ರಾಜೆಕ್ಟ್ ಅನ್ನು ಒದಗಿಸಬಾರದು ಎಂದು ಬೈಬಲ್ಪ್ರಾಜೆಕ್ಟ್ ನಿಮಗೆ ಸೂಚಿಸುತ್ತದೆ. |
|||||||||||||||||||||||||||
ಬೈಬಲ್ಪ್ರಾಜೆಕ್ಟ್ ಒಂದು 501 (ಸಿ) (3) ಲಾಭರಹಿತ ನಿಗಮವಾಗಿದೆ, ಆದುದರಿಂದ ಇದು ಮಕ್ಕಳ ಆನ್ಲೈನ್ ಗೌಪ್ಯತೆ ಸಂರಕ್ಷಣಾ ಕಾಯ್ದೆಯಿಂದ ವಿನಾಯಿತಿ ಪಡೆದಿದೆ. ಅದರ ಹೊರತಾಗಿಯೂ, ನಮ್ಮ ವಿಷಯವನ್ನು ಮಾಹಿತಿಯುಕ್ತವಾಗಿ ಕಾಣುವ ಮಕ್ಕಳ ಗೌಪ್ಯತೆಯನ್ನು ಬೈಬಲ್ಪ್ರಾಜೆಕ್ಟ್ ಗೌರವಿಸುತ್ತದೆ. ಈ ಗೌಪ್ಯತೆ ನೊಟೀಸಿನ ಎಲ್ಲಾ ನಿಬಂಧನೆಗಳು ಮಕ್ಕಳು ಸೇರಿದಂತೆ ಸೈಟ್ನ ಎಲ್ಲಾ ಬಳಕೆದಾರರಿಗೆ ಅನ್ವಯಿಸುತ್ತವೆ. ಯಾವುದೇ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ನಲ್ಲಿ ಮಾಹಿತಿ ಹಂಚಿಕೊಳ್ಳುವ ಮೊದಲು ಚಿಕ್ಕ ವಯಸ್ಸಿನ ಸಂದರ್ಶಕರು ಯಾವಾಗಲೂ ತಮ್ಮ ಹೆತ್ತವರು ಅಥವಾ ಪೋಷಕರೊಂದಿಗೆ ಪರಿಶೀಲಿಸಬೇಕು ಮತ್ತು ವೈಯಕ್ತಿಕ ಮಾಹಿತಿಯ ಆನ್ಲೈನ್ ಹಂಚಿಕೆಗೆ ಸಂಬಂಧಿಸಿದಂತೆ ತಮ್ಮ ಮನೆಯ ಮಾರ್ಗಸೂಚಿಗಳನ್ನು ಚರ್ಚಿಸಲು ಕುಟುಂಬಗಳಿಗೆ ನಾವು ಪ್ರೋತ್ಸಾಹಿಸುತ್ತೇವೆ. |
|||||||||||||||||||||||||||
ಹೆತ್ತವರು ಅಥವಾ ಪೋಷಕರ ಒಪ್ಪಿಗೆಯಿಲ್ಲದೆ ಬೈಬಲ್ಪ್ರಾಜೆಕ್ಟ್ 16 ವರ್ಷದೊಳಗಿನ ಮಗುವಿನಿಂದ ಅಥವಾ ಮಗುವಿನ ಬಗ್ಗೆ ಮಾಹಿತಿಯನ್ನು ಹೊಂದಿರಬಹುದು ಎಂದು ನೀವು ಭಾವಿಸಿದರೆ, ಅಥವಾ ನಿಮ್ಮ ಮಗುವಿನ ಬಗ್ಗೆ ಬೈಬಲ್ಪ್ರಾಜೆಕ್ಟ್ ಹೊಂದಿರುವ ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸಲು ಅಥವಾ ಅಳಿಸಲು ನೀವು ಬಯಸಿದರೆ, ದಯವಿಟ್ಟು ನಮ್ಮನ್ನು ಈ ವಿಳಾಸದಲ್ಲಿ ಸಂಪರ್ಕಿಸಿ webmaster@jointhebibleproject.com ಅಥವಾ ಶುಲ್ಕರಹಿತ ಸಂಖ್ಯೆ (855) 700-9109 ನಲ್ಲಿ ಸಂಪರ್ಕಿಸಬಹುದು. |
|||||||||||||||||||||||||||
ನಾವು ನಿಮ್ಮ ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ |
|||||||||||||||||||||||||||
ನೀವು ನಮ್ಮ ವೆಬ್ಸೈಟ್ ಅಥವಾ ಸ್ಟುಡಿಯೋಗೆ ಭೇಟಿ ನೀಡಿದಾಗ, ನಾವು ನಿಮ್ಮಿಂದ ಕೆಲವು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ನಾವು ಈ ಕೆಳಗಿನ ಮಾಹಿತಿಯನ್ನು ಸಂಗ್ರಹಿಸುತ್ತೇವೆ: |
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
ನೀವು ನಮ್ಮಲ್ಲಿ ನೋಂದಾಯಿಸಿಕೊಂಡರೆ, ನಮ್ಮ ವೆಬ್ಸೈಟ್ನ ಕೆಲವು ಆಫರ್ಗಳು, ಸೇವೆಗಳು ಮತ್ತು ಭಾಗಗಳನ್ನು ಮಾತ್ರ ನೀವು ಪ್ರವೇಶಿಸಬಹುದು ಎಂಬುದನ್ನು ದಯವಿಟ್ಟು ನೆನಪಿಡಿ. ನಮ್ಮ ಸೇವೆಗಳನ್ನು ಸ್ವೀಕರಿಸಲು ಅಗತ್ಯವಾದ ಕನಿಷ್ಠ ಮಟ್ಟಕ್ಕೆ ನೀವು ನಮಗೆ ಒದಗಿಸುವ ಮಾಹಿತಿಯನ್ನು ಮಿತಿಗೊಳಿಸಿಕೊಳ್ಳಲು ನಿಮಗೆ ಸ್ವಾಗತವಿದೆ, ಮತ್ತು ನಿಮ್ಮ ಬಗ್ಗೆ ನಮ್ಮಲ್ಲಿರುವ ಮಾಹಿತಿಯನ್ನು ಸಂಪಾದಿಸಲು ನೀವು ಯಾವುದೇ ಸಮಯದಲ್ಲಿ ಬೈಬಲ್ಪ್ರಾಜೆಕ್ಟ್ ಅನ್ನು ಸಂಪರ್ಕಿಸಬಹುದು. ಒಂದು ವೇಳೆ ನೀವು ನಿರಾಕರಿಸಿದರೆ, ಅಥವಾ ನಂತರ ನಿಮ್ಮ ಸಮ್ಮತಿಯನ್ನು ಹಿಂತೆಗೆದುಕೊಂಡರೆ, ನಿಮ್ಮೊಂದಿಗೆ ಸಂವಹನ ನಡೆಸಲು ಅಥವಾ ನಮ್ಮ ಸೇವೆಗಳನ್ನು ನಿಮಗೆ ಒದಗಿಸಲು ನಮಗೆ ಬಹುತೇಕ ಸಾಧ್ಯವಾಗದಿರಬಹುದು ಎಂಬುದನ್ನು ದಯವಿಟ್ಟು ಗಮನಿಸಿ. |
|||||||||||||||||||||||||||
ನೀವು ನಮಗೆ ನೀಡುವ ಮಾಹಿತಿ. |
|||||||||||||||||||||||||||
ನೀವು ನಮ್ಮ ಸ್ಟುಡಿಯೊಗೆ ಖುದ್ದಾಗಿ ಭೇಟಿ ನೀಡಿದಾಗ ಅಥವಾ ವೆಬ್ಸೈಟ್ನಲ್ಲಿ ನಮ್ಮೊಂದಿಗೆ ಸಂವಹನ ನಡೆಸಿದಾಗ ನಿಮ್ಮ ಸಮ್ಮತಿಯೊಂದಿಗೆ ನಾವು ನಿಮ್ಮಿಂದ ನೇರವಾಗಿ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ನೀವು ನಮಗೆ ಒದಗಿಸುವ ಮಾಹಿತಿಯು ಈ ಕೆಳಗಿನವುಗಳನ್ನು ಒಳಗೊಂಡಿರಬಹುದು: |
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
ಸ್ವಯಂಚಾಲಿತ ಡೇಟಾ ಸಂಗ್ರಹಣೆ ವಿಧಾನಗಳ ಮೂಲಕ ನಾವು ಸಂಗ್ರಹಿಸುವ ಮಾಹಿತಿ. |
|||||||||||||||||||||||||||
ನೀವು ನಮ್ಮ ವೆಬ್ಸೈಟ್ನೊಂದಿಗೆ ನ್ಯಾವಿಗೇಟ್ ಮತ್ತು ಸಂವಹನ ಮಾಡಿದಂತೆ, ನಾವು ನಿಮ್ಮ ಸಲಕರಣೆ, ಬ್ರೌಸಿಂಗ್ ಕ್ರಮಗಳು ಮತ್ತು ಮಾದರಿಗಳ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಸಂಗ್ರಹಿಸುವುದಕ್ಕಾಗಿ ವೆಬ್ಸೈಟ್ ಅನಲಿಟಿಕ್ಸ್ನಂತಹ ಸ್ವಯಂಚಾಲಿತ ಡೇಟಾ ಸಂಗ್ರಹಣಾ ವಿಧಾನಗಳನ್ನು ಬಳಸಬಹುದು. ನಾವು ಈ ಮಾಹಿತಿಯನ್ನು ವೆಬ್ಸೈಟ್ ನಿರ್ವಹಣೆಯ ಮತ್ತು ಸುಧಾರಿಸುವ ನಮ್ಮ ಕಾನೂನುಬದ್ಧ ಹಿತಾಸಕ್ತಿಗಳನ್ನು ಸಾಧಿಸಲು ಮತ್ತು ನಮ್ಮ ಪ್ರಭಾವ ಹಾಗೂ ಮಾರ್ಕೆಟಿಂಗ್ ಪ್ರಯತ್ನಗಳನ್ನು ಮಾಪನ ಮಾಡುವುದಕ್ಕಾಗಿ ಸಂಗ್ರಹಿಸುತ್ತೇವೆ. ಸ್ವಯಂಚಾಲಿತ ಡೇಟಾ ಸಂಗ್ರಹಣೆ ತಂತ್ರಜ್ಞಾನಗಳ ಮೂಲಕ ನಾವು ಸಂಗ್ರಹಿಸಿದ ಮಾಹಿತಿಯು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ: |
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
ನಾವು ಸಂಗ್ರಹಿಸುವ ಮಾಹಿತಿಯು ಸ್ವಯಂಚಾಲಿತವಾಗಿ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರಬಹುದು, ಅಥವಾ ನಾವು ಮಾಹಿತಿಯನ್ನು ನಿರ್ವಹಿಸಬಹುದು ಅಥವಾ ಇತರ ರೀತಿಯಲ್ಲಿ ಸಂಗ್ರಹಿಸುವ ಅಥವಾ ಮೂರನೇ ಪಕ್ಷಗಳಿಂದ ಸ್ವೀಕರಿಸುವ ವೈಯಕ್ತಿಕ ಮಾಹಿತಿಯೊಂದಿಗೆ ಅದನ್ನು ಸಂಯೋಜಿಸಬಹುದು. ಈ ಮಾಹಿತಿಯನ್ನು ಸೈಟ್ನ ಸಂದರ್ಶಕರು ಮತ್ತು ಟ್ರಾಫಿಕ್ ಬಗ್ಗೆ ಒಟ್ಟುಗೂಡಿಸಿದ ಮಾಹಿತಿಯಲ್ಲಿ ವಿಲೀನಗೊಳಿಸಲೂಬಹುದು. ಈ ಪ್ಯಾರಾಗ್ರಾಫ್ನಲ್ಲಿ ವಿವರಿಸಿದಂತೆ ಒಂದು ವೇಳೆ ಬೈಬಲ್ಪ್ರಾಜೆಕ್ಟ್ ನಿಮ್ಮ ಅನಾಮಧೇಯ ಮತ್ತು ತಾಂತ್ರಿಕ ಮಾಹಿತಿ ಸಂಗ್ರಹಿಸುವುದನ್ನು ಮತ್ತು ಬಳಸುವುದನ್ನು ನೀವು ಇಷ್ಟಪಡದಿದ್ದರೆ, ತಕ್ಷಣವೇ ವೆಬ್ಸೈಟ್ ಬಳಸುವುದನ್ನು ನಿಲ್ಲಿಸಿ, ಅಥವಾ "ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಿಯಂತ್ರಿಸುವುದು" ಇದರಡಿಯಲ್ಲಿ ವಿವರಿಸಿರುವ ರೀತಿ ನಮ್ಮನ್ನು ಸಂಪರ್ಕಿಸಿ. |
|||||||||||||||||||||||||||
ನಾವು ಇತರೆ ವೆಬ್ಸೈಟ್ಗಳಿಂದ ಸಂಗ್ರಹಿಸುವ ಮಾಹಿತಿ |
|||||||||||||||||||||||||||
ಬೈಬಲ್ಪ್ರಾಜೆಕ್ಟ್ ನಮ್ಮ ಸಾಮಾಜಿಕ ಮಾಧ್ಯಮ ಜಾಹೀರಾತುಗಳು ಮತ್ತು ಪೋಸ್ಟ್ಗಳ ಪರಿಣಾಮಕಾರಿತ್ವವನ್ನು ಮಾಪನ ಮಾಡುವ ನಮ್ಮ ಕಾನೂನುಬದ್ಧ ಹಿತಾಸಕ್ತಿಯನ್ನು ಸಾಧಿಸಲು ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳಿಂದ (ಉದಾ: ಫೇಸ್ಬುಕ್, ಯುಟ್ಯೂಬ್ ಅಥವಾ ಟ್ವಿಟರ್) ನಮ್ಮ ವೆಬ್ಸೈಟ್ಗೆ ಬರುವ ಬಳಕೆದಾರರ ಸಂಖ್ಯೆಯ ಜಾಡನ್ನು ಇರಿಸುತ್ತದೆ. ಒಂದು ವೇಳೆ ನೀವು ಒಂದು ಸಾಮಾಜಿಕ ನೆಟ್ವರ್ಕಿಂಗ್ ಸೈಟ್ನಿಂದ ನಮ್ಮ ವೆಬ್ಸೈಟ್ಗೆ ಪ್ರವೇಶ ಪಡೆದರೆ ಅಥವಾ ಇಲ್ಲದಿದ್ದಲ್ಲಿ ಒಂದು ಸಾಮಾಜಿಕ ನೆಟ್ವರ್ಕಿಂಗ್ ಸೈಟ್ನೊಂದಿಗೆ ನಮ್ಮೊಂದಿಗಿನ ನಿಮ್ಮ ಖಾತೆಯನ್ನು ಸಂಯೋಜಿಸಲು ಒಪ್ಪಿಕೊಂಡರೆ, ನಾವು ಅಂತಹ ಸಾಮಾಜಿಕ ನೆಟ್ವರ್ಕಿಂಗ್ ಸೈಟ್ನಿಂದ ಕೂಡ ನಿಮ್ಮ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಸ್ವೀಕರಿಸಬಹುದು. ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸ್ವೀಕರಿಸಬಹುದಾದ ಸಾಮಾಜಿಕ ಮಾಧ್ಯಮ ಸೈಟ್ಗಳು BP ಯಿಂದ ನಿಯಂತ್ರಿಸಲ್ಪಡುವುದಿಲ್ಲ ಅಥವಾ ಮೇಲ್ವಿಚಾರಣೆಗೆ ಒಳಪಡುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಸಾಮಾಜಿಕ ಮಾಧ್ಯಮ ಸೈಟ್ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತದೆ ಎಂಬುದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ಸಾಮಾಜಿಕ ಮಾಧ್ಯಮ ಸೈಟ್ ಪೂರೈಕೆದಾರರಿಗೆ ನಿರ್ದೇಶಿಸಬೇಕು. ನಾವು ನಿಮ್ಮಿಂದ ನೇರವಾಗಿ ಸಂಗ್ರಹಿಸುವ ಮಾಹಿತಿಯೊಂದಿಗೆ ನಾವು ಈ ಮಾಹಿತಿಯನ್ನು ಇಟ್ಟುಕೊಳ್ಳಬಹುದು. |
|||||||||||||||||||||||||||
ನಾವು ನಿಮ್ಮ ಮಾಹಿತಿಯನ್ನು ಬಳಸಬಹುದಾದ ಇತರೆ ಮಾರ್ಗಗಳು |
|||||||||||||||||||||||||||
ನಾವು ನಿಮ್ಮಿಂದ ಅಥವಾ ನಿಮ್ಮ ಕುರಿತು ಸಂಗ್ರಹಿಸುವ ವೈಯಕ್ತಿಕ ಮಾಹಿತಿಯನ್ನು ಈ ಕಾರಣಗಳಿಗಾಗಿ ಕೂಡ ಬಳಸಬಹುದು: |
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
ನಿಮಗೆ ಆಸಕ್ತಿಯಿರಬಹುದಾದ ಜಾಹೀರಾತುಗಳು ಅಥವಾ ಪ್ರಸ್ತಾಪಗಳನ್ನು ಗುರುತಿಸುವಲ್ಲಿ ಸಹಾಯಕವಾಗಲು ವೆಬ್ಸೈಟ್ನಲ್ಲಿ (ಉದಾ., ಕ್ಲಿಕ್ ಸ್ಟ್ರೀಮ್ ಮಾಹಿತಿ, ಬ್ರೌಸರ್ ವಿಧ, ಸಮಯ ಮತ್ತು ದಿನಾಂಕ, ಕ್ಲಿಕ್ ಮಾಡಿದ ಅಥವಾ ಸ್ಕ್ರಾಲ್ ಮಾಡಿದ ವಿಷಯ) ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ನಿಮ್ಮ ಚಟುವಟಿಕೆಗಳನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಬೈಬಲ್ ಪ್ರಾಜೆಕ್ಟ್ ಕುಕೀ ಅಥವಾ ಮೂರನೇ ಪಕ್ಷದ ವೆಬ್ ಬೀಕನ್ ಅನ್ನು ಬಳಸಬಹುದು. ಒಂದು ವೇಳೆ ಅನುಗುಣವಾದ ವಿಷಯ ಮತ್ತು ಜಾಹೀರಾತನ್ನು ನಿಮಗೆ ಒದಗಿಸಲು ನಿಮ್ಮ ಆನ್ಲೈನ್ ನಡವಳಿಕೆಯನ್ನು ಆಧರಿಸಿದ ಮಾಹಿತಿಯನ್ನು ಬೈಬಲ್ಪ್ರಾಜೆಕ್ಟ್ ಬಳಸಬಾರದು ಎಂದು ನೀವು ಆದ್ಯತೆಗೊಳಿಸಿದರೆ, ಸಂವಹನದಿಂದ ಹೊರಗುಳಿಯುವುದು ಸೂಚನೆಗಳನ್ನು ಪಾಲಿಸುವ ಮೂಲಕ ನೀವು ಆನ್ಲೈನ್ ನಡವಳಿಕೆಯ ಜಾಹೀರಾತಿನಿಂದ ಹೊರಗುಳಿಯಬಹುದು. |
|||||||||||||||||||||||||||
ನಾವು ಮೂರನೇ ಪಕ್ಷದ ಮೂಲಗಳಿಂದ ಸ್ವೀಕರಿಸಿದ ನಿಮ್ಮ ಬಗೆಗಿನ ಇತರೆ ಮಾಹಿತಿಯೊಂದಿಗೆ ನಿಮ್ಮ ಬಗ್ಗೆ ನಾವು ಸೇವೆಗಳ ಮೂಲಕ ಸಂಗ್ರಹಿಸುವ ಮಾಹಿತಿಯನ್ನು ಸಂಯೋಜಿಸಬಹುದು. ಉದಾಹರಣೆಯ ಮೂಲಕ ಮತ್ತು ಇಷ್ಟಕ್ಕೇ ಸೀಮಿತವಲ್ಲದೆ, ನಾವು ನಿಮ್ಮ ಖಾತೆಗೆ ನಮ್ಮ ದಾಖಲೆಗಳು ನಿಖರವಾಗಿವೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ನಾವು ವಿಳಾಸ ಬದಲಾವಣೆ ಅಥವಾ ಇತರೆ ಸೂಚಿ ಸೇವೆಯನ್ನು ಬಳಸಬಹುದಾಗಿದೆ. |
|||||||||||||||||||||||||||
ನಿಮ್ಮ ಮಾಹಿತಿಯನ್ನು ಬಹಿರಂಗಪಡಿಸುವುದು |
|||||||||||||||||||||||||||
ಬೈಬಲ್ಪ್ರಾಜೆಕ್ಟ್ ಯಾವುದೇ ಮೂರನೇ ಪಕ್ಷಕ್ಕೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಮಾರಾಟ ಮಾಡುವುದಿಲ್ಲ. ನಾವು ಸಂಗ್ರಹಿಸುವ ಅಥವಾ ಈ ಗೌಪ್ಯತಾ ನೊಟೀಸಿನಲ್ಲಿ ವಿವರಿಸಲಾದಂತೆ ನೀವು ಒದಗಿಸುವ ವೈಯಕ್ತಿಕ ಮಾಹಿತಿಯನ್ನು ನಾವು ಬಹಿರಂಗಪಡಿಸಬಹುದು: |
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
ಈ ಕೆಳಗಿನವುಗಳಿಗಾಗಿಯೂ ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಬಹುದಾಗಿದೆ: |
|||||||||||||||||||||||||||
|
|||||||||||||||||||||||||||
|
|||||||||||||||||||||||||||
|
|||||||||||||||||||||||||||
ಒಟ್ಟಾರೆ ಮಾಹಿತಿ |
|||||||||||||||||||||||||||
ನಾವು ಯಾವುದೇ ನಿರ್ಬಂಧ ಇಲ್ಲದೆ ಒಟ್ಟಾರೆ ಅಥವಾ ಗುರುತಿನಿಂದ ಪ್ರತ್ಯೇಕಿಸಿರುವ ಮಾಹಿತಿಯನ್ನು ಹಂಚಿಕೊಳ್ಳಬಹುದು. ನಾವು ಹಂಚಿಕೊಳ್ಳುವ ಮಾಹಿತಿಯು ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸುವುದಿಲ್ಲ. ಅದಾಗ್ಯೂ, ಮೂರನೇ ಪಕ್ಷಗಳು ನಿಮ್ಮ ಬಗ್ಗೆ ಹೊಂದಿರುವ ಇತರ ಡೇಟಾದೊಂದಿಗೆ, ಅಥವಾ ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಲು ಅವಕಾಶ ನೀಡುವ ರೀತಿಯಲ್ಲಿ ಇತರ ಮೂರನೇ ಪಕ್ಷಗಳಿಂದ ಅವರು ಸ್ವೀಕರಿಸುವ ಡೇಟಾದೊಂದಿಗೆ ಈ ಒಟ್ಟು ಮಾಹಿತಿಯನ್ನು ಸಂಯೋಜಿಸಲು ಅವರಿಗೆ ಸಾಧ್ಯವಾಗುತ್ತದೆ. |
|||||||||||||||||||||||||||
ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಿಯಂತ್ರಿಸುವುದು |
|||||||||||||||||||||||||||
ಒಂದು ವೇಳೆ ನೀವು ಯೂರೋಪಿಯನ್ ಯೂನಿಯನ್ ನಿವಾಸಿಯಾಗಿದ್ದರೆ, ನೀವು ನಿಮ್ಮ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದಂತೆ ಕೆಲವು ಹೆಚ್ಚುವರಿ ಹಕ್ಕುಗಳನ್ನು ಹೊಂದಿದ್ದೀರಿ. ದಯವಿಟ್ಟು ಶುಲ್ಕರಹಿತ ಸಂಖ್ಯೆ (855) 700-9109 ನಲ್ಲಿ ನಮ್ಮನ್ನು ಸಂಪರ್ಕಿಸುವ ಮೂಲಕ ಅಥವಾ webmaster@jointhebibleproject.com ಗೆ ಇಮೇಲ್ ಮಾಡುವ ಮೂಲಕ ನೀವು ನಿಮ್ಮ ಹಕ್ಕುಗಳನ್ನು ಚಲಾಯಿಸಬಹುದು, ಕಳವಳ ವ್ಯಕ್ತಪಡಿಸಬಹುದು ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯ ಬಳಕೆಗೆ ಸಂಬಂಧಿಸಿ ಹೆಚ್ಚುವರಿ ಮಾಹಿತಿಯನ್ನು ಪಡೆಯಬಹುದು. |
|||||||||||||||||||||||||||
ನಾವು ಸಂಪೂರ್ಣ ಮನವಿಯನ್ನು ಸ್ವೀಕರಿಸಿದ 30 ದಿನಗಳ ಒಳಗಾಗಿ ಈ ಯಾವುದೇ ಹಕ್ಕುಗಳನ್ನು ಚಲಾಯಿಸಲು ನಿಮ್ಮ ಮನವಿಯನ್ನು ಪೂರೈಸುತ್ತೇವೆ. ನೀವು ಆ ಮಾಹಿತಿಯಲ್ಲಿರುವ ಯಾವುದೇ ದೋಷಗಳನ್ನು ಸರಿಪಡಿಸಿಕೊಳ್ಳುವ ಹಕ್ಕನ್ನೂ ಹೊಂದಿರುತ್ತೀರಿ. ನಿಮ್ಮ ವಿನಂತಿಯನ್ನು ಪೂರ್ಣಗೊಳಿಸುವುದಕ್ಕೆ ಮೊದಲು ನಿಮ್ಮ ಗುರುತು ದೃಢೀಕರಿಸಿಕೊಳ್ಳುವುದು ಬೈಬಲ್ಪ್ರಾಜೆಕ್ಟ್ಗೆ ಕಾನೂನಿನ ಅನುಸಾರ ಅಗತ್ಯವಾಗಿದ್ದು, ಇದರಲ್ಲಿ ನಿಮ್ಮ ಕುರಿತ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸುವುದು ಸೇರಿರಬಹುದು ಎನ್ನುವುದನ್ನು ದಯವಿಟ್ಟು ಗಮನಿಸಿ. |
|||||||||||||||||||||||||||
BibleProject 501 SE 14th Avenue Portland, OR 97214 ಇಲ್ಲಿಗೆ ಅಂಚೆ ಮೂಲಕ |
|||||||||||||||||||||||||||
ಕ್ಯಾಲಿಫೊರ್ನಿಯಾ ಗೌಪ್ಯತಾ ಹಕ್ಕುಗಳು |
|||||||||||||||||||||||||||
ಏಕೆಂದರೆ ಬೈಬಲ್ಪ್ರಾಜೆಕ್ಟ್ ತನ್ನ ಷೇರುದಾರರು ಅಥವಾ ಇತರೆ ಮಾಲೀಕರ ಲಾಭ ಅಥವಾ ಹಣಕಾಸು ಪ್ರಯೋಜನಕ್ಕಾಗಿ ಸಂಘಟಿತವಾಗಿಲ್ಲ ಅಥವಾ ಕಾರ್ಯಾಚರಿಸಲ್ಪಡುವುದಿಲ್ಲ, ನಾವು ಕ್ಯಾಲಿಫೊರ್ನಿಯಾ ಗ್ರಾಹಕರ ಗೌಪ್ಯತಾ ಕಾಯಿದೆಯ ("ಸಿಸಿಪಿಎ"; ಸಿಎ ಸಿವಿಲ್ ಕೋಡ್ ಸೆಕ್ಷನ್ಗಳು 1798.100 - 1798.199) ಅನುಸರಣೆಯಿಂದ ವಿನಾಯಿತಿ ಹೊಂದಿದ್ದೇವೆ. ಆದರೂ ಸೇವಾ ಪೂರೈಕೆದಾರರು ಮತ್ತು ಇತರೆ ಮೂರನೇ ಪಕ್ಷಗಳೊಂದಿಗೆ ನಮ್ಮ ಕೆಲವು ಒಪ್ಪಂದಗಳು ಸಿಸಿಪಿಎ ಯೊಂದಿಗೆ ನಾವು ಬದ್ದವಾಗಿರುವುದನ್ನು ಅಗತ್ಯವಾಗಿಸಬಹುದು. ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ನಮ್ಮ ವೆಬ್ಸೈಟ್ ಬಳಕೆದಾರರು ಅವರ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿ ಕೆಲವು ಹಕ್ಕುಗಳನ್ನು ಹೊಂದಿರಬಹುದು, ಉದಾಹರಣೆಗೆ ಈ ಮುಂದಿನ ಹಕ್ಕುಗಳು (a) ನಾವು ಸಂಗ್ರಹಿಸಿದ ವೈಯಕ್ತಿಕ ಮಾಹಿತಿಯ ವರ್ಗವನ್ನು, ಮತ್ತು ಆ ಮಾಹಿತಿಯನ್ನು ಮೂರನೇ ಪಕ್ಷಕ್ಕೆ ಮಾರಾಟ ಮಾಡಲಾಗಿದೆಯೇ ಎನ್ನುವುದನ್ನು ವಿವರಿಸುವ ಮಾಹಿತಿಯನ್ನು ಸ್ವೀಕರಿಸುವ ಹಕ್ಕು; (ಬಿ) ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಹಂಚಿಕೊಂಡ ಮೂರನೇ ಪಕ್ಷಗಳ ವರ್ಗಗಳ ಪಟ್ಟಿಯನ್ನು ಸ್ವೀಕರಿಸುವ ಹಕ್ಕು; (ಸಿ) ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಮಾರಾಟ ಮಾಡಿದರೆ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಮೂರನೇ ಪಕ್ಷಗಳಿಗೆ ಮಾರಾಟ ಮಾಡದಂತೆ ನಮಗೆ ಸೂಚಿಸುವ ಹಕ್ಕು; ಮತ್ತು (ಡಿ) ನಿಮ್ಮ ಗೌಪ್ಯತೆಯ ಹಕ್ಕುಗಳನ್ನು ನೀವು ಚಲಾಯಿಸಿದರೆ ಅದರ ಪರಿಗಣನೆಯಿಲ್ಲದೆ ಸಮಾನ ಸೇವೆಯನ್ನು ಸ್ವೀಕರಿಸುವ ಹಕ್ಕು. |
|||||||||||||||||||||||||||
ಹೆಚ್ಚುವರಿಯಾಗಿ, ನಾವು ನಮ್ಮ ಅಂಗಸಂಸ್ಥೆಗಳು ಮತ್ತು/ಅಥವಾ ಮೂರನೇ ಪಕ್ಷಗಳೊಂದಿಗೆ ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ಹಂಚಿಕೊಳ್ಳುವ ವೈಯಕ್ತಿಕ ಮಾಹಿತಿಯ ವರ್ಗಗಳನ್ನು ಗುರುತಿಸುವ ನೊಟೀಸಿಗಾಗಿ ನಮ್ಮನ್ನು ಕೇಳಲು ಕ್ಯಾಲಿಫೋರ್ನಿಯಾ ನಿವಾಸಿಗಳಿಗೆ ಕ್ಯಾಲಿಫೋರ್ನಿಯಾ ನಾಗರಿಕ ಸಂಹಿತೆಯ ವಿಭಾಗಗಳಾದ 1798.83-1798.84 ಅವಕಾಶ ಕಲ್ಪಿಸುತ್ತವೆ ಮತ್ತು ಅಂತಹ ಅಂಗಸಂಸ್ಥೆಗಳು ಮತ್ತು/ಅಥವಾ ಮೂರನೇ ಪಕ್ಷಗಳಿಗಾಗಿ ಸಂಪರ್ಕ ಮಾಹಿತಿಯನ್ನು ಒದಗಿಸುತ್ತದೆ. |
|||||||||||||||||||||||||||
ಒಂದು ವೇಳೆ ನೀವು ಕ್ಯಾಲಿಫೋರ್ನಿಯಾ ನಿವಾಸಿಯಾಗಿದ್ದರೆ ಮತ್ತು ಈ ಗೌಪ್ಯತೆ ನೊಟೀಸಿನ ಒಂದು ಪ್ರತಿಗೆ ಮನವಿ ಮಾಡಲು ಬಯಸಿದರೆ ಅಥವಾ ಅನ್ವಯವಾಗುವ ಕ್ಯಾಲಿಫೋರ್ನಿಯಾ ಕಾನೂನಿನ ಅಡಿಯಲ್ಲಿ ನಿಮಗೆ ಲಭ್ಯವಿರುವ ಹಕ್ಕುಗಳನ್ನು ಚಲಾಯಿಸಲು ನೀವು ಬಯಸಿದರೆ, ದಯವಿಟ್ಟು ನಮ್ಮ ಶುಲ್ಕರಹಿತ ಸಂಖ್ಯೆ (855) 700-9109 ಕ್ಕೆ ಕರೆ ಮಾಡಿ ಅಥವಾ "ಕ್ಯಾಲಿಫೋರ್ನಿಯಾ ಗೌಪ್ಯತೆ ಮಾಹಿತಿಗಾಗಿ ಮನವಿ" ಎಂಬ ವಿಷಯ ಸಾಲಿನೊಂದಿಗೆ ನಮ್ಮ webmaster@jointhebibleproject.com ವಿಳಾಸಕ್ಕೆ ಇ-ಮೇಲ್ ಕಳುಹಿಸಿ |
|||||||||||||||||||||||||||
ಸಂವಹನಗಳಿಂದ ಹೊರಗುಳಿಯುವುದು |
|||||||||||||||||||||||||||
ನೀವು ನಮ್ಮೊಂದಿಗೆ ಸಂವಾದ ನಡೆಸಲು ಬಯಸಿದರೆ ಮಾತ್ರ ನಿಮ್ಮೊಂದಿಗೆ ನಾವು ಸಂವಹನ ಮಾಡಲು ಬಯಸುತ್ತೇವೆ. ನೀವು ನಮ್ಮ ಯಾವುದೇ ಇಮೇಲ್ಗಳ ಕೆಳಭಾಗದಲ್ಲಿರುವ "ಅನ್ಸಬ್ಸ್ಕ್ರೈಬ್" ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಬೈಬಲ್ಪ್ರಾಜೆಕ್ಟ್ ಕಳುಹಿಸುವ ಸಂವಹನಗಳನ್ನು ಮಾರ್ಪಡಿಸಬಹುದು ಅಥವಾ ಮಿತಿಗೊಳಿಸಬಹುದು. ನೀವು (855) 700-9109 ಗೆ ಕರೆಮಾಡುವ ಮೂಲಕ ನೇರವಾಗಿ ಅಥವಾ webmaster@jointhebibleproject.com ವಿಳಾಸಕ್ಕೆ ಇಮೇಲ್ ಮಾಡುವ ಮೂಲಕ ನಮ್ಮನ್ನು ಸಂಪರ್ಕಿಸಬಹುದು ದಯವಿಟ್ಟು ನಿಮ್ಮ ಪೂರ್ಣ ಹೆಸರು, ಇಮೇಲ್ ವಿಳಾಸ, ಮೇಲಿಂಗ್ ವಿಳಾಸ ಮತ್ತು ನಿರ್ದಿಷ್ಟವಾಗಿ ನೀವು ಸ್ವೀಕರಿಸಲು ಬಯಸದಿರುವ ಮಾಹಿತಿ ಯಾವುದು ಎನ್ನುವುದನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ. ನೀವು ಬಯಸಿದರೆ, ನಮಗೆ ನಿಮ್ಮ ಸಂದೇಶದಲ್ಲಿ ಈ ಕೆಳಗಿನ ಹೇಳಿಕೆಗಳಲ್ಲಿ ಒಂದನ್ನು ನೀವು ಬಳಸಬಹುದು: |
|||||||||||||||||||||||||||
|
|||||||||||||||||||||||||||
ಉತ್ಪನ್ನಗಳು ಮತ್ತು ಸೇವೆಗಳು, ವಿಶೇಷ ಪ್ರೊಮೊಷನ್ಗಳು ಅಥವಾ ಮುಂಬರುವ ಈವೆಂಟ್ಗಳಿಗೆ ಸಂಬಂಧಿಸಿದ ಆವರ್ತಕ ಕ್ಯಾಟಲಾಗ್ಗಳು ಮತ್ತು ಮೇಲಿಂಗ್ಗಳಂತಹ ನೇರ ಮೇಲ್ ಜಾಹೀರಾತುಗಳನ್ನು ಸ್ವೀಕರಿಸದಿರಲು ನಾನು ಬಯಸುತ್ತೇನೆ. |
|||||||||||||||||||||||||||
ಟ್ರ್ಯಾಕ್ ಮಾಡಬೇಡಿ ಸಂಕೇತಗಳು |
|||||||||||||||||||||||||||
ಟ್ರ್ಯಾಕ್ ಮಾಡಬೇಡಿ ಎಂಬುದು ತಮ್ಮ ವೆಬ್ ಬ್ರೌಸರ್ಗಳಲ್ಲಿ ಬಳಕೆದಾರರು ಸೆಟ್ ಮಾಡಬಹುದಾದ ಗೌಪ್ಯತೆಯ ಆದ್ಯತೆಯಾಗಿದೆ. ಬಳಕೆದಾರನು ಟ್ರ್ಯಾಕ್ ಮಾಡಬೇಡಿ ಸಂಕೇತವನ್ನು ಆನ್ ಮಾಡಿದಾಗ, ಬಳಕೆದಾರನನ್ನು ಟ್ರ್ಯಾಕ್ ಮಾಡಬೇಡಿ ಎಂಬ ಮನವಿಯನ್ನು ಒಳಗೊಂಡ ಸಂದೇಶವನ್ನು ವೆಬ್ಸೈಟ್ಗಳಿಗೆ ಬ್ರೌಸರ್ ಕಳುಹಿಸುತ್ತದೆ. ಟ್ರ್ಯಾಕ್ ಮಾಡಬೇಡಿ ಬಗ್ಗೆ ಮಾಹಿತಿಗಾಗಿ, ಇಲ್ಲಿಗೆ ಭೇಟಿಕೊಡಿ www.allaboutdnt.org. ಸದ್ಯಕ್ಕೆ, thebibleproject.com ಟ್ರ್ಯಾಕ್ ಮಾಡಬೇಡಿ ಬ್ರೌಸರ್ ಸೆಟ್ಟಿಂಗ್ಗಳಿಗೆ ಅಥವಾ ಸಂಕೇತಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಹೆಚ್ಚುವರಿಯಾಗಿ, ನಾವು ನಮ್ಮ ವೆಬ್ಸೈಟ್ಗಳ ಸಂದರ್ಶಕರನ್ನು ಟ್ರ್ಯಾಕ್ ಮಾಡಲು ಇಂಟರ್ನೆಟ್ಗೆ ಪ್ರಮಾಣಿತವಾಗಿರುವ ಇತರ ತಂತ್ರಜ್ಞಾನಗಳನ್ನು ಬಳಸಬಹುದು. ನೀವು ಟ್ರ್ಯಾಕ್ ಮಾಡಬೇಡಿ ಸಂಕೇತವನ್ನು ಆನ್ ಮಾಡಿದ್ದರೂ ಸಹ, ನಿಮ್ಮ ಹಾಗೂ ನಿಮ್ಮ ಇಂಟರ್ನೆಟ್ ಚಟುವಟಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ನಾವು ಹಾಗೂ ಮೂರನೇ ಪಕ್ಷಗಳು ಆ ಪರಿಕರಗಳನ್ನು ಬಳಸಬಹುದು. |
|||||||||||||||||||||||||||
U.S. ಗೌಪ್ಯತಾ ಕಾನೂನುಗಳು |
|||||||||||||||||||||||||||
ಈ ವೆಬ್ಸೈಟ್ ಯುನೈಟೆಡ್ ಸ್ಟೇಟ್ಸ್ನ ಮಾಲೀಕತ್ವದ್ದಾಗಿದೆ ಮತ್ತು ಅಲ್ಲಿಂದ ಕಾರ್ಯಾಚರಿಸಲ್ಪಡುತ್ತದೆ. ನೀವು ವೆಬ್ಸೈಟ್ ಅನ್ನು ಯುನೈಟೆಡ್ ಸ್ಟೇಟ್ಸ್ನ ಹೊರಗಿನಿಂದ ಪ್ರವೇಶಿಸಿದರೆ, ನಿಮ್ಮ ಬಗ್ಗೆ ನಾವು ಸಂಗ್ರಹಿಸುವ ಯಾವುದೇ ಮಾಹಿತಿಯನ್ನು ಯುನೈಟೆಡ್ ಸ್ಟೇಟ್ಸ್ ಒಳಗಿರುವ ಸರ್ವರ್ಗಳಿಗೆ ವರ್ಗಾಯಿಸಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್ನಲ್ಲಿರುವ ಗೌಪ್ಯತಾ ಕಾನೂನುಗಳು ನಿಮ್ಮ ಕಾನೂನುವ್ಯಾಪ್ತಿಯಲ್ಲಿ ಇರುವಷ್ಟು ರಕ್ಷಣಾತ್ಮಕವಾಗಿಲ್ಲದಿರಬಹುದು. ನಿಮ್ಮ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ನಮಗೆ ಅನುಮತಿಸುವ ಮೂಲಕ, ನೀವು ಈ ಗೌಪ್ಯತಾ ನೊಟೀಸಿನಲ್ಲಿ ವಿವರಿಸಲಾಗಿರುವಂತೆ ಅಂತಹ ನಿಮ್ಮ ವೈಯಕ್ತಿಕ ಮಾಹಿತಿಯ ವರ್ಗಾವಣೆ ಮತ್ತು ಪ್ರಕ್ರಿಯೆಗೊಳಿಸುವಿಕೆಗೆ ನೀವು ಒಪ್ಪುತ್ತೀರಿ. |
|||||||||||||||||||||||||||
ಡೇಟಾ ಭದ್ರತೆ |
|||||||||||||||||||||||||||
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಆಕಸ್ಮಿಕ ನಷ್ಟದಿಂದ ಮತ್ತು ಅನಧಿಕೃತ ಪ್ರವೇಶ, ಬಳಕೆ, ಬದಲಾವಣೆ ಮತ್ತು ಬಹಿರಂಗಪಡಿಸುವಿಕೆಯಿಂದ ಸುರಕ್ಷಿತಗೊಳಿಸಲು ನಾವು ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲಿಯೂ ವಾಣಿಜ್ಯಿಕವಾಗಿ ಸಮಂಜಸವಾದ ಕ್ರಮಗಳನ್ನು ಜಾರಿಗೊಳಿಸಿದ್ದೇವೆ. ನಿಮ್ಮ ಸಾರ್ವಜನಿಕವಲ್ಲದ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ನಾವು ಭೌತಿಕ, ಎಲೆಕ್ಟ್ರಾನಿಕ್ ಮತ್ತು ಕಾರ್ಯವಿಧಾನದ ಭದ್ರತಾ ಕ್ರಮಗಳನ್ನು ನಿರ್ವಹಣೆ ಮಾಡುತ್ತೇವೆ. ಈ ಸುರಕ್ಷತಾ ಕ್ರಮಗಳು ನಿಮ್ಮ ವೈಯಕ್ತಿಕ ಮಾಹಿತಿಯಿಂದ ಸಂಪರ್ಕ ಮಾಹಿತಿಯವರೆಗಿನ ನಮ್ಮ ಇನ್-ಹೌಸ್ ದಾಸ್ತಾನು ಮಾಡುವಿಕೆಯನ್ನು ಮಿತಿಗೊಳಿಸುವುದು, ಮತ್ತು ಉದ್ಯಮ ಮಾನದಂಡದ ಎನ್ಕ್ರಿಪ್ಶನ್ನೊಂದಿಗೆ ಡೇಟಾವನ್ನು ಸುರಕ್ಷಿತಗೊಳಿಸುವುದನ್ನು ಒಳಗೊಂಡಿವೆ. ಪಾವತಿ ಮತ್ತು ಹಣಕಾಸು ಮಾಹಿತಿಯು ಪಾವತಿ ಕಾರ್ಡ್ ಉದ್ಯಮ ಡೇಟಾ ಭದ್ರತೆ ಮಾನದಂಡಗಳಿಗೆ ಅನುಸರಣೆ ಹೊಂದಿರುವ ಹೋಸ್ಟಿಂಗ್ ಪ್ರೊವೈಡರ್ನಲ್ಲಿ ಹೋಸ್ಟ್ ಮಾಡಲ್ಪಡುತ್ತದೆ. ದಾಸ್ತಾನು ಮತ್ತು ನಿರ್ವಹಣೆ ಮಾಡಲು ಅಂತಾರಾಷ್ಟ್ರೀಯ ಭದ್ರತಾ ಮಾನದಂಡಗಳನ್ನು ಪೂರೈಸುವ ಸೇವಾ ಪೂರೈಕೆದಾರರಿಗೆ ಸುರಕ್ಷತಾ ಟೋಕನ್ನೊಂದಿಗೆ ಇತರ ಎಲ್ಲ ವೈಯಕ್ತಿಕ ಮಾಹಿತಿಯನ್ನು ನಾವು ಪ್ರಸರಣ ಮಾಡುತ್ತೇವೆ. ನಾವು ನಿಮ್ಮಕುರಿತು ನಾವು ಹೊಂದಿರುವ ಮಾಹಿತಿಯ ರಕ್ಷಣೆಯನ್ನು ಸುಧಾರಿಸಲು ಮತ್ತು ಆ ಮಾಹಿತಿಯ ಸಮಗ್ರತೆಯನ್ನು ಖಚಿತಪಡಿಸಲು ನಮ್ಮ ತಂತ್ರಜ್ಞಾನವನ್ನು ಪರಿಷ್ಕರಿಸುತ್ತೇವೆ ಮತ್ತು ಪರೀಕ್ಷಿಸುತ್ತೇವೆ. |
|||||||||||||||||||||||||||
ನಿಮ್ಮ ಮಾಹಿತಿಯ ಸುರಕ್ಷತೆ ಮತ್ತು ಭದ್ರತೆಯು ನಿಮ್ಮ ಮೇಲೂ ಅವಲಂಬಿತವಾಗಿರುತ್ತದೆ. ನಮ್ಮ ವೆಬ್ಸೈಟ್ನ ಕೆಲವು ಭಾಗಗಳಿಗೆ ಪ್ರವೇಶಕ್ಕಾಗಿ ನಾವು ನಿಮಗೆ ಪಾಸ್ವರ್ಡ್ ನೀಡಿದ್ದಲ್ಲಿ (ಅಥವಾ ನೀವು ಆಯ್ಕೆ ಮಾಡಿಕೊಂಡಿದ್ದಲ್ಲಿ), ಈ ಪಾಸ್ವರ್ಡ್ ಅನ್ನು ಗೌಪ್ಯವಾಗಿಡುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ನಿಮ್ಮ ಪಾಸ್ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ನಾವು ನಿಮಗೆ ಸೂಚಿಸುತ್ತೇವೆ. ಜೊತೆಗೆ, ನಿಮ್ಮ ಭೇಟಿಯನ್ನು ಮುಗಿಸಿದಾಗ ನಿಮ್ಮ ಖಾತೆಯನ್ನು ಲಾಗ್ ಆಫ್ ಮಾಡಲು ಮತ್ತು ನಿಮ್ಮ ಬ್ರೌಸರ್ ವಿಂಡೋವನ್ನು ಮುಚ್ಚಲು ಮರೆಯದಿರಿ. ಇದು ವಿಶೇಷವಾಗಿ ನೀವು ಕಂಪ್ಯೂಟರ್ ಅನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳುತ್ತಿದ್ದರೆ ಅಥವಾ ಕಂಪ್ಯೂಟರ್ ಅನ್ನು ಸಾರ್ವಜನಿಕ ಸ್ಥಳದಲ್ಲಿ ಬಳಸುತ್ತಿದ್ದರೆ, ಇತರರು ನಿಮ್ಮ ಖಾತೆಯನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳುವುದಕ್ಕಾಗಿ ಆಗಿರುತ್ತದೆ. ಎಲ್ಲಾ ಇಂಟರ್ನೆಟ್ ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿಯ ನಿರ್ವಹಣೆ ಮತ್ತು ಬಹಿರಂಗಪಡಿಸುವಿಕೆ ಬಗ್ಗೆ ಕಾಳಜಿ ವಹಿಸಬೇಕು. ಬಳಕೆದಾರ ಉತ್ಪಾದಿತ ವಿಷಯ ಮತ್ತು ನೀವು ಸಾರ್ವಜನಿಕ ವಲಯದಲ್ಲಿ ಹಂಚಿಕೊಂಡ ಇತರೆ ಮಾಹಿತಿಯನ್ನು ವೆಬ್ಸೈಟ್ನ ಯಾವುದೇ ಬಳಕೆದಾರನಿಂದ ವೀಕ್ಷಿಸಬಹುದು. |
|||||||||||||||||||||||||||
ದುರಾದೃಷ್ಟವಶಾತ್, ಇಂಟರ್ನೆಟ್ ಮೂಲಕ ಮಾಹಿತಿಯ ಪ್ರಸರಣವು ಸಂಪೂರ್ಣವಾಗಿ ಸುಭದ್ರವಾಗಿರುವುದಿಲ್ಲ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡಿದರೂ ಸಹ, ನಮ್ಮ ವೆಬ್ಸೈಟ್ಗೆ ರವಾನಿಸಲಾದ ನಿಮ್ಮ ವೈಯಕ್ತಿಕ ಮಾಹಿತಿಯ ಭದ್ರತೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ ಅಥವಾ ಅನಧಿಕೃತ ಮೂರನೇ ಪಕ್ಷಗಳು ನಮ್ಮ ಭದ್ರತಾ ಕ್ರಮಗಳನ್ನು ವಿಫಲಗೊಳಿಸುವುದಿಲ್ಲ ಅಥವಾ ಅನುಚಿತ ಉದ್ದೇಶಗಳಿಗಾಗಿ ಸಾರ್ವಜನಿಕವಲ್ಲದ ವೈಯಕ್ತಿಕ ಮಾಹಿತಿಯನ್ನು ಬಳಸುವುದಿಲ್ಲ ಎಂದು ನಾವು ಖಾತರಿ ನೀಡಲು ಸಾಧ್ಯವಿಲ್ಲ. ವೈಯಕ್ತಿಕ ಮಾಹಿತಿಯ ಯಾವುದೇ ಪ್ರಸಾರವು ನಿಮ್ಮ ಸ್ವಂತ ಅಪಾಯದಲ್ಲಿರುತ್ತದೆ. ವೆಬ್ಸೈಟ್ನಲ್ಲಿ ಇರುವ ಯಾವುದೇ ಗೌಪ್ಯತಾ ಸೆಟ್ಟಿಂಗ್ಗಳು ಅಥವಾ ಭದ್ರತಾ ಕ್ರಮಗಳಿಂದ ಪಾರಾಗಲು ನಾವು ಜವಾಬ್ದಾರವಾಗಿರುವುದಿಲ್ಲ. ಗುರುತು ಕಳ್ಳತನದ ವಿರುದ್ದ ನಿಮ್ಮನ್ನು ರಕ್ಷಿಸಿಕೊಳ್ಳಲು ಹೇಗೆ ಸಹಾಯಕವಾಗುತ್ತದೆ ಎಂಬ ಬಗೆಗಿನ ಮಾಹಿತಿಗಾಗಿ ಫೆಡರಲ್ ಟ್ರೇಡ್ ಕಮಿಷನ್ನಿನ ವೆಬ್ಸೈಟ್ ಅನ್ನು ದಯವಿಟ್ಟು ನೋಡಿ. |
|||||||||||||||||||||||||||
ಮೂರನೇ ಪಕ್ಷದ ವೆಬ್ಸೈಟ್ಗಳು ಮತ್ತು ಜಾಹೀರಾತು |
|||||||||||||||||||||||||||
ಈ ಗೌಪ್ಯತಾ ನೊಟೀಸು ಬೈಬಲ್ಪ್ರಾಜೆಕ್ಟ್ನಿಂದ ಸಂಗ್ರಹಿಸಲ್ಪಟ್ಟ ಮಾಹಿತಿಗೆ ಮಾತ್ರ ಅನ್ವಯವಾಗುತ್ತದೆ. ನಮ್ಮ ವೆಬ್ಸೈಟ್ನಿಂದ ನಮ್ಮ ಬಳಕೆದಾರರಿಗೆ ಸೇವೆಯಾಗಿ ನಾವು ಮೂರನೇ ಪಕ್ಷದ ವೆಬ್ಸೈಟ್ಗಳಿಗೆ ಲಿಂಕ್ಗಳನ್ನು ಒದಗಿಸಬಹುದು, ಆದರೆ ನಮಗೆ ನಿಯಂತ್ರಿಸುವ ಸಾಮರ್ಥ್ಯವಿಲ್ಲ, ಮತ್ತು ಮೂರನೇ ಪಕ್ಷದ ವೆಬ್ಸೈಟ್ಗಳ ಗೌಪ್ಯತೆ ಮತ್ತು ಡೇಟಾ ಸಂಗ್ರಹಣೆ, ಬಳಕೆ ಮತ್ತು ಬಹಿರಂಗಪಡಿಸುವಿಕೆಯ ಪದ್ದತಿಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ. ನಿಮ್ಮನ್ನು ಹೊರಗಿನ ವೆಬ್ಸೈಟ್ಗಳಿಗೆ ಕೊಂಡೊಯ್ಯುವ ಲಿಂಕ್ಗಳ ಮೇಲೆ ನೀವು ಕ್ಲಿಕ್ ಮಾಡಿದಾಗ, ನೀವು ಅವರ ಗೌಪ್ಯತಾ ನೊಟೀಸುಗಳು ಮತ್ತು ಪದ್ದತಿಗಳಿಗೆ ಒಳಪಡುತ್ತೀರಿ, ನಮ್ಮ ನೀತಿಗಳಿಗಲ್ಲ. ನಾವು ಯಾವುದೇ ಮಾಹಿತಿಯನ್ನು ಅವರಿಗೆ ಒದಗಿಸುವುದಕ್ಕೆ ಮುಂಚೆ ಅಂತಹ ವೆಬ್ಸೈಟ್ಗಳ ಗೌಪ್ಯತಾ ನೊಟೀಸುಗಳನ್ನು ಪರಿಶೀಲಿಸಬೇಕೆಂದು ಮತ್ತು ಅರ್ಥಮಾಡಿಕೊಳ್ಳಬೇಕೆಂದು ನಾವು ಪ್ರೋತ್ಸಾಹಿಸುತ್ತೇವೆ. |
|||||||||||||||||||||||||||
ಬಳಕೆಯ ನಿಯಮಗಳು |
|||||||||||||||||||||||||||
ಈ ವೆಬ್ಸೈಟ್ನ ಬಳಕೆಯ ನಿಯಮಗಳು ಈ ಗೌಪ್ಯತಾ ನೊಟೀಸಿನಲ್ಲಿ ಹೇಳಲಾಗಿಲ್ಲದ ಎಲ್ಲಾ ವಿಷಯಗಳನ್ನು ನಿಯಂತ್ರಿಸುತ್ತವೆ. ನೀವು ನಮ್ಮ ಬಳಕೆಯ ನಿಯಮಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕೆಂದು ನಾವು ಪ್ರೋತ್ಸಾಹಿಸುತ್ತೇವೆ. |
|||||||||||||||||||||||||||
ನಮ್ಮ ಗೌಪ್ಯತಾ ನೀತಿಗೆ ಬದಲಾವಣೆಗಳು |
|||||||||||||||||||||||||||
ಅದರ ನಿಖರತೆಯನ್ನು ಖಾತರಿಪಡಿಸಿಕೊಳ್ಳಲು ಕಾಲಕಾಲಕ್ಕೆ ಈ ಗೌಪ್ಯತಾ ನೊಟೀಸನ್ನು ನಾವು ಬದಲಾಯಿಸಬಹುದು. ನಾವು ಬದಲಾವಣೆಗಳನ್ನು ಮಾಡಿದರೆ, ಪರಿಷ್ಕೃತ ನೊಟೀಸನ್ನು ಈ ಪುಟದಲ್ಲಿ ಪೋಸ್ಟ್ ಮಾಡಲಾಗುತ್ತದೆ. ಈ ಗೌಪ್ಯತಾ ನೊಟೀಸಿಗೆ ಬದಲಾವಣೆಗಳನ್ನು ಪೋಸ್ಟ್ ಮಾಡಿದ ನಂತರ ನಮ್ಮ ವೆಬ್ಸೈಟ್ ಅಥವಾ ಇತರೆ ಸೇವೆಗಳ ನಿಮ್ಮ ಮುಂದುವರಿದ ಬಳಕೆಯು ನೀವು ಈ ಬದಲಾವಣೆಗಳನ್ನು ಒಪ್ಪಿಕೊಂಡಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಕೆಲವೊಂದು ಸಂದರ್ಭಗಳಲ್ಲಿ, ಸಂಗ್ರಹಣೆಯ ಸಮಯದಲ್ಲಿ ಹೇಳಲಾಗಿದ್ದಕ್ಕಿಂತಲೂ ಭಿನ್ನವಾದ ರೀತಿಯಲ್ಲಿ ನಿಮ್ಮ ಮಾಹಿತಿಯನ್ನು ನಾವು ಬಳಸುವ ಬಗ್ಗೆ ನಿಮಗೆ ಆಯ್ಕೆಗಳನ್ನು ನೀಡುವುದಕ್ಕಾಗಿ, ನೀವು ಒದಗಿಸಿದ ಸಂಪರ್ಕ ಮಾಹಿತಿಯನ್ನು ಬಳಸಿಕೊಂಡು ನಾವು ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಬಹುದು. ನೊಟೀಸಿನ ಪ್ರಸ್ತುತ ವ್ಯಾಪ್ತಿಯನ್ನು ನಿರ್ಧರಿಸಲು ದಯವಿಟ್ಟು ನೀವು ವಿಶೇಷವಾಗಿ ನಮಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಒದಗಿಸುವ ಮುಂಚೆಯೇ ಆಗಾಗ್ಗೆ ಪರಿಶೀಲಿಸಿ. |
|||||||||||||||||||||||||||
ಅನಧಿಕೃತ ಬಳಕೆ |
|||||||||||||||||||||||||||
ಮಕ್ಕಳ ಮಾಹಿತಿ ಸೇರಿದಂತೆ, ಬೈಬಲ್ಪ್ರಾಜೆಕ್ಟ್ಗೆ ಮಾಹಿತಿಯ ಯಾವುದೇ ಅನಧಿಕೃತ ಸಲ್ಲಿಕೆಯ ಬಗ್ಗೆ ನಿಮಗೆ ತಿಳಿದಿದ್ದರೆ, ದಯವಿಟ್ಟು ಈ ಕೆಳಗೆ ಪಟ್ಟಿ ಮಾಡಲಾಗಿರುವ ಸಂಪರ್ಕ ಮಾಹಿತಿಯಲ್ಲಿ ನಮ್ಮನ್ನು ಸಂಪರ್ಕಿಸುವ ಮೂಲಕ ಮಾಹಿತಿ ನೀಡಿ, ಇದರಿಂದ ನಾವು ಅದನ್ನು ಅಳಿಸಬಹುದು. |
|||||||||||||||||||||||||||
ಸಂಪರ್ಕ ಮಾಹಿತಿ |
|||||||||||||||||||||||||||
ನಿಮ್ಮ ವೈಯಕ್ತಿಕ ಮಾಹಿತಿಯ ಮೇಲೆ ನಿಮ್ಮ ಯಾವುದೇ ಹಕ್ಕುಗಳನ್ನು ಚಲಾಯಿಸುವುದಕ್ಕಾಗಿ, ನಮ್ಮ ಸಂಗ್ರಹಣೆಯ ಬಗ್ಗೆ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮತ್ತು ಈ ಗೌಪ್ಯತೆಯ ನೊಟೀಸು ಮತ್ತು ನಮ್ಮ ಗೌಪ್ಯತೆಯ ಅಭ್ಯಾಸಗಳ ಬಗ್ಗೆ ಕಾಮೆಂಟ್ ಮಾಡಿ, ನಮ್ಮನ್ನು ಸಂಪರ್ಕಿಸಿ: |
|||||||||||||||||||||||||||
ಶುಲ್ಕರಹಿತ ಸಂಖ್ಯೆ: (855) 700-9109 |
|||||||||||||||||||||||||||
ಇ-ಮೇಲ್: webmaster@bibleproject.com |